ಹೂಕೋಸುಗಳಲ್ಲಿ ಅಡಗಿಡುವ ಹುಳಗಳನ್ನು ಈಸಿಯಾಗಿ ತೆಗೆದುಹಾಕಲು ಈ ಕ್ಲೀನಿಂಗ್‌ ಟಿಪ್ಸ್‌ ಅನುಸರಿಸಿ

ಹೂಕೋಸುಗಳಲ್ಲಿ ಸಣ್ಣ ಸಣ್ಣ ಕೀಟಗಳು, ಹುಳಗಳು ಇರುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಇವುಗಳು ಹೋಗುವುದೇ ಇಲ್ಲ. ಹಾಗಾಗಿ ಹೂಕೋಸನ್ನು ಸ್ವಚ್ಛಗೊಳಿಸುವುದು ತುಂಬಾನೇ ಕಷ್ಟಕರ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದನ್ನು ಕ್ಲೀನ್‌ ಮಾಡೋದು ಅಷ್ಟೇನು ಕಷ್ಟಕರ ಅಲ್ವೇ ಅಲ್ಲ. ಕೆಲವೊಂದು ಸರಳ ವಿಧಾನಗಳ ಮೂಲಕ ಹುಳುಗಳನ್ನು ತೆಗೆದುಹಾಕಿ ಹೂಕೋಸನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.

ಹೂಕೋಸುಗಳಲ್ಲಿ ಅಡಗಿಡುವ ಹುಳಗಳನ್ನು ಈಸಿಯಾಗಿ ತೆಗೆದುಹಾಕಲು ಈ ಕ್ಲೀನಿಂಗ್‌ ಟಿಪ್ಸ್‌ ಅನುಸರಿಸಿ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Nov 22, 2026 | 5:39 PM

ಹೂಕೋಸು (cauliflower) ಬಹಳ ರುಚಿಕರವಾದ ತರಕಾರಿ. ಇದನ್ನು ಬಹುತೇಕ ಎಲ್ಲರೂ ಸಹ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಆದರೆ ಇದನ್ನು ಸ್ವಚ್ಛಗೊಳಿಸುವುದೇ ಅನೇಕರಿಗೆ ದೊಡ್ಡ ತಲೆನೋವು.  ಹೂಕೋಸುಗಳ ದಟ್ಟವಾದ ವಿನ್ಯಾಸದ ಕಾರಣದಿಂದಾಗಿ ಇವುಗಳಲ್ಲಿ ಕೀಟ, ಹುಳುಗಳು ಯಥೇಚ್ಚವಾಗಿ ಇರುತ್ತವೆ. ಎಷ್ಟೇ ತೊಳೆದರೂ ಸಹ ಈ ಸಣ್ಣ ಹುಳುಗಳು ಹಾಗೆಯೇ ಉಳಿದು ಬಿಡುತ್ತವೆ. ಇದೇನಾದರೂ ದೇಹ ಸೇರಿದರೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೂಕೋಸುಗಳನ್ನು ಸರಿಯಾಗಿ ಕ್ಲೀನ್‌ ಮಾಡುವುದು ತುಂಬಾನೇ ಮುಖ್ಯ. ಇದೇನು ಕಷ್ಟಕರ ಕೆಲಸವಲ್ಲ, ಸರಳ ವಿಧಾನಗಳ ಮೂಲಕ ಹುಳಗಳನ್ನು ತೆಗೆದುಹಾಕಿ ಹೂಕೋಸನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.

ಹೂಕೋಸು ಕ್ಲೀನ್‌ ಮಾಡುವ ವಿಧಾನ:

ಎಲೆಗಳು ಮತ್ತು ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕಿ:

ಮೊದಲು ಹೂಕೋಸಿನ ಹೊರಗಿನ ಹಸಿರು ಎಲೆಗಳನ್ನು ತೆಗೆದುಹಾಕಿ. ಬಳಿಕ ಆ ಕೋಸಿನಲ್ಲಿ ಕೊಳೆ, ಕೀಟಗಳಿರುವ ಲಕ್ಷಣಗಳು ಕಂಡು ಬಂದರೆ ಅದನ್ನು ಕೂಡ ಚಾಕುವಿನಿಂದ ಕತ್ತರಿಸಿ.  ನಂತರ, ಉಳಿದಿರುವ ಕೊಳಕು ಮತ್ತು ಧೂಳನ್ನು ತೆಗೆದುಹಾಕಲು ಹೂಕೋಸನ್ನು ಶುದ್ಧ ನೀರಿನಿಂದ ತೊಳೆಯಿರಿ.

Loading...

ಹೂಕೋಸನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ:

ಹೂಕೋಸನ್ನು ಸ್ವಚ್ಛಗೊಳಿಸಲು ಸುಲಭವಾದ ಮಾರ್ಗವೆಂದರೆ ಅದನ್ನು ಸಣ್ಣ ತುಂಡುಗಳಾಗಿ ಬೇರ್ಪಡಿಸುವುದು. ಇಡೀ ಹೂಕೋಸನ್ನು ಒಂದೇ ಬಾರಿಗೆ ತೊಳೆಯುವುದರಿಂದ ಯಾವುದೇ ಕೀಟಗಳು ಸುಲಭವಾಗಿ ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ.

ಹೂಕೋಸನ್ನು ಸ್ವಚ್ಛಗೊಳಿಸಲು ಅದನ್ನು ಉಪ್ಪು ನೀರಿನಲ್ಲಿ ನೆನೆಸಿ:

ಹೂಕೋಸಿನಲ್ಲಿ ಅಂಟಿರುವ ಕೀಟ, ಹುಳುಗಳನ್ನು ತೆಗೆದು ಹಾಕಲು ಅದನ್ನು ನೀವು ಉಪ್ಪು ನೀರಿನಲ್ಲಿ ನೆನಸಬಹುದು. ಇದನ್ನು ಮಾಡಲು, ಒಂದು ದೊಡ್ಡ ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ ಸ್ವಲ್ಪ ಉಪ್ಪು ಸೇರಿಸಿ. ಹೂಕೋಸನ್ನು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ಹೂಕೋಸಿನಲ್ಲಿ ನಡುವೆ ಅಡಗಿರುವ ಯಾವುದೇ ಸಣ್ಣ ಕೀಟಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಹೂಕೋಸು ಸ್ವಚ್ಛಗೊಳಿಸಲು ವಿನೆಗೆರ್‌ ಮತ್ತು ಅರಶಿನ ಬಳಸಿ:

ಉಪ್ಪು ನೀರಿನ ಬದಲಿಗೆ ಹೂಕೋಸನ್ನು ವಿನೆಗರ್‌ ಮತ್ತು ಅರಶಿನ ಬೆರೆಸಿದ ನೀರಿನಲ್ಲೂ ಕ್ಲೀನ್‌ ಮಾಡಬಹುದು.  ಹೂಕೋಸನನ್ನು ಚೆನ್ನಾಗಿ ಸ್ವಚ್ಛಗೊಳಿಸಲು, ನೀರಿಗೆ ಒಂದು ಟೀಚಮಚ ವಿನೆಗರ್ ಮತ್ತು ಸ್ವಲ್ಪ ಉಪ್ಪು ಸೇರಿಸಿ. ವಿನೆಗರ್ ನ ಸೌಮ್ಯ ಆಮ್ಲೀಯ ಗುಣಗಳು ಮೇಲ್ಮೈಯಿಂದ ಕೆಲವು ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅಡುಗೆಮನೆ ಸಿಂಕ್‌ನಿಂದ ಕೆಟ್ಟ ವಾಸನೆ ಬರುತ್ತಾ? ಜಸ್ಟ್‌ ಒಂದು ನಿಂಬೆಹಣ್ಣಿನಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು

ಹೂಕೋಸನ್ನು ಶುದ್ಧ ನೀರಿನಿಂದ ಮತ್ತೊಮ್ಮೆ ಚೆನ್ನಾಗಿ ತೊಳೆಯಿರಿ:

ಉಪ್ಪು ನೀರಿನಿಂದ ಹೂಕೋಸನ್ನು ತೆಗೆದ ತಕ್ಷಣ ಅದನ್ನು ಶುದ್ಧವಾದ, ಹರಿಯುವ ನೀರಿನ ಅಡಿಯಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ಹೂಕೋಸು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

ಸ್ವಚ್ಛಗೊಳಿಸಿದ ನಂತರ ಹೂಕೋಸನ್ನು ಸರಿಯಾಗಿ ಬೇಯಿಸಿ:

ಹೂಕೋಸನ್ನು ಸ್ವಚ್ಛಗೊಳಿಸಿದ ನಂತರ, ಅದನ್ನು ಚೆನ್ನಾಗಿ ಬೇಯಿಸುವುದು ಸಹ ಮುಖ್ಯ. ಹೂಕೋಸು ವಿಟಮಿನ್ ಸಿ ಮತ್ತು ಬಿ ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ದೀರ್ಘಕಾಲ ಕುದಿಸುವುದರಿಂದ ಇದರಿಂದ ಕೆಲವು ಪೋಷಕಾಂಶಗಳು ಕಡಿಮೆಯಾಗಬಹುದು. ಆದ್ದರಿಂದ, ಹೂಕೋಸನ್ನು ದೀರ್ಘಕಾಲ ಕುದಿಸುವ ಬದಲು, ಅದನ್ನು ಆವಿಯಲ್ಲಿ ಬೇಯಿಸಿ ಅಥವಾ ಲಘುವಾಗಿ ಬೆರೆಸಿ ಹುರಿಯಿರಿ.ಹೂಕೋಸನ್ನು ಸ್ವಚ್ಛಗೊಳಿಸಲು ಸೋಪ್, ಡಿಟರ್ಜೆಂಟ್ ಅಥವಾ ಮನೆಯ ಕ್ಲೀನರ್‌ಗಳನ್ನು ಎಂದಿಗೂ ಬಳಸಬೇಡಿ ಎಂಬುದನ್ನು ನೆನಪಿಡಿ. ತರಕಾರಿಗಳನ್ನು ಸ್ವಚ್ಛಗೊಳಿಸಲು ಯಾವಾಗಲೂ ಶುದ್ಧವಾದ, ಹರಿಯುವ ನೀರನ್ನೇ ಬಳಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us