AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೇರಿಸುವಂತೆ ಮುತ್ತು ನೀಡುವುದರಿಂದ ಆಗುವ ಆರೋಗ್ಯ ಲಾಭಗಳೇನು?

Kiss day 2024: ಪ್ರೀತಿಸುವ ಹೃದಯಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ತಿಂಗಳೇ ಫೆಬ್ರವರಿ. ಈ ತಿಂಗಳಿನಲ್ಲಿ ಪ್ರೇಮಿಗಳು ಬರೋಬ್ಬರಿ ಒಂದು ವಾರಗಳ ಕಾಲ ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಪ್ರೇಮಿಗಳ ವಾರದಲ್ಲಿ ಏಳನೇ ದಿನ ಬರುವ ದಿನವೇ ಕಿಸ್ ಡೇ. ಈ ದಿನದಂದು ತಮ್ಮ ಭಾವನೆ ಹಾಗೂ ಪ್ರೀತಿಯನ್ನು ಮುತ್ತಿನ ಮೂಲಕ ವ್ಯಕ್ತಪಡಿಸುತ್ತಾರೆ. ಪ್ರೇಮಿ ಗೆ ಅಥವಾ ಸಂಗಾತಿಗೆ ಮುತ್ತನ್ನು ವಿವಿಧ ರೀತಿಯಲ್ಲಿ ನೀಡಿ ಖುಷಿ ಪಡಿಸಬಹುದು. ಮುತ್ತು ನೀಡುವ ರೀತಿಯಲ್ಲಿ ನಾನಾ ರೀತಿಯ ಅರ್ಥವು ಇದೆ. ಆದರೆ ಈ ಮತ್ತೇರಿಸುವಾಗೆ ಮುತ್ತಿಡುವುದರಿಂದಲೂ ಆರೋಗ್ಯ ಪ್ರಯೋಜನಗಳು ಅಧಿಕವಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ಮತ್ತೇರಿಸುವಂತೆ ಮುತ್ತು ನೀಡುವುದರಿಂದ ಆಗುವ ಆರೋಗ್ಯ ಲಾಭಗಳೇನು?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 12, 2024 | 2:53 PM

Share

ವ್ಯಾಲೆಂಟೈನ್ಸ್ ಡೇಗೂ ಒಂದು ದಿನದ ಮುಂಚೆಯೇ ಚುಂಬನ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರೇಮಿಗಳ ವಾರದ ಕೊನೆಯ ದಿನವಾಗಿದೆ. ಈ ದಿನಪ್ರೇಮಿಗಳು ತಮ್ಮ ಪ್ರೀತಿಯನ್ನು ಮುತ್ತಿಡುವ ಮೂಲಕ ವ್ಯಕ್ತಪಡಿಸಬಹುದಾಗಿದೆ. ಚುಂಬನ ಎನ್ನುವುದು ಪ್ರೀತಿಯನ್ನು ಮಾತ್ರ ತಿಳಿಸದೇ ವ್ಯಕ್ತಿಗಳ ಮೇಲೆ ಇರುವ ಕಾಳಜಿ, ಆರೈಕೆ, ರಕ್ಷಣೆಯಂತಹ ಭಾವನೆಗಳನ್ನು ಸೂಚಿಸುತ್ತದೆ. ಹೀಗಾಗಿ ಮುತ್ತು ಕೇವಲ ಗಂಡು ಹೆಣ್ಣಿಗೆ ಮಾತ್ರ ಸೀಮಿತವಾಗಿಲ್ಲ. ಕುಟುಂಬದ ಸದಸ್ಯರು ತಮ್ಮ ಪ್ರೀತಿಯನ್ನು ಮುತ್ತನ್ನು ನೀಡುವ ಮೂಲಕ ತೋರಿಸುತ್ತಾರೆ.

ಕಿಸ್ ಮಾಡುವುದರಿಂದ ಆರೋಗ್ಯ ಪ್ರಯೋಜನಗಳು :

* ಮುತ್ತು ಕೊಡುವಾಗ ದೇಹದಲ್ಲಿ ಲವ್‌ ಹಾರ್ಮೋನ್ಸ್, ಹ್ಯಾಪಿ ಹಾರ್ಮೋನ್ಸ್ ಬಿಡುಗಡೆಯಾಗುತ್ತವೆ. ಇದರಿಂದ ಸಂತೋಷದ ಅನುಭವವು ಉಂಟಾಗುತ್ತದೆ.

* ಚುಂಬಿಸುವಾಗ ಬಾಯಿಯಲ್ಲಿ ಲಾಲಾರಸವು ಸ್ರವಿಸುತ್ತದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಅದರೊಂದಿಗೆ ಬಾಯಿ, ಹಲ್ಲುಗಳು ಹಾಗೂ ವಸಡುಗಳನ್ನು ಆರೋಗ್ಯಯುತವಾಗಿರಿಸುತ್ತದೆ.

* ಸಂಗಾತಿಗೆ ಮುತ್ತನ್ನಿಕ್ಕುವಾಗ ಆಕ್ಸಿಟೋನಿನ್‌, ಡೊಪಮೈನ್‌ ಹಾಗೂ ಸಿರೋಟೋನಿನ್‌ನಂತಹ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಒತ್ತಡದ ಮಟ್ಟವನ್ನು ಕಡಿಮೆ ಮಾಡಿ ಮನಸ್ಸನ್ನು ನಿರಾಳಗೊಳಿಸುತ್ತದೆ.

* ಸಂಗಾತಿಯು ಚುಂಬಿಸುವಾಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುತ್ತಿಡುವಾಗ ಹೊಸ ಸೂಕ್ಷ್ಮಜೀವಿಗಳು ದೇಹ ಪ್ರವೇಶಿಸದಂತೆ ತಡೆಯುತ್ತದೆ.

* ಚುಂಬನವು ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸಿ ದೈಹಿಕವಾಗಿ ಒಂದಾಗಲೂ ಸಹಾಯಕವಾಗಿದೆ.

* ಚುಂಬನವು ಕ್ಯಾಲೊರಿಗಳನ್ನು ಬರ್ನ್ ಮಾಡುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

* ಚುಂಬನವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅದರೊಂದಿಗೆ ದೇಹದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಕಿಸ್ ಡೇ ಯಾವಾಗ?; ಅದರ ಇತಿಹಾಸ, ವಿಶೇಷತೆಯೇನು?

* ಕಿಸ್ ಕೊಡುವುದರಿಂದ ಮುಖಕ್ಕೆ ವ್ಯಾಯಾಮವಾದಂತೆ ಆಗುತ್ತದೆ. ಹೀಗಾಗಿ ಮುಖದಲ್ಲಿನ ಕೊಬ್ಬಿನ ಪ್ರಮಾಣವು ಕಡಿಮೆಯಾಗಿ ಸೌಂದರ್ಯವು ವೃದ್ಧಿಯಾಗುತ್ತದೆ.

* ಪ್ರೀತಿ ಪಾತ್ರರಿಗೆ ಮುತ್ತು ನೀಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.

* ಚುಂಬಿಸುವುದರಿಂದ ತಲೆನೋವು ಕಡಿಮೆಯಾಗಿ ಮೈಗ್ರೇನ್ ನಿಂದ ಮುಕ್ತಿಯನ್ನು ಪಡೆಯಬಹುದು.

* ಒಬ್ಬರಿಗೊಬ್ಬರು ಒಬ್ಬರು ಮುತ್ತು ನೀಡುವುದರಿಂದ ಸಂಬಂಧದಲ್ಲಿ ಹೊಂದಾಣಿಕೆಗೆ ದಾರಿ ಮಾಡಿಕೊಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ