Relationship Tips : ದಾಂಪತ್ಯ ಜೀವನವು ಹಾಳಾಗುವುದಕ್ಕೆ ಪತ್ನಿಯ ಈ ನಡವಳಿಕೆಗಳೇ ಕಾರಣವಂತೆ
ಗಂಡ ಹೆಂಡಿರ ನಡುವಿನ ಸಂಬಂಧವು ಹಾಲು ಜೇನಿನಂತೆ ಇರಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗಿದಾಗ ಸಂಸಾರದಲ್ಲಿ ಖುಷಿ ನೆಲೆಸಲು ಸಾಧ್ಯ. ಆದರೆ ಕೆಲವೊಮ್ಮೆ ಹೆಂಡತಿಯ ಈ ನಡವಳಿಕೆಗಳು ಸಂಸಾರದಲ್ಲಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಹೆಚ್ಚಿನವರ ದಾಂಪತ್ಯ ಜೀವನ ಹಾಳಾಗಲು ಈ ಕಾರಣವೇ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಇಬ್ಬರೂ ಡೈವೋರ್ಸ್ ಎನ್ನುವ ಹಂತಕ್ಕೆ ತಲುಪಿರುತ್ತಾರೆ. ಹೀಗಾಗಿ ಪತ್ನಿಯು ಪತಿಗೆ ಇಷ್ಟವಾಗದ ತನ್ನ ಈ ಕೆಲ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡರೆ ಬದುಕು ಸ್ವರ್ಗವಾಗುತ್ತದೆ.
ಗಂಡ ಹೆಂಡಿರ ಸಂಬಂಧದಲ್ಲಿ ಪ್ರೀತಿ, ಕಾಳಜಿ ಜೊತೆಗೆ ನಂಬಿಕೆಯ ಅಡಿಪಾಯ. ಇದೆಲ್ಲವು ಇದ್ದರೂ ಕೂಡ ಸಂಸಾರದಲ್ಲಿ ಸರಸ ವಿರಸಗಳು ಸರ್ವೇ ಸಾಮಾನ್ಯವಾಗಿರುತ್ತದೆ. ಮದುವೆಯ ನಂತರದಲ್ಲಿ ಎಲ್ಲರೂ ಸಂತೋಷದ ಜೀವನ ನಡೆಸಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಗಂಡ ಹೆಂಡಿರ ಸಣ್ಣ ಪುಟ್ಟ ತಪ್ಪುಗಳಿಂದ ದಾಂಪತ್ಯ ಜೀವನವು ಹಾಳಾಗುತ್ತದೆ. ಮದುವೆಯಾದ ನಂತರ ಸಂಬಂಧವನ್ನು ಉಳಿಸಿಕೊಳ್ಳುವುದು ಪತಿ-ಪತ್ನಿ ಇಬ್ಬರ ಜವಾಬ್ದಾರಿಯಾಗಿದೆ. ಹೆಣ್ಣು ತನ್ನ ನಡವಳಿಕೆಯ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಇಲ್ಲವಾದರೆ ತನ್ನ ಸಾಂಸರಿಕ ಜೀವನಕ್ಕೆ ಇದೇ ಸಮಸ್ಯೆಯಾಗಬಹುದು. ಹೀಗಾಗಿ ಹೆಣ್ಣು ಈ ಕೆಲವು ಅಭ್ಯಾಸಗಳನ್ನು ತನ್ನ ಸಂಸಾರಕ್ಕಾಗಿ ಬದಲಾವಣೆ ಮಾಡಿಕೊಳ್ಳುವುದು ಒಳಿತು.
* ಎಲ್ಲದರ ಬಗ್ಗೆಯೂ ಅನುಮಾನ: ನಂಬಿಕೆಯೇ ಎಲ್ಲಾ ಸಂಬಂಧದ ಜೀವಾಳ. ಒಬ್ಬ ವ್ಯಕ್ತಿಯ ಮೇಲೆ ನಂಬಿಕೆಯೇ ಇಲ್ಲವಾದಲ್ಲಿ ಆ ಬಂಧವು ದಿನೇ ದಿನೇ ಸಡಿಲವಾಗುತ್ತ ಹೋಗುತ್ತದೆ. ಕೆಲವು ಹೆಣ್ಣು ಮಕ್ಕಳು ತಮ್ಮ ಗಂಡನ ಮೇಲೆ ಅನುಮಾನ ಪಡುತ್ತಾರೆ. ಯಾರೊಂದಿಗೆಯಾದರೂ ಸ್ವಲ್ಪ ಆತ್ಮೀಯವಾಗಿ ಮಾತನಾಡಿದರೆಂದರೆ ಸಾಕು, ತಲೆಯಲ್ಲಿ ಅನುಮಾನದ ಹುಳವೊಂದು ಹೊಕ್ಕಿಕೊಂಡು ಬಿಡುತ್ತದೆ. ಹೀಗಾಗಿ ಮಹಿಳೆಯರು ತನ್ನ ಗಂಡನ ಫೋನ್ ಅನ್ನು ಪರಿಶೀಲಿಸುವುದನ್ನು ಮಾಡುತ್ತಾರೆ. ನಿಮ್ಮ ಪತಿಯು ನಿಮಗೆ ಪ್ರಾಮಾಣಿಕವಾಗಿದ್ದಲ್ಲಿ ನಿಮ್ಮ ಈ ನಡವಳಿಕೆಯನ್ನು ಆದಷ್ಟು ತಪ್ಪಿಸಿ. ಇದು ನಿಮ್ಮ ಪತಿಗೆ ಇಷ್ಟವಾಗದೇ ನಿಮ್ಮಿಂದ ದೂರವಾಗುವ ಸಾಧ್ಯತೆಯೇ ಹೆಚ್ಚು.
* ಅತಿಯಾದ ಬೇಡಿಕೆ: ಮದುವೆಯಾದ ನಂತರ ಹೆಂಡತಿಯು ತನ್ನ ಗಂಡನನ್ನು ರಾಜನಂತೆ ನಡೆಸಿಕೊಳ್ಳುವುದು ತಪ್ಪಲ್ಲ, ಹಾಗೇನೇ ನನ್ನನ್ನು ರಾಣಿಯಂತೆ ನೋಡಿಕೊಳ್ಳಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಅತಿಯಾದ ಬೇಡಿಕೆಗಳು ಸಂಬಂಧಕ್ಕೆ ಒಳ್ಳೆಯದು ಅಲ್ಲ. ಪತಿಯು ಆರ್ಥಿಕವಾಗಿ ಸಶಕ್ತನಾಗಿದ್ದು ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತಿದ್ದರೆ ಆದರಿಂದೇನು ಸಮಸ್ಯೆಯಾಗುವುದಿಲ್ಲ. ಆದರೆ ಪತಿಯ ಆರ್ಥಿಕ ಸ್ಥಿತಿಯನ್ನು ಅರಿತುಕೊಳ್ಳದೇ ಬೇಡಿಕೆಯಿಟ್ಟರೆ, ನಿಮ್ಮ ಮೇಲೆ ಆತನಿಗೆ ಬೇಸರವಾಗಬಹುದು. ತನ್ನನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ ಎನ್ನುವ ಭಾವನೆಯು ಮೂಡುವುದಲ್ಲದೆ, ಸಂಬಂಧವು ಹದಗೆಡಬಹುದು.
ಇದನ್ನೂ ಓದಿ: ಪಾಪ್ಕಾರ್ನ್ ಬ್ರೇನ್ ಎಂದರೇನು? ಈ ಕಾಯಿಲೆ ಬಗ್ಗೆ ನೀವು ತಿಳಿಯಲೇಬೇಕು
* ಪತಿಯನ್ನು ಬೇರೆಯವರೊಂದಿಗೆ ಹೋಲಿಕೆ ಮಾಡುವುದು : ಕೆಲ ಮಹಿಳೆಯರು ತಮ್ಮ ಪತಿಯನ್ನು ತಮ್ಮ ಕುಟುಂಬದ ಸದಸ್ಯರು ಅಥವಾ ಹೊರಗಿನವರೊಂದಿಗೆ ಹೋಲಿಕೆ ಮಾಡುತ್ತಾರೆ. ಹೆಂಡತಿಯ ಈ ನಡವಳಿಕೆಯು ಬಹುತೇಕ ಗಂಡಂದಿರಿಗೆ ಇಷ್ಟವಾಗುವುದೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ವಿಭಿನ್ನವಾಗಿರುತ್ತಾನೆ. ಹೀಗಾಗಿ ನಿಮ್ಮ ಹೋಲಿಕೆ ಮಾಡುವ ಸ್ವಭಾವು ದಾಂಪತ್ಯ ಜೀವನದ ಬಿರುಕು ಮೂಡಲು ಕಾರಣವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ