ನಿಮ್ಮ ಪ್ರೀತಿ ಪಾತ್ರರಿಗೆ ನೀಡುವ ಒಂದು ಬೆಚ್ಚನೆಯ ಆಲಿಂಗನದಲ್ಲಿದೆ ಮ್ಯಾಜಿಕ್

Hug Day 2024: ಪ್ರೀತಿ-ಪ್ರೇಮ ಹಾಗೂ ಸಂಬಂಧಗಳಲ್ಲಿ ನಾನು ಸದಾ ನಿನ್ನೊಂದಿಗಿದ್ದೇನೆ ಎಂದು ಆಲಿಂಗನದಲ್ಲಿಯೇ ಹೇಳಿ ಬಿಡಬಹುದು. ಇದರಿಂದ ನಿಮ್ಮ ಪ್ರೀತಿ ಪಾತ್ರರಿಗೆ ಭದ್ರತೆಯ ಭಾವವೊಂದು ಮೂಡುತ್ತದೆ. ಸಂತೋಷ ಹಾಗೂ ದುಃಖದ ಸಮಯದಲ್ಲಿ ಸಂಗಾತಿ ಅಥವಾ ಪ್ರೇಮಿಯನ್ನು ಅಪ್ಪಿಕೊಂಡಾಗ ಆ ಅನುಭವವೇ ಬೇರೆ. ದುಃಖದ ಸಮಯದಲ್ಲಿ ಅಪ್ಪುಗೆಯು ಸಾಂತ್ವನವಾದರೆ, ಸಂತೋಷದ ಸಮಯದಲ್ಲಿ ತಬ್ಬಿಕೊಳ್ಳುವಿಕೆಯು ನಿಮ್ಮ ಸಂತೋಷವು ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ಆದರೆ ಪ್ರೇಮಿಗಳ ತಿಂಗಳಲ್ಲಿ ಅಪ್ಪುಗೆಗಾಗಿಯೇ ಒಂದು ದಿನವಿದ್ದು, ಅದುವೇ ಫೆಬ್ರವರಿ 12 ಆಚರಿಸುವ ದಿನವೇ ಈ ಹಗ್ ಡೇ ಅಂದರೆ ಅಪ್ಪುಗೆಯ ದಿನ. ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವುದು ಸಂಬಂಧವನ್ನು ಗಟ್ಟಿಯಾಗಿಸುವುದಲ್ಲದೆ, ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಲ್ಲದು.

ನಿಮ್ಮ ಪ್ರೀತಿ ಪಾತ್ರರಿಗೆ ನೀಡುವ ಒಂದು ಬೆಚ್ಚನೆಯ ಆಲಿಂಗನದಲ್ಲಿದೆ ಮ್ಯಾಜಿಕ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 12, 2024 | 9:59 AM

ಪ್ರೇಮಿಗಳ ದಿನಕ್ಕೆ ಇನ್ನೇನು ಕೆಲವೇ ದಿನ ಗಳು ಮಾತ್ರ ಬಾಕಿಯಿವೆ..ಆದರೆ ಈಗಾಗಲೇ ಒಂದು ವಾರಕ್ಕೂ ಮುಂಚೆಯೇ ಪ್ರೇಮಿಗಳ ಸಂಭ್ರಮವು ಜೋರಾಗಿದೆ. ಈಗಾಗಲೇ ಜೋಡಿಗಳು ಪ್ರತಿಯೊಂದು ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 12 ನೇ ತಾರೀಕಿನಂದು ಪ್ರೇಮಿಗಳು “ಹಗ್ ಡೇ”(Hug Day ) ಅಥವಾ ಅಪ್ಪುಗೆಯ ದಿನವನ್ನು ಆಚರಿಸುತ್ತಾರೆ. ಪರಸ್ಪರ ಪ್ರೀತಿ ಭಾವನೆಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಬಿಗಿಯಾಗಿ ಅಪ್ಪಿಕೊಂಡು ತಮ್ಮ ಪ್ರೀತಿಯನ್ನು ಪ್ರೇಮಿಗೆ ತಿಳಿಸುತ್ತಾರೆ. ಆದರೆ ಪ್ರೇಮಿಗಳ ವಾರದಲ್ಲಿ ಬರುವ ಹಗ್ ಡೇಯೆನ್ನುವುದು ಪ್ರೇಮಿಗಳಿಗೆ ಮಾತ್ರವಲ್ಲ. ಈ ದಿನದಂದು ತಂದೆ ತಾಯಿ, ಸ್ನೇಹಿತರು, ಸಂಗಾತಿಯನ್ನು ಪರಸ್ಪರ ಆಲಿಂಗಿಸಿಕೊಂಡು ಪರಸ್ಪರ ಪ್ರೀತಿ ಹಂಚಿಕೊಳ್ಳುವ ದಿನವಾಗಿದೆ. ಒಂದು ಪ್ರೀತಿಯ ಅಪ್ಪುಗೆಯಿಂದ ಹಲವಾರು ಲಾಭಗಳಿದ್ದು ಆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಅಪ್ಪುಗೆಯಿಂದ ಆಗುವ ಪ್ರಯೋಜನಗಳು ಇವು:

* ಯಾವುದೇ ಸಂಬಂಧದಲ್ಲಿ ಕೋಪ, ಮನಸ್ತಾಪಗಳು ಉಂಟಾದರೆ ಇಬ್ಬರೂ ಗಟ್ಟಿಯಾಗಿ ಅಪ್ಪುಗೆಯನ್ನು ನೀಡುವುದರಿಂದ ಮನಸ್ಸು ನಿರಾಳವಾಗಿ ಸಂಬಂಧವು ಮೊದಲಿನಂತಾಗುತ್ತದೆ.

* ಮನಸ್ಸನ್ನು ಹಗುರವಾಗಿಸುವ ಬೆಚ್ಚನೆಯ ಅಪ್ಪುಗೆಯು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಆಕ್ಸಿಟೋಸಿಸ್ ಹಾರ್ಮೋನ್ ಪ್ರಮಾಣ ಹೆಚ್ಚಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.

* ದೀರ್ಘಕಾಲವರೆಗೆ ಅಪ್ಪಿಕೊಂಡರೆ ಹೃದಯದ ಆರೋಗ್ಯವು ಸುಧಾರಿಸುವುದರೊಂದಿಗೆ ರಕ್ತದೊತ್ತಡ ಕಡಿಮೆಯಾಗುತ್ತದೆ.

* ಪ್ರೀತಿಯ ಪಾತ್ರರ ಅಪ್ಪುಗೆಯು ನರವ್ಯೂಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ದೇಹಕ್ಕೆ ಹಾಗೂ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.

ಇದನ್ನೂ ಓದಿ: ಅಪ್ಪುಗೆಯ ದಿನ ಈ ರೀತಿ ನಿಮ್ಮ ಸಂಗಾತಿಗೆ ಸರ್​ಪ್ರೈಸ್ ನೀಡಿ

* ಆಲಿಂಗನದಿಂದ ಪಾಸಿಟಿವ್ ಭಾವವು ಉಂಟಾಗಿ ಸಂತೋಷದ ಹಾರ್ಮೋನ್ ಗಳ ಬಿಡುಗಡೆ ಮಾಡುತ್ತದೆ. ಮನಸ್ಸನ್ನು ನಿರಾಳವನ್ನಾಗಿಸುತ್ತದೆ.

* ಹಾರ್ಮೋನ್ ಗಳ ಬಿಡುಗಡೆಯಿಂದ ಮನಸ್ಸು ಸಂತೋಷದಿಂದ ಕೂಡಿದರೆ ರೋಗ ನಿರೋಧಕ ವ್ಯವಸ್ಥೆಯು ಹೆಚ್ಚಾಗುತ್ತದೆ.

* ಅಪ್ಪುಗೆಯಿಂದ ದೇಹದಲ್ಲಿನ ಎಲ್ಲಾ ಕಾರ್ಯಗಳು ಸಕರಾತ್ಮಕವಾಗಿ ನಡೆಯುತ್ತದೆ.

* ನೋವಿನಲ್ಲಿರುವಾಗ ತಬ್ಬಿಕೊಳ್ಳುವಿಕೆಯು ಸ್ನಾಯುಗಳಲ್ಲಿನ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಈ ಮೂಲಕ ಅಪ್ಪುಗೆಯು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

* ಬೆಚ್ಚನೆಯ ಅಪ್ಪುಗೆಯಿಂದ ಜನರು ವಯಸ್ಸಾದಾಗ ಉಂಟಾಗುವ ಒಂಟಿತನದ ಭಾವನೆಗಳ ವಿರುದ್ಧ ಹೋರಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್