ಕೇಶರಾಶಿಯ ಆರೈಕೆಯ ಗುಟ್ಟು ಕರಿಬೇವಿನ ಎಲೆಯ ಎಣ್ಣೆಯಲ್ಲಿದೆ, ಇಲ್ಲಿದೆ ಎಣ್ಣೆ ಮಾಡುವ ವಿಧಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 17, 2024 | 4:12 PM

ನೀಳ ಕೇಶರಾಶಿಯನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ. ಹೆಣ್ಣು ಮಕ್ಕಳಿಗೆ ನೀಳವಾದ ಕೇಶರಾಶಿಯಿದ್ದರೇನೇ ಚೆಂದ. ಆದರೆ ಕೆಲವರು ವಿವಿಧ ಬಗೆಯ ಹೇರ್ ಸ್ಟೈಲ್​​​​ನಿಂದಾಗಿ ಕೂದಲಿಗೆ ಕತ್ತರಿ ಹಾಕುವವರ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದಲ್ಲದೇ ಈ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಕೇಶರಾಶಿಯ ಆರೈಕೆ ಮಾಡುವುದು ಕಷ್ಟವಾಗುತ್ತಿವೆ. ಹೀಗಾಗಿ ಮಹಿಳೆಯರು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಪ್ರಾಡಕ್ಟ್​​​​ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಮನೆಯಲ್ಲಿ ತಯಾರಿಸುವ ಈ ಕರಿಬೇವಿನ ಎಣ್ಣೆಯಿಂದ ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ, ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತವೆ. ಮನೆಯಲ್ಲಿ ಕರಿಬೇವಿನ ಎಣ್ಣೆಯನ್ನು ಸರಳವಾಗಿ ಮದುವೆ ವಿಧಾನವನ್ನು ತಿಳಿಯೋಣ ಬನ್ನಿ.

ಕೇಶರಾಶಿಯ ಆರೈಕೆಯ ಗುಟ್ಟು ಕರಿಬೇವಿನ ಎಲೆಯ ಎಣ್ಣೆಯಲ್ಲಿದೆ, ಇಲ್ಲಿದೆ ಎಣ್ಣೆ ಮಾಡುವ ವಿಧಾನ
Follow us on

ಭಾರತೀಯ ಆಡುಗೆಗಳಲ್ಲಿ ಕರಿಬೇವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಕರಿಬೇವಿನ ಒಗ್ಗರಣೆ ಘಮವಿಲ್ಲದೇ ಯಾವ ಅಡುಗೆಯೂ ಆಗುವುದೇ ಇಲ್ಲ. ಒಗ್ಗರಣೆಯ ಘಮಕ್ಕೆ ಎಣ್ಣೆ, ಸಾಸಿವೆ, ಬೆಳ್ಳುಳ್ಳಿಯ ಜೊತೆಗೆ ಕರಿಬೇವು ಇರಲೇಬೇಕು. ಒಗ್ಗರಣೆಗೆಂದು ಬಳಸುವ ಈ ಕರಿಬೇವಿನಲ್ಲಿ ಔಷಧೀಯ ಗುಣವು ಹೇರಳವಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಈ ಕರಿಬೇವಿನ ಎಲೆಗಳು ಲಿನೂಲ್, ಆಲ್ಫಾ-ಟೆರ್ಪಿನೆನ್, ಮೈರ್ಸೀನ್, ಮಹಾನಿಂಬೈನ್, ಕ್ಯಾರಿಯೊಫಿಲೀನ್, ಮುರಾಯನಾಲ್, ಆಲ್ಫಾ-ಪಿನೆನ್ ಸೇರಿದಂತೆ ಇನ್ನಿತ್ತರ ಪೋಷಕಾಶಗಳಿಂದ ಕೂಡಿದೆ. ರೋಗ ರುಜಿನಗಳಿಗೆ ಔಷಧವಾಗಿ ಕೆಲಸ ಮಾಡುವ ಈ ಕರಿಬೇವು ಕೂದಲಿಗೆ ಆರೈಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಕರಿಬೇವಿನ ಎಣ್ಣೆ ಮಾಡಲು ಬೇಕಾಗುವ ಸಾಮಗ್ರಿಗಳು :

ಅರ್ಧ ಲೀಟರ್ ತೆಂಗಿನ ಎಣ್ಣೆ, ಅರ್ಧ ಕಪ್ ನಷ್ಟು ಕರಿಬೇವಿನ ಎಲೆ, ಒಂದು ಚಮಚ ಮೆಂತೆ ಕಾಳು ಹಾಗೂ ನಾಲ್ಕರಿಂದ ಐದು ಬಿಳಿದಾಸವಾಳದ ಹೂವು.

ಕರಿಬೇವಿನ ಎಣ್ಣೆ ಮಾಡುವ ವಿಧಾನ:

* ಮೊದಲಿಗೆ ಕರಿಬೇವಿನ ಎಲೆಗಳನ್ನು ಶುದ್ಧ ನೀರಿನಲ್ಲಿ ತೊಳೆದು ಒಣಗಿಸಿಕೊಳ್ಳಿ.

* ಆ ಬಳಿಕ ಒಂದು ಬಾಣಲೆಗೆ ಒಣಗಿಸಿರುವ ಕರಿಬೇವಿನ ಎಲೆಗಳು, ಮೆಂತೆ ಕಾಳುಗಳನ್ನು ಹಾಕಿ ಸಣ್ಣ ಹುರಿದುಕೊಳ್ಳಿ.

* ಹುರಿದ ಕರಿಬೇವಿನ ಎಲೆ ಹಾಗೂ ಮೆಂತೆ ಕಾಳನ್ನು ಮಿಕ್ಸಿ ಜಾರಿಗೆ ಹಾಕಿ ಸಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.

* ಆ ಬಳಿಕ ಒಂದು ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಇದಕ್ಕೆ ಈಗಾಗಲೇ ಪುಡಿ ಮಾಡಿಟ್ಟ ಮಿಶ್ರಣ ಹಾಗೂ ಒಂದೆರಡು ಬಿಳಿದಾಸವಾಳವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.

ಇದನ್ನೂ ಓದಿ: ನಿಮ್ಮ ಮದುವೆಯಂದು ಕೇಶರಾಶಿಯ ಸೌಂದರ್ಯಕ್ಕಾಗಿ ಈ ಸಲಹೆ ಪಾಲಿಸಿ

* ಈ ಎಣ್ಣೆಯೂ ತಣ್ಣಗಾದ ಬಳಿಕ ಬಾಟಲಿಗೆ ಹಾಕಿಡಿ. ಬಾಟಲಿಯ ತಳಭಾಗದಲ್ಲಿ ಮಿಶ್ರಣವು ಹಾಗೆಯೇ ಉಳಿಯುತ್ತದೆ. (ಎಣ್ಣೆಯನ್ನು ಸೋಸುವ ಅಗತ್ಯವಿಲ್ಲ). ಈ ಎಣ್ಣೆಯನ್ನು ದಿನಾಲೂ ಕೂದಲಿಗೆ ಹಾಕುವುದರಿಂದ ಕೂದಲು ಸೊಂಪಾಗಿ ಬೆಳೆಯುತವುದರ ಜೊತೆಗೆ ಕಪ್ಪಾಗಾಗುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ.