ಕಾಲಿಗೆ ಕಪ್ಪು ದಾರ ಯಾಕೆ ಕಟ್ತಾರೆ ಗೊತ್ತಾ? ಕಾರಣಗಳು ಹೀಗಿವೆ

| Updated By: sandhya thejappa

Updated on: Aug 08, 2021 | 4:47 PM

ಕೇವಲ ಯುವ ಜನತೆ ಮಾತ್ರವಲ್ಲ ಹಿರಿಯರು ಕಟ್ಟಿಕೊಂಡಿರುತ್ತಾರೆ. ಆದರೆ ಈ ಕಪ್ಪು ದಾರದ ಹಿಂದಿನ ವಿಶೇಷತೆ ಏನು? ಕಪ್ಪು ದಾರವನ್ನು ಏಕೆ ಕಟ್ಟುತ್ತಾರೆ ಅಂತ ಹಲವರಿಗೆ ಕುತೂಹಲವಿದೆ.

ಕಾಲಿಗೆ ಕಪ್ಪು ದಾರ ಯಾಕೆ ಕಟ್ತಾರೆ ಗೊತ್ತಾ? ಕಾರಣಗಳು ಹೀಗಿವೆ
ಕಾಲಿಗೆ ಕಟ್ಟಿರುವ ಕಪ್ಪು ದಾರ (ಸಾಂಕೇತಿಕ ಚಿತ್ರ)
Follow us on

ಇತ್ತೀಚೆಗೆ ಯುವಕ- ಯುವತಿಯರಲ್ಲಿ ಯಾರ ಕಾಲನ್ನು ನೋಡಿದ್ರೂ ಕಪ್ಪು ದಾರ ಕಾಣಿಸುತ್ತೆ. ಸಾಮಾನ್ಯವಾಗಿ ಹುಡುಗಿಯರು ಎಡಗಾಲಿಗೆ ಮತ್ತು ಹುಡುಗರು ಬಲಗಾಲಿಗೆ ಕಪ್ಪು ದಾರ ಕಟ್ಟಿಕೊಂಡಿರುತ್ತಾರೆ. ಕೇವಲ ಯುವ ಜನತೆ ಮಾತ್ರವಲ್ಲ ಹಿರಿಯರು ಕಟ್ಟಿಕೊಂಡಿರುತ್ತಾರೆ. ಆದರೆ ಈ ಕಪ್ಪು ದಾರದ ಹಿಂದಿನ ವಿಶೇಷತೆ ಏನು? ಕಪ್ಪು ದಾರವನ್ನು ಏಕೆ ಕಟ್ಟುತ್ತಾರೆ ಅಂತ ಹಲವರಿಗೆ ಕುತೂಹಲವಿದೆ. ಸಾಮಾನ್ಯವಾಗಿ ತಾಯಿ ತನ್ನ ಮಗುವಿಗೆ ಕಪ್ಪು ದಾರ ಕಟ್ಟುತ್ತಾಳೆ. ಮಗು ಮುದ್ದು ಮುದ್ದಾಗಿರುವುದರಿಂದ ಬೇರೆಯವರ ಕಣ್ಣು ಮಗುವಿನ ಮೇಲೆ ಬೀಳದಿರಲಿ ಅಂತ ದಾರ ಕಟ್ಟುವುದು ಸಹಜ.

* ದುಷ್ಟ ಶಕ್ತಿಯಿಂದ ಪಾರಾಗಲು

ಕಪ್ಪು ದಾರಕ್ಕೆ ದುಷ್ಟ ಶಕ್ತಿಯನ್ನು ತಡೆಯುವ ಸಾಮರ್ಥ್ಯವಿದೆ ಎಂದು ಹೇಳಲಾಗುತ್ತದೆ. ಈ ನಂಬಿಕೆಯಿಂದ ಮಗುವಿನ ಕಾಲು, ಕೈ ಮತ್ತು ಕುತ್ತಿಗೆಗೆ ಕಟ್ಟುತ್ತಾರೆ. ಆದರೆ ಇತ್ತೀಚಿಗೆ ಕಾಲಿಗೆ ಕಪ್ಪು ದಾರ ಕಟ್ಟುವುದೇ ಒಂದು ರೀತಿಯ ಫ್ಯಾಶನ್ ಆಗಿಬಿಟ್ಟಿದೆ. ಕಪ್ಪು ದಾರ ಕಟ್ಟುವುದು ಈಗ ಫ್ಯಾಶನ್ ಆಗಿದ್ದರೂ ಈ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ. ಇತ್ತೀಚೆಗೆ ಇದು ಫ್ಯಾಶನ್ ಆಗಿರುವುದರಿಂದ ಕಪ್ಪು ದಾರದ ಜೊತೆಗೆ ಬಣ್ಣ ಬಣ್ಣದ ಮಣಿಗಳನ್ನು ಪೋಣಿಸಿ ಕಟ್ಟಿಕೊಳ್ಳುತ್ತಾರೆ. ಇಲ್ಲದಿದ್ದರೆ ಅಂಗಡಿಗಳಲ್ಲಿ ನಾನಾ ಬಗೆಯ ದಾರವನ್ನು ಹುಡುಕಿ ಖರೀದಿಸುತ್ತಾರೆ.

* ನೋವು ನಿವಾರಣೆ
ಹಿರಿಯರ ಕಾಲಲ್ಲಿ ಕಪ್ಪು ದಾರ ಕಾಣ ಸಿಗುತ್ತೆ. ಮುಖ್ಯವಾಗಿ ಕಪ್ಪು ದಾರಕ್ಕೆ ಶಾಖ ಹೀರುವ ಗುಣವಿದೆ. ಈ ಕಾರಣಕ್ಕೂ ದಾರ ಕಟ್ಟಿಕೊಳ್ಳುತ್ತಾರೆ. ಕೆಲ ಗಾಯಗಳು ತಕ್ಷಣ ಮಾಸುವುದಿಲ್ಲ. ಬೇಗ ವಾಸಿಯಾಗಲು ಕಪ್ಪು ದಾರ ಕಟ್ಟಿ ಅಂತಾರೆ. ಇನ್ನು ಹೆಚ್ಚು ನಡೆಯುವುದರಿಂದ ಕಾಲಿನ ಪಾದ ನೋವಾಗುತ್ತದೆ. ನೋವು ನಿವಾರಣೆ ಮಾಡಲು ಕಾಲಿಗೆ ದಾರ ಕಟ್ಟುವ ನಂಬಿಕೆಯಿದೆ.

* ಆರ್ಥಿಕ ಸಮಸ್ಯೆ ನಿವಾರಣೆ
ಕೆಲವರಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಎಷ್ಟು ದುಡಿದರೂ ಹಣ ಕೂಡಿಡಲು ಆಗುತ್ತಿಲ್ಲ. ಅಥವಾ ಕೈಯಲ್ಲಿ ಹಣ ನಿಲ್ಲುತ್ತಿಲ್ಲ. ಒಂದಲ್ಲ ಒಂದು ಸಮಸ್ಯೆ ಶುರುವಾಗುತ್ತದೆ. ಹೀಗಾಗಿ ಇದನ್ನು ಪರಿಹರಿಸಲು ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕೆಂದು ಹಲವರು ಹೇಳುತ್ತಾರೆ. ಜೊತೆಗೆ ಕಾಲು ವಿಪರೀತವಾಗಿ ನೋವಾಗುತ್ತಿದ್ದರೆ ಕಪ್ಪು ದಾರ ಕಟ್ಟಿಕೊಂಡಾಗ ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆ ಹಲವರಿಗಿದೆ.

ಇದನ್ನೂ ಓದಿ

Health Tips: ನೀವು ಹಸಿ ಹಾಲು ಕುಡಿತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

Health Tips: ಪೇರಲೆ ಹಣ್ಣಿನ ಅತಿಯಾದ ಸೇವನೆ ಅನಾರೋಗ್ಯಕ್ಕೆ ಕಾರಣ!

(There are a few reasons for tying a black thread to leg)