ಬೇಸಿಗೆಯಲ್ಲಿ ಹೆಚ್ಚಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್​​ ಫಾಲೋ ಮಾಡಿ

Akshatha Vorkady

|

Updated on: Mar 18, 2023 | 3:08 PM

ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಲಬದ್ಧತೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ನೀರು ಕುಡಿಯುವುದು.

ಬೇಸಿಗೆಯಲ್ಲಿ ಹೆಚ್ಚಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್​​ ಫಾಲೋ ಮಾಡಿ
ಸಾಂದರ್ಭಿಕ ಚಿತ್ರ

ಹವಾಮಾನ ಬದಲಾಗುತ್ತಿದ್ದಂತೆ  ವಿಶೇಷವಾಗಿ, ಬೇಸಿಗೆಯಲ್ಲಿ ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ಆರೋಗ್ಯದ ವಿಶೇಷ ಗಮನಹರಿಸುವುದು ಅಗತ್ಯವಾಗಿರುತ್ತದೆ. ನಿರ್ಜಲೀಕರಣಗೊಂಡ ದೇಹವು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಅವುಗಳಲ್ಲಿ ಹೊಟ್ಟೆಯ ಸಮಸ್ಯೆಯು ಒಂದು. ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಲಬದ್ಧತೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ನೀರು ಕುಡಿಯುವುದು. ಪ್ರತೀ ದಿನ ಕನಿಷ್ಟ 2 ಲೀಟರ್​​ ನೀರು ಕುಡಿಯುವುದರಿಂದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಹೊಟ್ಟೆ-ಸಂಬಂಧಿತ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡಲು ಸಹಾಯಕವಾಗುವ ಹಣ್ಣುಗಳು ಇಲ್ಲಿವೆ.

ಸಿಟ್ರಸ್ ಹಣ್ಣುಗಳು:

ಕಿತ್ತಳೆ, ದ್ರಾಕ್ಷಿಹಣ್ಣು ಮುಂತಾದ ಸಿಟ್ರಸ್ ಹಣ್ಣುಗಳು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಈ ಹಣ್ಣುಗಳ ಸಿಪ್ಪೆಗಳಲ್ಲಿ ಹೇರಳವಾಗಿರುವ ಪೆಕ್ಟಿನ್ ಅಂಶವು ಕರುಳಿನ ಸಾಗಣೆಯ ಅವಧಿಯನ್ನು ಕಡಿಮೆ ಮಾಡಿ ಮಲಬದ್ಧತೆಯನ್ನು ಸರಾಗಗೊಳಿಸುತ್ತದೆ.

ಪೇರಳೆ:

ಪೇರಳೆಯಲ್ಲಿ ಕಂಡುಬರುವ ನಾರುಗಳು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಇದು ಕರುಳಿನ ಉದ್ದಕ್ಕೂ ಮಲವನ್ನು ತಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ನೀವು ಮಲಬದ್ಧತೆ ಸಮಸ್ಯೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಬಹುದಾಗಿದೆ. ಪೇರಳೆಯಲ್ಲಿರುವ ಸೋರ್ಬಿಟೋಲ್ ಅಂಶವು ಮಲ ಮೃದುವಾಗಿ ಮತ್ತು ಸುಲಭವಾಗಿ ಹಾದುಹೋಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಖಾಸಗಿ ಪ್ರದೇಶದ ಶೇವಿಂಗ್ ನಂತರ ಉರಿ ಅನುಭವಿಸುತ್ತೀರಾ? ಹಾಗಿದ್ದರೆ ಬ್ರೆಜಿಲಿಯನ್ ವ್ಯಾಕ್ಸ್ ಮಾಡಿ, ಪ್ರಯೋಜನಗಳು ಹೀಗಿವೆ

ಸೇಬು:

ಪೇರಳೆಗಳಂತೆಯೇ, ಸೇಬು ಕೂಡ ಹೆಚ್ಚಿನ ಪ್ರಮಾಣದ ಕರಗುವ ಮತ್ತು ಕರಗದ ಫೈಬರ್ ಅನ್ನು ಒಳಗೊಂಡಿರುತ್ತವೆ. ಸೇಬಿನಲ್ಲಿ ಪೆಕ್ಟಿನ್ ಅಂಶವು ಹೇರಳವಾಗಿರುವುದರಿಂದ ಇದು ಮಲಬದ್ಧತೆ ಸಮಸ್ಯೆಯಿಂದ ನಿಮ್ಮನ್ನು ಕಾಪಾಡುತ್ತದೆ.

ಒಣಗಿದ ಪ್ಲಮ್​​ ಹಣ್ಣು:

ಒಣಗಿದ ಪ್ಲಮ್ ಹಣ್ಣು ಮಲಬದ್ಧತೆ ಸಮಸ್ಯೆಗೆ ಒಂದು ಉತ್ತಮ ಔಷಧಿಯಾಗಿದೆ. ಜೊತೆಗೆ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಮಲಬದ್ಧತೆಯಿಂದಾಗಿ ಜನರಿಗೆ ಆಮ್ಲೀಯತೆ, ಅಜೀರ್ಣ ಮುಂತಾದ ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಹೀಗಾಗಿ ಪ್ಲಮ್​ ಹಣ್ಣು ಸೇವಿಸುವುದು ಉತ್ತಮ. ಈ ಹಣ್ಣಿನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕಲು ಇದು ಸಹಕಾರಿಯಾಗಿದೆ.

ಬಾಳೆಹಣ್ಣು:

ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣು ಕರಗುವ ಫೈಬರ್ ಅಂಶವನ್ನು ಹೊಂದಿದ್ದು, ಇದು ಮಲಬದ್ಧತೆ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಸಹಾಯಕವಾಗಿದೆ. ಇನ್ನೊಂದೆಡೆ ಬಾಳೆಕಾಯಿ ತಿನ್ನುವುದರಿಂದ ಇದು ಮಲಬದ್ಧತೆಗೆ ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada