ಬೇಸಿಗೆಯಲ್ಲಿ ಈ 5 ವಸ್ತುಗಳು ನಿಮ್ಮ ಪರ್ಸ್‌ನಲ್ಲಿ ಇರಬೇಕು, ಇದು ನಿಮ್ಮ ಚರ್ಮದ ರಕ್ಷಣೆಗೆ

ಈ ಬೇಸಿಗೆಯಲ್ಲಿ ಮಹಿಳೆಯರು ತಮ್ಮ ಬ್ಯೂಟಿ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇದು ಸಹಜ ಕೂಡ ಹೌದು. ಈ ಬೇಸಿಗೆಯಲ್ಲಿ ಚರ್ಮದ ಹೊಳಪನ್ನು ಹೆಚ್ಚಿಸಲು ಕೆಲವು ವಸ್ತುಗಳು ನಿಮ್ಮ ಬಳಿ ಇರಬೇಕು. ಅವುಗಳು ಯಾವುವು ಇಲ್ಲಿದೆ ನೋಡಿ. ಈ ವಸ್ತುಗಳನ್ನು ನಿಮ್ಮ ಬ್ಯಾಗ್​​ನಲ್ಲಿ ಇರಬೇಕು.

ಬೇಸಿಗೆಯಲ್ಲಿ ಈ 5 ವಸ್ತುಗಳು ನಿಮ್ಮ ಪರ್ಸ್‌ನಲ್ಲಿ ಇರಬೇಕು, ಇದು ನಿಮ್ಮ ಚರ್ಮದ ರಕ್ಷಣೆಗೆ
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: May 06, 2025 | 4:51 PM

ಮಹಿಳೆಯರಿಗೆ ಈ ಬೇಸಿಗೆಯಲ್ಲಿ (summer) ತಮ್ಮ ಬ್ಯೂಟಿ ಬಗ್ಗೆ ತುಂಬಾ ಕಾಳಜಿ ಇರುತ್ತದೆ. ತಮ್ಮ ದೇಹ ಸೌಂದರ್ಯಕ್ಕೆ ಹಾಗೂ ಮುಖಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇದು ಎಲ್ಲ ಮಹಿಳೆಯರಿಗೂ ಸಹಜ, ಅದರಲ್ಲೂ ಯುವತಿಯರು ಒಂದು ಕೈ ಹೆಚ್ಚು. ಇದರ ಜತೆಗೆ ತಮ್ಮ ಆರೋಗ್ಯ ಹಾಗೂ ಚರ್ಮದ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಈ ಬೇಸಿಗೆಯಲ್ಲಿ ಮಹಿಳೆಯರ ಚರ್ಮದಿಂದ ತುಂಬಾ ಸಮಸ್ಯೆಯನ್ನು ಅನುಭವಿಸುತ್ತಾರೆ. ಯಾಕೆಂದರೆ ಅವರ ಚರ್ಮ ತುಂಬ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ಚರ್ಮದ ಹೊಳಪನ್ನು ಹೆಚ್ಚಿಸಲು ಕೆಲವು ವಸ್ತುಗಳು ನಿಮ್ಮ ಬಳಿ ಇರಬೇಕು. ಅವುಗಳು ಯಾವುವು ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಮುಖದ ಮೇಕಪ್ ಬೇಗನೆ ಹಾಳಾಗುತ್ತದೆ. ಅದರಲ್ಲೂ ಈ ಸೂರ್ಯ ಬೆಳಕು ನೇರವಾಗಿ ಮುಖ ಬಿದ್ದರೆಮ ಎಲ್ಲ ಮೇಕಪ್​​​ ಮಂಗಮಾಯ, ಜತೆಗೆ ಮುಖದ ಕಾಂತಿಗೂ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದ ಆಫೀಸ್​ ಅಥವಾ ಸಮಾರಂಭಗಳಿಗೆ ಹೋಗಲು ಮುಜುಗರ ಆಗಬಹುದು, ಅದಕ್ಕಾಗಿ ನಿಮ್ಮ ಪರ್ಸ್‌ನಲ್ಲಿ ಈ ಕೆಲವೊಂದು ವಸ್ತುಗಳು ಇರಬೇಕು.

  • ಫೇಸ್ ವೈಪ್‌ : ಬೇಸಿಗೆಯ ದಿನಗಳಲ್ಲಿ ಯಾವಾಗಲೂ ನಿಮ್ಮ ಬ್ಯಾಗ್​​ ಅಥವಾ ಪರ್ಸ್‌ನಲ್ಲಿ ಒಂದು ಬಟ್ಟೆಯನ್ನು ಇಟ್ಟುಕೊಂಡಿರಬೇಕು. ಇದು ಬೆವರು ಮತ್ತು ಧೂಳನ್ನು ಸ್ವಚ್ಛಗೊಳಿಸಲು ನಿಮಗೆ ತುಂಬಾ ಉಪಯುಕ್ತ, ಬೆವರಿನಿಂದ ಜಿಡ್ಡಾಗಿ ಮಾರ್ಪಟ್ಟಿರುವ ನಿಮ್ಮ ಮುಖವನ್ನು ಮತ್ತೆ ಸ್ವಚ್ಛಗೊಳಿಸುತ್ತದೆ.
  • ಸನ್‌ಸ್ಕ್ರೀನ್ ಲೋಷನ್ ಅಥವಾ ಕ್ರೀಮ್: ಮನೆಯಿಂದ ಹೊರಡುವಾಗ ನೀವು ಖಂಡಿತವಾಗಿಯೂ ನಿಮ್ಮ ಮುಖಕ್ಕೆ ಸನ್‌ಸ್ಕ್ರೀನ್ ಕ್ರೀಮ್ ಅಥವಾ ಲೋಷನ್ ಹಚ್ಚಿಕೊಳ್ಳಬೇಕು, ಪ್ರತಿದಿನ ಇದನ್ನು ನಿಮ್ಮ ಬ್ಯಾಗಿನಲ್ಲಿಯೂ ಇಟ್ಟುಕೊಳ್ಳಬೇಕು. ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ಇದು ಬೇಕಾಗುತ್ತದೆ.
  • ಫೇಸ್ ಮಿಸ್ಟ್ ಅಥವಾ ರೋಸ್ ವಾಟರ್ ಸ್ಪ್ರೇ : ಬೇಸಿಗೆಯಲ್ಲಿ ಮುಖವು ಮಂದವಾಗುತ್ತದೆ ಮತ್ತು ಹೊಳಪನ್ನು ಕಳೆದುಕೊಳ್ಳುತ್ತದೆ. ನಿಮ್ಮ ಬ್ಯಾಗ್​​ ಅಥವಾ ಪರ್ಸ್ ನಲ್ಲಿ​​  ಇಟ್ಟುಕೊಂಡಿರಬೇಕು. ಅಗತ್ಯವಿರುವಾಗಲೆಲ್ಲಾ ನಿಮ್ಮ ಚರ್ಮವನ್ನು ತಾಜಾವಾಗಿರಿಸಿಕೊಳ್ಳಬಹುದು.
  • ಸನ್ ಪ್ರೊಟೆಕ್ಟ್ ಲಿಪ್ ಬಾಮ್ : ಮುಖದ ಜತೆಗೆ ತುಟಿಯ ಸೌಂದರ್ಯವನ್ನು ಕೂಡ ಹೆಚ್ಚಿಸಬೇಕು. ಸನ್‌ಸ್ಕ್ರೀನ್ ಲೋಷನ್ ಜೊತೆಗೆ, ನಿಮ್ಮ ಬ್ಯಾಗ್‌ನಲ್ಲಿ ಲಿಪ್ ಬಾಮ್ ಅನ್ನು ಸಹ ಇಟ್ಟುಕೊಳ್ಳಬೇಕು. ಇದು ತುಟಿ ವರ್ಣದ್ರವ್ಯವನ್ನು ತಡೆಯುತ್ತದೆ. ಸೂರ್ಯನ ಬೆಳಕಿನಿಂದಾಗಿ ತುಟಿಗಳು ಕಪ್ಪಾಗಲು ಪ್ರಾರಂಭಿಸುತ್ತವೆ, ಆದ್ದರಿಂದ ವ್ಯಕ್ತಿಯು ಸೂರ್ಯನ ರಕ್ಷಣೆಯ ಲಿಪ್ ಬಾಮ್ ಅನ್ನು ಹಚ್ಚುತ್ತಲೇ ಇರಬೇಕು.
  • ಟೋಪಿ : ಬೇಸಿಗೆಯಲ್ಲಿ ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಟೋಪಿಯನ್ನು ಹಾಕಬೇಕು. ಯಾಕೆಂದರೆ ಈ ಬಿಸಿಲು ಮುಖಕ್ಕೆ ಮಾತ್ರವಲ್ಲ ತಲೆಗೂ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ನಿಮ್ಮ ಜತೆಗೆ ಟೋಪಿಯನ್ನು ಇಟ್ಟುಕೊಳ್ಳುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ