AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಬೆಳಿಗ್ಗೆ ಸ್ಟಾರ್​​ ಹೂವಿನ ನೀರು ಸೇವಿಸಿ, ದೇಹದ ಎಲ್ಲ ಭಾಗಗಳು ಶುದ್ಧ

ಚಕ್ರಮೊಗ್ಗಿನ ಅಥವಾ ಸ್ಟಾರ್​​ ಹೂ ಭಾರತೀಯ ಅಡುಗೆಯಲ್ಲಿ ಇದೆ ಇರುತ್ತದೆ. ಅದು ಬಹಳ ಅಗತ್ಯವು ಕೂಡ ಹೌದು, ಬಿರಿಯಾನಿ, ಪಲಾವ್, ಚಿಕನ್ ರೆಸಿಪಿಗಳನ್ನು ಮಾಡಲು ಕೂಡ ಚಕ್ರಮೊಗ್ಗಿನ ಅಥವಾ ಸ್ಟಾರ್​​ ಹೂ ಬೇಕು. ಆದರೆ ಇದರಲ್ಲಿ ಎಷ್ಟೊಂದು ಆರೋಗ್ಯ ರಹಸ್ಯಗಳು ಅಡಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸುವಾಸನೆ ಜತೆಗೆ ಆರೋಗ್ಯಕ್ಕೆ ಇದು ಒಳ್ಳೆಯದು ಎಂದು ಹೇಳಾಗಿದೆ. ಹಾಗಾದರೆ ಪ್ರತಿದಿನ ಬೆಳಿಗ್ಗೆ ಹೀಗೆ ಮಾಡಿ.

ಪ್ರತಿದಿನ ಬೆಳಿಗ್ಗೆ ಸ್ಟಾರ್​​ ಹೂವಿನ ನೀರು ಸೇವಿಸಿ, ದೇಹದ ಎಲ್ಲ ಭಾಗಗಳು ಶುದ್ಧ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: May 06, 2025 | 3:31 PM

Share

ಬಿರಿಯಾನಿ, ಪಲಾವ್, ಚಿಕನ್ ರೆಸಿಪಿಗಳನ್ನು ಮಾಡಲು ಕೂಡ ಚಕ್ರ ಮೊಗ್ಗಿನ ಅಥವಾ ಸ್ಟಾರ್​​ ಹೂ, ಅನೈಸ್​​​ ಹೂವು ಬೇಕೇಬೇಕು. ಇದು ಕೇವಲ  ರೆಸಿಪಿಗಳಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು (Health) . ಇದೊಂದು ಪ್ರಾಚೀನ ಕಾಲದಿಂದಲ್ಲೂ ಆರೋಗ್ಯಕ್ಕೆ ಸೂಕ್ತ ಆಹಾರವಾಗಿದೆ. ಸುವಾಸನೆ ಇರುವ ಕಾರಣಕ್ಕೆ ಸ್ಟಾರ್​​ ಹೂವನ್ನು ಎಲ್ಲದಕ್ಕೂ ಬಳಸುತ್ತಾರೆ. ಜತೆಗೆ ಇದು ನೈಸರ್ಗಿಕವಾಗಿದೆ. ಸ್ಟಾರ್​​ ಹೂವಿನ ನೀರನ್ನು ಕುಡಿಯುವುದು (star anise water) ಅನೇಕ ಆರೋಗ್ಯ ಪ್ರಯೋಜನಗಳು ಇವೆ. ಒಟ್ಟಾರೆ ದೇಹದ ಯೋಗಕ್ಷೇಮಕ್ಕೆ ಹೇಗೆ ಕೊಡುಗೆ ನೀಡುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಪ್ರತಿದಿನ ಬೆಳಿಗ್ಗೆ ಈ ಸ್ಟಾರ್​​ ಹೂವಿನ ನೀರನ್ನು ಕಷಾಯದ ರೀತಿಯಲ್ಲಿ ಕುಡಿದರೆ ಐದು ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು. ದೈನಂದಿನ ಜೀವನದಲ್ಲಿ ಇದನ್ನು ಹೇಗೆ ಬಳಸುವುದು, ಅದಕ್ಕಿರುವ ಕ್ರಮಗಳೇನು, ಇದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಎಂಬ ಬಗ್ಗೆ ಆಹಾರ ತಜ್ಞ ಮತ್ತು ಮಧುಮೇಹ ಶಿಕ್ಷಣ ತಜ್ಞ ಕನಿಕ್ಕ ಮಲ್ಹೋತ್ರಾ ಹೇಳಿದ್ದಾರೆ. ಅವರ ಪ್ರಕಾರ, ಸ್ಟಾರ್​​ ಹೂವಿನ ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳನ್ನು ಇಲ್ಲಿ ವಿವರಿಸಿದ್ದಾರೆ.

ನಿರೋಧಕಗಳಲ್ಲಿ ಸಮೃದ್ಧವಾಗಿದೆ: ಸ್ಟಾರ್ ಅನೈಸ್​​​ ನಿರೋಧಕಗಳಿಂದ ತುಂಬಿದ್ದು ಅದು ದೇಹದಲ್ಲಿರುವ ಹಾನಿಕಾರಕ ಅಂಶಗಳನ್ನು ಹೊರಗೆ ಹಾಕುತ್ತದೆ. ಹೃದಯ ಕಾಯಿಲೆ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ
Image
15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದು ಬೆಂಡೆಕಾಯಿ ಮಸಾಲೆ
Image
ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ
Image
ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ರೈಲಿನ ಈ ಬೋಗಿಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ನೋ ಎಂಟ್ರಿ

ಉರಿಯೂತ ನಿವಾರಕ : ಇದರಲ್ಲಿ ಉರಿಯೂತ ನಿವಾರಕ ಗುಣಲಕ್ಷಣಗಳು ಇವೆ. ಸಂಧಿವಾತದಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಸ್ಟಾರ್ ಸೋಂಪು ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಬಹುದು, ಉತ್ತಮ ಕರುಳಿನ ಆರೋಗ್ಯಕ್ಕಾಗಿ  ಹೊಟ್ಟೆ ಉಬ್ಬರ ಮತ್ತು ಅಜೀರ್ಣವನ್ನು ಕಡಿಮೆ ಮಾಡಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನೈಸರ್ಗಿಕ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿರುವ ಸ್ಟಾರ್​​ ಹೂ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ವಿಶೇಷವಾಗಿ ಶೀತ ಮತ್ತು ಜ್ವರದ ಸಮಯದಲ್ಲಿ ಹೆಚ್ಚು ಇದು ಪ್ರಯೋಜಕಾರಿಯಾಗಿದೆ.

ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ: ಈ ಸ್ಟಾರ್​ ಹೂ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ವಯಸ್ಸಿನ ಮಿತಿಗಳು ಗೋಚರಿಸದಂತೆ ಮಾಡುತ್ತದೆ. ಮೈಬಣ್ಣಕ್ಕೆ ನೈಸರ್ಗಿಕ ವರ್ಧಕವನ್ನು ನೀಡುತ್ತವೆ.

ಸ್ಟಾರ್ ಸೋಂಪು ನೀರು ಹೇಗೆ ತಯಾರಿಸುವುದು:

1-2 ಸ್ಟಾರ್ ಸೋಂಪುನ್ನು ಒಂದು ಲೋಟ ನೀರು ಮತ್ತು ನಿಂಬೆ ಚೂರುಗಳು ಅಥವಾ ಪುದೀನ ಎಲೆಗಳಂತಹ ಆಯ್ಕೆ ವಸ್ತುಗಳನ್ನು ಹಾಕಿ ಒಂದು ಗ್ಲಾಸ್ ಅಥವಾ ಬಟ್ಟಲಿನಲ್ಲಿ ಇರಿಸಿ. ರಾತ್ರಿಯಿಡೀ ಅಥವಾ ಕನಿಷ್ಠ 2-4 ಗಂಟೆಗಳ ಕಾಲ ನೆನೆಯಲು ಬಿಡಿ. ಇದು ಪೋಷಕಾಂಶಗಳು ಮತ್ತು ಸುವಾಸನೆಗಳನ್ನು ನೀರಿನಲ್ಲಿ ತುಂಬಲು ಬಿಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ಟಾರ್ ಅನೀಸ್ ನೀರನ್ನು ಕುಡಿಯಿರಿ. ಈ ಅಭ್ಯಾಸವನ್ನು ಮಾಡಿಕೊಂಡರೆ ಚಯಾಪಚಯ ಕ್ರಿಯೆಯನ್ನುಸುಧಾರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ದಿನಕ್ಕೆ ಉಲ್ಲಾಸಕರ ಆರಂಭವನ್ನು ನೀಡುತ್ತದೆ. ಬೆಚ್ಚಗಿನ ನೀರಿನಲ್ಲಿ ಇದನ್ನು ಕುಡಿದರೆ ಇನ್ನು ಉತ್ತಮ.

ಇದನ್ನೂ ಓದಿ: ಐಸ್ ಕ್ರೀಂ ಮೇಲೆ ಗರಿಗರಿಯಾದ ಆಲೂಗಡ್ಡೆ ಫ್ರೈಸ್ ಹಾಕಿದ್ರೆ ಹೇಗಿರುತ್ತೆ ಗೊತ್ತಾ?

ಸ್ಟಾರ್ ಸೋಂಪು ನೀರಿನಿಂದ ಆಗುವ ಅಡ್ಡಪರಿಣಾಮಗಳು:

1. ಸ್ಟಾರ್​​ ಹೂವನ್ನು ತೆಗೆದುಕೊಳ್ಳವಾಗ ಎಚ್ಚರವಿರಲಿ, ಸ್ಟಾರ್​​ ಹೂ ತೆಗೆದುಕೊಳ್ಳುವ ಬದಲು ಜಪಾನಿನ ಸ್ಟಾರ್ ಸೋಂಪು (ಇಲಿಸಿಯಮ್ ಅನಿಸಾಟಮ್) ತೆಗೆದುಕೊಂಡರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

2. ನರಗಳಿಗೆ ಅಡ್ಡಪರಿಣಾಮಗಳ ಸಾಧ್ಯತೆ.

3.ಚಿಕ್ಕ ಮಕ್ಕಳಿಗೆ ಸ್ಟಾರ್ ಸೋಂಪು ನೀಡುವುದನ್ನು ತಪ್ಪಿಸುವುದು ಉತ್ತಮ.

4.ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಜಾಗರೂಕರಾಗಿರಬೇಕು.

5.ಮಿತಿಮೀರಿದ ಸೇವನೆಯು ಸೂಕ್ಷ್ಮತೆ ಅಥವಾ ಪ್ರತಿಕೂಲ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ