ದುಬಾರಿ ಉತ್ಪನ್ನಗಳ ಅವಶ್ಯಕತೆಯೇ ಇಲ್ಲ, ಈ ಸಿಂಪಲ್‌ ಮನೆಮದ್ದಿನಿಂದ ಕತ್ತಿನ ಸುತ್ತಲಿನ ಕಪ್ಪು ಕಲೆಯನ್ನು ನಿವಾರಿಸಬಹುದು

ಮುಖದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಷ್ಟು ಹೆಚ್ಚಿನವರು ಕುತ್ತಿಗೆ ಆರೈಕೆಯ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಕುತ್ತಿಗೆಯು ಕಪ್ಪಾಗಿ ಕಾಣುತ್ತದೆ. ಈ ಕಪ್ಪು ಕಲೆಗಳು ಸ್‌ಔಂದರ್ಯವನ್ನೇ ಹಾಳು ಮಾಡುತ್ತವೆ. ಹೀಗೆ ನಿಮ್ಮ ಕತ್ತಿನ ಸುತ್ತಲೂ ಸಹ ಕಪ್ಪು ಕಲೆಗಳಿವೆಯಾ, ಇದರಿಂದ ಮುಕ್ತಿ ಪಡೆಯಲು ಯಾವುದೇ ದುಬಾರಿ ಚಿಕಿತ್ಸೆ, ಉತ್ಪನ್ನಗಳ ಅವಶ್ಯಕತೆಯಿಲ್ಲ ಬದಲಾಗಿ ಈ ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.

ದುಬಾರಿ ಉತ್ಪನ್ನಗಳ ಅವಶ್ಯಕತೆಯೇ ಇಲ್ಲ, ಈ ಸಿಂಪಲ್‌ ಮನೆಮದ್ದಿನಿಂದ ಕತ್ತಿನ ಸುತ್ತಲಿನ ಕಪ್ಪು ಕಲೆಯನ್ನು ನಿವಾರಿಸಬಹುದು
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 13, 2025 | 7:03 PM

ಕೆಲವರ ಮುಖ ಬಿಳಿಯಾಗಿದ್ದರೂ ಸಹ ಕತ್ತು (dark neck) ತುಂಬಾ ಕಪ್ಪಾಗಿರುತ್ತವೆ.  ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಹಾರ್ಮೋನುಗಳ ಬದಲಾವಣೆಗಳು ಅಥವಾ ಸತ್ತ ಚರ್ಮದ ಕೋಶಗಳ ಸಂಗ್ರಹವಾಗುವುದು ಇವೆಲ್ಲವೂ ಇದಕ್ಕೆ ಮುಖ್ಯ ಕಾರಣ. ಹೆಚ್ಚಿನವರು ಮುಖದ ಆರೈಕೆಯ ಬಗ್ಗೆ ಕಾಳಜಿ ವಹಿಸುವ ಹಾಗೆ ಕುತ್ತಿಗೆಯ ಆರೈಕೆಯ ಬಗ್ಗೆ ಗಮನಹರಿಸುವುದಿಲ್ಲ. ಇನ್ನೂ ಕೆಲವರು ಈ ಕಪ್ಪುಕಲೆಗಳನ್ನು ಹೋಗಲಾಡಿಸಲು ದುಬಾರಿ ಚಿಕಿತ್ಸೆ, ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಕತ್ತಿನ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಇದ್ಯಾವುದರ ಅವಶ್ಯಕತೆಯೂ ಇಲ್ಲ, ಈ ಕೆಲವು ಮನೆ ಮದ್ದುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕತ್ತಿನ ಸುತ್ತಲಿನ ಕಪ್ಪು ಕಲೆಯನ್ನು ನಿವಾರಿಸಲು ಸಹಕಾರಿ ಈ ಮನೆಮದ್ದುಗಳು:

ನಿಂಬೆ ಮತ್ತು ಅರಿಶಿನ ಪೇಸ್ಟ್: ನಿಂಬೆಹಣ್ಣು ಬ್ಲೀಚಿಂಗ್ ಮತ್ತು ಎಕ್ಸ್‌ಫೋಲಿಯೇಟಿಂಗ್ ಏಜೆಂಟ್‌ಗಳನ್ನು ಹೊಂದಿದ್ದು ಅದು ಕಪ್ಪು ಕಲೆಗಳನ್ನು ತೆಗೆದುಹಾಕಲು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅರಿಶಿನವು ಮೆಲನಿನ್ ಉತ್ಪಾದನೆಯನ್ನು ತಡೆಯುವ ಮತ್ತು ಚರ್ಮದ ಹೊಳಪು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಹಾಗಾಗಿ ಅರಿಶಿನಕ್ಕೆ ಕೆಲವು ಹನಿ ನಿಂಬೆ ಸೇರಿಸಿ ಪೇಸ್ಟ್ ಮಾಡಿ. ಕತ್ತಿನ ಸುತ್ತಲಿರುವ ಕಪ್ಪು ಕಲೆಗಳ ಮೇಲೆ ಹಚ್ಚಿ ಕೆಲವು ನಿಮಿಷಗಳ ಕಾಲ ಬಿಡಿ. ಅದು ಒಣಗಿದ ನಂತರ, ಅದನ್ನು ನಿಧಾನವಾಗಿ ಉಜ್ಜಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ಕಾಫಿ ಮತ್ತು ಟೊಮೆಟೊ ಪೇಸ್ಟ್: ಕಾಫಿ ಮತ್ತು ಟೊಮೆಟೊ ಪೇಸ್ಟ್ ಕುತ್ತಿಗೆಯ ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕಾಫಿಯಲ್ಲಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಎಫ್ಫೋಲಿಯೇಟಿಂಗ್ ಗುಣಲಕ್ಷಣಗಳಿವೆ ಮತ್ತು ಇದರಲ್ಲಿರುವ  ಉತ್ಕರ್ಷಣ ನಿರೋಧಕಗಳು ಮತ್ತು ಕೆಫೀನ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಟೊಮೆಟೊದಲ್ಲಿ ಲೈಕೋಪೀನ್ ಇದ್ದು, ಇದು ಮೆಲನಿನ್‌ ವರ್ಣದ್ರವ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಕಾಫಿ ಪುಡಿಯನ್ನು ಟೊಮೆಟೊ ರಸದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಕುತ್ತಿಗೆಗೆ ಹಚ್ಚಿ, 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

ಕಡಲೆ ಹಿಟ್ಟು ಮತ್ತು ಮೊಸರು: ಕಡಲೆ ಹಿಟ್ಟು ಕಪ್ಪು ಕಲೆಗಳನ್ನು ಕಡಿಮೆ ಮಾಡಲು, ಸತ್ತ ಚರ್ಮದ ಕೋಶಗಳನ್ನು  ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಚರ್ಮದಿಂದ ಎಲ್ಲಾ ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತದೆ, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಒಂದು ಬಟ್ಟಲಿನಲ್ಲಿ 2 ಟೀ ಚಮಚ ಕಡಲೆ ಹಿಟ್ಟನ್ನು ತೆಗೆದುಕೊಂಡು ಮೊಸರಿನೊಂದಿಗೆ ಬೆರೆಸಿ. ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ಅದು ಒಣಗಿದ ನಂತರ, ಅದನ್ನು ಸ್ಕ್ರಬ್‌ ಮಾಡಿ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: ಹಲ್ಲುಜ್ಜಲು ಮಾತ್ರವಲ್ಲ, ವಸ್ತುಗಳನ್ನು ಸ್ವಚ್ಛಗೊಳಿಸಲು ಸಹ ನೀವು ಟೂತ್‌ಪೇಸ್ಟ್‌ ಬಳಸಬಹುದು

ಅಡಿಗೆ ಸೋಡಾದೊಂದಿಗೆ ರೋಸ್ ವಾಟರ್: ಕುತ್ತಿಗೆಯಿಂದ ಕಪ್ಪು ಕಲೆಗಳನ್ನು ತೆಗೆದುಹಾಕುವಲ್ಲಿ ಅಡಿಗೆ ಸೋಡಾ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಅಡಿಗೆ ಸೋಡಾ ಕೊಳೆಯನ್ನು ತೆಗೆದುಹಾಕುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಅಡಿಗೆ ಸೋಡಾವನ್ನು ರೋಸ್ ವಾಟರ್ ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಕುತ್ತಿಗೆಗೆ ಚೆನ್ನಾಗಿ ಹಚ್ಚಿ 7-8 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ನೀರಿನಿಂದ ತೊಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 13 November 25