Weight Loss: ಈ ಹಣ್ಣುಗಳ ಎಲೆಗಳನ್ನು ತಿಂದು ನೀವು ತೂಕ ಇಳಿಸಬಹುದು

| Updated By: ನಯನಾ ರಾಜೀವ್

Updated on: May 15, 2022 | 10:23 AM

Weight Loss:ತೂಕ (Weight)ಹೆಚ್ಚಳ ಸುಲಭ ಆದರೆ ತೂಕ ಇಳಿಕೆ ತುಂಬಾ ಕಠಿಣ, ನಮ್ಮ ಆಹಾರ ಪದ್ಧತಿ ಸೇರಿದಂತೆ ನಮ್ಮ ಇಡೀ ಜೀವನಶೈಲಿಯೇ ಬದಲಾಗಿದೆ. ಇದು ಏಕಾಏಕಿ ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ತೂಕ ಇಳಿಕೆ( Weight Loss) ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ.

Weight Loss: ಈ ಹಣ್ಣುಗಳ ಎಲೆಗಳನ್ನು ತಿಂದು ನೀವು ತೂಕ ಇಳಿಸಬಹುದು
ಮಾವಿನ ಎಲೆ
Follow us on

ತೂಕ (Weight)ಹೆಚ್ಚಳ ಸುಲಭ ಆದರೆ ತೂಕ ಇಳಿಕೆ ತುಂಬಾ ಕಠಿಣ, ನಮ್ಮ ಆಹಾರ ಪದ್ಧತಿ ಸೇರಿದಂತೆ ನಮ್ಮ ಇಡೀ ಜೀವನಶೈಲಿಯೇ ಬದಲಾಗಿದೆ. ಇದು ಏಕಾಏಕಿ ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ತೂಕ ಇಳಿಕೆ( Weight Loss) ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ತೂಕ ಇಳಿಕೆಯಲ್ಲಿ ಕೆಲವು ಹಣ್ಣುಗಳು ಮಾತ್ರವಲ್ಲ ಅವುಗಳ ಎಲೆಗಳು ಕೂಡ ಸಹಕಾರಿಯಾಗಿವೆ.

ಪೇರಲೆ ಎಲೆಗಳ ಉಪಯೋಗವೇನು?
ಪೇರಲೆ ಎಲೆಯು ಅಜೀರ್ಣವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಸರಿದೂಗಿಸುತ್ತದೆ. ಹಾಗೆಯೇ ಪೇರಲೆ ಎಲೆಗಳನ್ನು ತಿನ್ನುವುದರಿಂದ ಒಂದೊಮ್ಮೆ ಬಾಯಿಯಿಂದ ಕೆಟ್ಟವಾಸನೆ ಬರುತ್ತಿದ್ದರೆ ಅದನ್ನು ಕಡಿಮೆ ಮಾಡಬಹುದು, ಹಾಗೆಯೇ ಪೇರಲೆ ಎಲೆಯಿಂದ ಹಲ್ಲುಗಳು ಕೂಡ ಸ್ವಚ್ಛವಾಗುತ್ತದೆ.

ಪೇರಲೆ ಹಣ್ಣಿನ ವಿವಿಧ ಪ್ರಯೋಜನಗಳ ಬಗ್ಗೆ ತಿಳಿಯೋಣ

ಕೂದಲಿಗೆ ಒಳ್ಳೆಯದು: ಪೇರಲೆ ಎಲೆಗಳನ್ನು ಅರೆದು ತಲೆಗೆ ಹಚ್ಚಿದರೆ ಕೂದಲು ಹೊಳೆಯುವಂತಾಗುತ್ತದೆ.

ತೂಕ ನಷ್ಟದಲ್ಲಿ ಸಹಕಾರಿ: ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಅಲ್ಲದೆ, ಈ ಎಲೆಗಳು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ, ಆದ್ದರಿಂದ ಇದನ್ನು ತಿನ್ನುವುದರಿಂದ ಬೊಜ್ಜು ದೂರವಾಗುತ್ತದೆ.

ಅತಿಸಾರದಿಂದ ಮುಕ್ತಿ: ಇದಕ್ಕೆ ಅರ್ಧ ಕಪ್ ಅಕ್ಕಿ ಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ದಿನಕ್ಕೆರಡು ಬಾರಿ ಕುಡಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. ಪೇರಲ ಎಲೆಗಳು ಅತಿಸಾರದ ಸಮಸ್ಯೆಯಲ್ಲಿ ಬಹಳ ಸಹಾಯಕವಾಗಿದೆ ಎಂದು ಸಾಬೀತುಪಡಿಸಬಹುದು.

ಮಾವಿನ ಎಲೆಗಳಿಂದ ಏನೇನು ಪ್ರಯೋಜನ
ಕೇವಲ ರುಚಿಯಲ್ಲಷ್ಟೇ ಅಲ್ಲದೆ, ಮಾನವ ದೇಹಕ್ಕೆ ಮಾವಿನ ಆರೋಗ್ಯದ ಪ್ರಯೋಜನಗಳು ಅಸಂಖ್ಯಾತವಾಗಿವೆ. ಕೇವಲ ಮಾವಿನ ಹಣ್ಣಿನ ಕಾಲದಲ್ಲಿ ಮಾತ್ರ ಮಾವಿನ ಹಣ್ಣುಗಳು ತಮ್ಮ ಕಾರುಬಾರು ನಡೆಸುತ್ತವೆ.
ಮಾವಿನ ಎಲೆಗಳು ಮನುಷ್ಯನ ವಿವಿಧ ಕಾಯಿಲೆಗಳನ್ನು ನಿವಾರಣೆ ಮಾಡಲು ಸಾಕಷ್ಟು ಪ್ರಯೋಜನಕಾರಿ ರಾಸಾಯನಿಕ ಸಂಯುಕ್ತಗಳನ್ನು ತನ್ನಲ್ಲಿ ಹೊಂದಿರುತ್ತವೆ. ಮುಖ್ಯವಾಗಿ ಮಧುಮೇಹ ಔಷಧಿಗಳಾಗಿ.

ಮಧುಮೇಹಕ್ಕೆ ಅಥವಾ ಸಕ್ಕರೆ ಕಾಯಿಲೆಗೆ ಔಷಧಿ
ಆಂಜಿಯೋಪತಿ ಮಧುಮೇಹ ಮತ್ತು ರೆಟಿನೋಪತಿ ಮಧುಮೇಹಕ್ಕೆ ಚಿಕಿತ್ಸೆ ನೀಡಲು ಮಾವಿನ ಎಲೆ ಚಹಾವನ್ನು ಕುಡಿಯುವುದು ಅತ್ಯುತ್ತಮ ಮಾರ್ಗ ಎಂದು ಈಗಾಗಲೇ ಸಾಬೀತಾಗಿದೆ. ಇದು ಹೈಪರ್ಗ್ಲೈಸೀಮಿಯಾಕ್ಕೂ ಚಿಕಿತ್ಸೆ ನೀಡುತ್ತದೆ.
ಮಧುಮೇಹ ಔಷಧಿಯಾಗಿ ಮಾವಿನ ಎಲೆಗಳ ಆರೋಗ್ಯ ಪ್ರಯೋಜನಗಳಲ್ಲಿ ಒಂದನ್ನು ಪಡೆಯಲು, 3 ರಿಂದ 4 ಮಾವಿನ ಎಲೆಗಳನ್ನು ತೆಗೆದುಕೊಂಡು, ನಂತರ ಅವುಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಚೆನ್ನಾಗಿ ಕುದಿಸಿ. ಸುಮಾರು 24 ಗಂಟೆಗಳ ಕಾಲ ಹಾಗೆ ಬಿಡಿ. ಮರು ದಿನ ಬೆಳಿಗ್ಗೆ, ಆ ಬೇಯಿಸಿದ ನೀರನ್ನು ಫಿಲ್ಟರ್ ಮಾಡಿ ಮತ್ತು ಉಪಾಹಾರಕ್ಕೆ ಮೊದಲು ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬನ್ನಿ. ನಿಮ್ಮ ಮಧುಮೇಹ ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತಾ ಹೋಗುತ್ತದೆ.

ಬಾಯಿಯ ಶುಚಿತ್ವ ಕಾಪಾಡಿಕೊಳ್ಳಲು ಸಹಕಾರಿ
ಯಾರಿಗೆ ಆದರೂ ಆರೋಗ್ಯಕರ ವಸಡು ಮತ್ತು ಆರೋಗ್ಯಕರ ಹಲ್ಲುಗಳು ಸುಂದರವಾದ ನಗುವಿನ ಒಂದು ಭಾಗವಾಗಿದೆ ಮತ್ತು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ಹೊಳೆಯುವ ಬಿಳಿ ಹಲ್ಲುಗಳನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ.
ಮಾವಿನ ಎಲೆಗಳಲ್ಲಿ ಟ್ಯಾನಿನ್ನ ಅಸ್ತಿತ್ವದ ಕಾರಣ, ಬೆಟೆಲ್ ಎಲೆಗಳಲ್ಲಿರುವ ಅದೇ ಸಂಯುಕ್ತಗಳು, ಮಾವಿನ ಎಲೆಗಳಲ್ಲೂ ಇದ್ದು, ಅನಾರೋಗ್ಯಕರ ಒಸಡುಗಳು ಮತ್ತು ಹಲ್ಲುಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ ಎಂದು ತಿಳಿದು ಬಂದಿದೆ.

ಸುಟ್ಟ ಗಾಯಗಳನ್ನು ಗುಣಪಡಿಸಬಲ್ಲದು
ನೀವು ಆಕಸ್ಮಿಕವಾಗಿ ಸುಟ್ಟುಕೊಂಡರೆ ಮತ್ತು ಆ ತಕ್ಷಣದಲ್ಲಿ ಯಾರೂ ಸಹಾಯಕ್ಕೆ ಬರದಿದ್ದರೆ, ಒಂದು ವೇಳೆ ನೀವು ನಿಮ್ಮ ಮನೆಯ ಮುಂದೆ ಮಾವಿನ ಮರವನ್ನು ಹೊಂದಿದ್ದರೆ, ಸುಟ್ಟ ಗಾಯಗಳನ್ನು ನಿವಾರಿಸಲು ಸರಳ ಮಾರ್ಗವಾಗಿದೆ. ಒಣಗಿದ ಮಾವಿನ ಎಲೆಗಳನ್ನು ತೆಗೆದು ಕೊಂಡು ಅವುಗಳನ್ನು ಬೂದಿಯಾಗುವವರೆಗೂ ಸುಟ್ಟು, ಕೇವಲ ಅದರ ಭಸ್ಮವನ್ನು ಗಾಯದ ಮೇಲೆ ಸಿಂಪಡಿಸಿ.

ಲಕ್ಷ್ಮಣ ಫಲ
ಈ ಹಣ್ಣಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧವೆಂದು ಪರಿಗಣಿಸಲಾಗುತ್ತದೆ. ಇದನ್ನು ಇಂಗ್ಲಿಷ್ ನಲ್ಲಿ Soursop Fruit ಎಂದು ಕರೆಯಲಾಗುತ್ತದೆ. ಹಾಗೂ, ಇದನ್ನು “ಹನುಮಾನ್ ಫಲ” ಎಂದೂ ಕರೆಯುತ್ತಾರೆ. ಇದರ ಸಸ್ಯಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ.

ಇತಿಹಾಸಕಾರರ ಪ್ರಕಾರ, ಮೆಕ್ಸಿಕೊ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ಹಣ್ಣು ಮೊದಲು ಕಂಡುಬಂದಿದೆ. ಈ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳು ಕಂಡುಬರುತ್ತವೆ, ಆದ್ದರಿಂದ ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ವಿಶೇಷವಾಗಿ ಮಧುಮೇಹ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಇದು ಸಂಜೀವಿನಿ ಇದ್ದಂತೆ. ಇದು ಆಂಟಿ-ಡಯಾಬಿಟಿಸ್ ಗುಣಗಳನ್ನು ಹೊಂದಿದೆ.

ಮಧುಮೇಹಕ್ಕೆ ಲಕ್ಷ್ಮಣ ಫಲ ಎಲೆಗಳ ಟೀ ಸೇವಿಸುವುದು ಹೇಗೆ?
ಇದಕ್ಕಾಗಿ, ಲಕ್ಷ್ಮಣ ಫಲ ಎಲೆಗಳಿಂದ ಟೀ ತಯಾರಿಸಿ ಅದನ್ನು ಸೇವಿಸಿ. ರಿಸರ್ಚ್ ಗೇಟ್‌ ನ ಸಂಶೋಧನೆಯಲ್ಲಿ, ಸತತ 3 ದಿನಗಳವರೆಗೆ 200ML ಟೀ ಕುಡಿಯಲು ಸೂಚಿಸಲಾಗಿತ್ತು. ಈ ಸಂಶೋಧನೆಯ ಫಲಿತಾಂಶವು ತೃಪ್ತಿಕರವಾಗಿದೆ. ಈ ಹಣ್ಣಿನ ಎಲೆಗಳಿಂದ ತಯಾರಿಸಿದ ಟೀ ಕುಡಿಯುವುದರಿಂದ, ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ ಎಂದು ಕಂಡುಬಂದಿದೆ.

ಸೂಚನೆ: ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಹಾಗೂ ಮನೆಮದ್ದು ಆಧರಿತ ಲೇಖನವಾಗಿದೆ.

ಜೀವನಶೈಲಿ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sun, 15 May 22