Relationship: ಸಹನೆಯಿರಲಿ, ತಪ್ಪು ಒಪ್ಪಿಕೊಳ್ಳುವ ಮನೋಭಾವ ನಿಮ್ಮದಾಗಿರಲಿ

Conflict In Relationship:ಸಹನೆ ಕೇವಲ ಹೆಣ್ಣುಮಕ್ಕಳ ಸ್ವತ್ತಲ್ಲ, ಸಂಬಂಧ( Relationship)ವನ್ನು ಉಳಿಸಿಕೊಳ್ಳಲು ಬಯಸುವ ಪ್ರತಿಯೊಬ್ಬರೂ ಸಹನೆಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ.

Relationship: ಸಹನೆಯಿರಲಿ, ತಪ್ಪು ಒಪ್ಪಿಕೊಳ್ಳುವ ಮನೋಭಾವ ನಿಮ್ಮದಾಗಿರಲಿ
Relationship
Follow us
TV9 Web
| Updated By: ನಯನಾ ರಾಜೀವ್

Updated on: May 15, 2022 | 2:23 PM

ಸಹನೆ ಕೇವಲ ಹೆಣ್ಣುಮಕ್ಕಳ ಸ್ವತ್ತಲ್ಲ, ಸಂಬಂಧ( Relationship)ವನ್ನು ಉಳಿಸಿಕೊಳ್ಳಲು ಬಯಸುವ ಪ್ರತಿಯೊಬ್ಬರೂ ಸಹನೆಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಹಾಗೆಯೇ ತಪ್ಪು ಮಾಡಿಯೂ ವಾದ ಮಾಡದೇ ತಪ್ಪೊಪ್ಪಿಕೊಂಡಾಗ ನೀವು ದೊಡ್ಡವರಾಗುತ್ತೀರಿ, ನಿಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಕೂಡ ಮೂಡುವುದಿಲ್ಲ. ಎಲ್ಲವೂ ಸರಿಯಾಗಿದ್ದರೆ ಬದುಕು ಸುಂದರ. ದಾಂಪತ್ಯದಲ್ಲಿ ಒಂದು ಸಣ್ಣ ತಪ್ಪು ಕೂಡ ಸಂಬಂಧದಲ್ಲಿ ಕಂದಕ ಏರ್ಪಡುವಂತೆ ಮಾಡಬಹುದು. ಹೊಂದಾಣಿಕೆ ಮುಖ್ಯವಾಗಿದ್ದರೂ ಕೆಲವೊಮ್ಮೆ ಸಣ್ಣ ವಿಚಾರಗಳು ಬದುಕಿನ ಹಾದಿ ತಪ್ಪಿಸಿಬಿಡುತ್ತದೆ.

ವಿಚ್ಛೇದನ ಯಾಕಾಯಿತು ಎಂದು ಕೇಳಿದರೆ ಸಿಲ್ಲಿ ಕಾರಣಗಳು ಎದ್ದು ಕಾಣುತ್ತವೆ. ಬದುಕಿನ ಅರ್ಧಕ್ಕಿಂತ ಹೆಚ್ಚಿನ ಭಾಗ ಸಂಗಾತಿಯೊಂದಿಗೆ ಕಳೆಯಬೇಕು. ಯಾರೂ ಕೂಡ ಸರ್ವಜ್ಞನಾಗಿರಲು ಸಾಧ್ಯವಿಲ್ಲ. ಹೀಗಾಗಿ ತಪ್ಪುಗಳನ್ನು ಅನುಸರಿಸಿಕೊಂಡು, ಸಲಹೆಗಳನ್ನು ಪಾಲಿಸಿಕೊಂಡು ಬದುಕಿದರೆ ದಾಂಪತ್ಯ ಸೊಗಸಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ವಿಚಾರಗಳಿಗೂ ದಾಂಪತ್ಯ ಮುರಿದು ಬೀಳುತ್ತಿದೆ. ಒಂದು ಬಾರಿ ಕುಳಿತು ಮಾತನಾಡಿ ಎಲ್ಲಿ ಸಂಬಂಧದಲ್ಲಿ ಏರುಪೇರಾಗುತ್ತಿದೆ ಎನ್ನುವುದನ್ನು ಪರಾಮರ್ಶೆ ಮಾಡಿಕೊಂಡರೆ ಬಂಧ ಗಟ್ಟಿಯಾಗಿಸಿಕೊಳ್ಳಬಹುದು. ಆದರೆ ನೆನಪಿಡಿ ಸಿಲ್ಲಿ ಮ್ಯಾಟರ್‌ ಎಂದುಕೊಂಡ ವಿಷಯಗಳೇ ದೊಡ್ಡ ಆಘಾತಕ್ಕೆ ಕಾರಣವಾಗುತ್ತದೆ.

ಗೆಲ್ಲಲೇ ಬೇಕೆಂದು ಮಾತನಾಡಬೇಡಿ: ನೀವು ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ, ಹೀಗಾಗಿ ನಿಮ್ಮ ಸಂಗಾತಿ ಜತೆ ಚರ್ಚೆ ಮಾಡುವಾಗ ಏರು ಸ್ವರ ಬೇಡ, ಮತ್ತು ಈ ವಾದದಲ್ಲಿ ನಾನೇ ಗೆಲ್ಲಬೇಕು ಎನ್ನುವ ಮನಸ್ಥಿತಿಯನ್ನು ಮನಸ್ಥಿತಿಯನ್ನು ಬಿಟ್ಟಿಬಿಡಿ, ನಿಮ್ಮ ಗಮನ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಮಾತ್ರವಿರಲಿ.

ವಸ್ತುಗಳ ಮೇಲೆ ಕೋಪ ತೋರಿಸಬೇಡಿ: ಯಾವುದೇ ಕಾರಣಕ್ಕೂ ವಸ್ತುಗಳ ಮೇಲೆ ಕೋಪವನ್ನು ತೋರಿಸಬೇಡಿ, ನಿಮ್ಮ ಕೋಪವನ್ನು ಹಿಡಿತದಲ್ಲಿಟ್ಟುಕೊಳ್ಳಿ, ಒಮ್ಮೆ ಮನಸ್ಸು ಒಡೆದುಹೋದರೆ ಮರಳಿ ಜೋಡಿಸಲು ಸಾಧ್ಯವಿಲ್ಲ,

ನೀವು ಏನು ಮಾತನಾಡುತ್ತೀರಿ ಎಂಬುದು ಮುಖ್ಯವಲ್ಲ: ವಾದಕ್ಕೆ ನಿಂತಾದ ನೀವು ಏನು ಮಾತನಾಡುತ್ತೀರಿ ಎಂಬುದು ಮುಖ್ಯವಲ್ಲ ಆದರೆ ಯಾವ ಧಾಟಿಯಲ್ಲಿ ಮಾತನಾಡುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಪಾರ್ಟ್ನರ್​ ಅನ್ನು ದೂಷಿಸದೆ ನೀವು ಏನು ಹೇಳಬಯಸುತ್ತೀರೋ ಅದನ್ನು ನೇರವಾಗಿ ಹೇಳಿ. ​

ಡಿಪೆಂಡ್‌ ಆಗುವುದು: ಪ್ರತೀ ವ್ಯಕ್ತಿಗೂ ಸ್ವಾತಂತ್ರ್ಯವಿರುತ್ತದೆ. ಪ್ರತ್ಯೇಕ ಕನಸುಗಳಿರುತ್ತದೆ. ಎಲ್ಲದಕ್ಕೂ ಸಂಗಾತಿಯೇ ಬರಬೇಕು, ಅವರೇ ಮಾಡಬೇಕು ಎಂದು ಡಿಪೆಂಡ್‌ ಆಗುವುದು ತಪ್ಪು. ಎಲ್ಲ ಸಂದರ್ಭಗಳಲ್ಲೂ ಸಂಗಾತಿ ನಿಮ್ಮ ಜೊತೆಯಾಗಿಯೇ ಇರಲು ಸಾಧ್ಯವಿಲ್ಲ.

ಅಂತಹ ಸಂದರ್ಭಗಳನ್ನು ನಿಭಾಯಿಸಲು ಶಕ್ತರಾಗಿರಬೇಕು. ಯಾವ ಕೆಲಸಗಳನ್ನೂ ಅವರೇ ಮಾಡಲಿ ಎಂದು ಬಿಡುವುದು ಸರಿಯಲ್ಲ. ಮುಖ್ಯವಾಗಿ ಮನೆ ಕೆಲಸಗಳಲ್ಲಿ. ಅಡುಗೆ ಯಾರು ಮಾಡಿದರೆ ಏನು, ಖುಷಿಯಿಂದ ತಿಂದರೆ ಅದಕ್ಕಿಂತ ಸಂತಸ ಮತ್ತೊಂದಿಲ್ಲ. ಸಂಗಾತಿಗೆ ಡಿಪೆಂಡ್‌ ಆಗಿದ್ದಾಗ ಅವರ ತಾಳ್ಮೆಯ ಕಟ್ಟೆಯೂ ಒಡೆಯಬಹುದು. ಹೀಗಾಗಿ ನಿಮ್ಮ ಕೆಲಸಗಳನ್ನು ಆದಷ್ಟು ನೀವೇ ಮುಗಿಸಿಕೊಳ್ಳಿ.

ನಿಮ್ಮ ಸಂಗಾತಿ ನಿಮ್ಮ ಶತ್ರುವಲ್ಲ: ನಿಮ್ಮ ಪಾರ್ಟ್ನರ್ ನಿಮ್ಮ ಶತ್ರುವಲ್ಲ ಆಮೇಲೆ ಪರಿತಪಿಸುವಂತಹ ಮಾತುಗಳು ಅಥವಾ ಶಬ್ದಗಳನ್ನು ಬಳಕೆ ಮಾಡಬೇಡಿ. ಒಂದು ವಿಷಯದ ಮೇಲೆ ಅವರ ಅಭಿಪ್ರಾಯ ಬೇರೆಯದೇ ಇರಬಹುದು ಆದರೆ ಪರಸ್ಪರ ಅಭಿಪ್ರಾಯವನ್ನು ಗೌರವಿಸಬೇಕು.

ಹಳೆಯ ತಪ್ಪುಗಳನ್ನು ಕೆದಕಬೇಡಿ: ಗಂಡ ಹೆಂಡತಿಯಾಗಿರಬಹುದು ಅಥವಾ ಪ್ರೇಮಿಗಳೇ ಆಗಿರಬಹುದು, ನೀವು ಜಗಳವಾಡುವಾಗ ಹಳೆಯ ತಪ್ಪುಗಳನ್ನು ಹೇಳಿ ಕೆದಕಬೇಡಿ ಇದರಿಂದ ನೀವು ಗೆದ್ದಂತೆ ಅನಿಸಿದರೂ ಕೂಡ ನೀವು ನಿಜವಾಗಿಯೂ ಸೋತಿರುತ್ತೀರಿ, ಹಳೆಯ ಘಟನೆಗಳನ್ನು ಕೆದಕುವುದರಿಂದ ಯಾವುದೇ ಪ್ರಯೋಜನವಿಲ್ಲ.

ಜೀವನಶೈಲಿ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ