Relationship Tips: ದಾಂಪತ್ಯದಲ್ಲಿ ಪತಿಯೊಂದಿಗೆ ಎಂದಿಗೂ ಈ ವಿಚಾರಗಳ ಬಗ್ಗೆ ಚರ್ಚಿಸಬೇಡಿ

ಸಂಬಂಧದಲ್ಲಿ ಪ್ರಾಮಾಣಿಕರಾಗಿರಿ. ಆದರೆ ಸಂಗಾತಿಯ ನ್ಯೂನ್ಯತೆಗಳನ್ನು ಚರ್ಚಿಸಬೇಡಿ. ಆತನ ವೀಕ್​ಪಾಯಿಂಟ್​ಗಳನ್ನು ಎತ್ತಿ ಆಗಾಗ ಹೀಯಾಳಿಸಬೇಡಿ.

Relationship Tips: ದಾಂಪತ್ಯದಲ್ಲಿ ಪತಿಯೊಂದಿಗೆ ಎಂದಿಗೂ ಈ ವಿಚಾರಗಳ ಬಗ್ಗೆ ಚರ್ಚಿಸಬೇಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 19, 2022 | 3:28 PM

ಮದುವೆ ಪ್ರತೀ ವ್ಯಕ್ತಿಯ ಜೀವನದಲ್ಲಿ ಘಟಿಸುವ ಸುಂದರ ಕ್ಷಣ. ಮಹತ್ತರ ಬದಲಾವಣೆ ತರುವ ಮದುವೆ ಹಂತದ ಮೇಲೆ ನಿಂತಿರುವಂತಹದ್ದು. ಸಪ್ತಪದಿ ತುಳಿದು ಏಳೇಳು ಜನುಮದಲ್ಲಿಯೂ ಜೊತೆಯಾಗಿರೋಣ ಎಂಬ  ಮಾತಿನೊಂದಿಗೆ ಆರಂಭವಾಗುವ ಬಂಧ. ಹೆಣ್ಣುಮಕ್ಕಳ ಪಾಲಿಗೆ ಸುಮಧುರ ಗಳಿಗೆ ಹಾಗೂ ಸತ್ವಪರೀಕ್ಷೆ ಕೂಡ. ಹುಟ್ಟಿದ ಮನೆ, ಪರಿಸರ, ಜನ ಜೀವನಶೈಲಿ ಎಲ್ಲವನ್ನೂ ತೊರೆದು ಹೊಸ ಪ್ರಪಂಚಕ್ಕೆ ಆಕೆ ಅಡಿಯಿಡುತ್ತಾಳೆ. ಮದುವೆ ಎನ್ನುವುದು ಪರಸ್ಪರ ಒಡಂಬಡಿಕೆ. ಬಂಧುತ್ವವನ್ನು ಅಳವಡಿಸಿಕೊಂಡರೆ ಸುಖ ಜೀವನ ಸಾಧ್ಯ. ಅದಕ್ಕೆ ನಂಬಿಕಯೇ ಆಧಾರ. ಪತಿಯೊಂದಿಗೆ ಪಾರದರ್ಶಕವಾಗಿರುವುದು ಉತ್ತಮ. ಆದರೆ ಕೆಲವೊಂದು ವಿಚಾರಗಳನ್ನು ಚರ್ಚಿಸದಿರುವುದೇ ಒಳಿತು. ಇದರಿಂದ ಇಬ್ಬರ ಬಂಧಗಳಲ್ಲೂ ಬಿರುಕು ಉಂಟಾಗಬಹುದು. ಹಾಗಾದರೆ ಯಾವೆಲ್ಲಾ ವಿಚಾರಗಳನ್ನು ಚರ್ಚಿಸಬಾರದು ಎನ್ನುವ ಮಾಹಿತಿ ಇಲ್ಲಿದೆ  ನೋಡಿ,

ಸಂಗಾತಿಯ ಕುಟುಂಬದ ಬಗೆಗೆ ಇಷ್ಟವಿಲ್ಲದ ಸಂಗತಿ: ನಿಮ್ಮ ಪತಿಯ ಕುಟುಂಬದ ಬಗ್ಗೆ ಇಷ್ಟವಾಗದ ಸಂಗತಿಗಳನ್ನು ಎಂದಿಗೂ ಚರ್ಚಿಸಬೇಡಿ. ಮನೆಯಲ್ಲಿ ಸಮಸ್ಯೆಗಳನ್ನು ಎದುರಸುತ್ತಿದ್ದರೆ ಸಂಗಾತಿಗೆ ತಾಳ್ಮೆಯಿಂದ ಹೇಳಿ, ಮನೆಯವರ ಬಗ್ಗೆ ದೂರಬೇಡಿ. ಇದು ಆತನಿಗೆ ಇಷ್ಟವಾಗದೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.

ಹಿಂದಿನ ಸಂಬಂಧಗಳ ಬಗ್ಗೆ ಮದುವೆಗೆ ಮೊದಲು ನೀವೇನಾದರೂ ಲೈಂಗಿಕ ಸಂಪರ್ಕ ಮಾಡಿದ್ದರೆ ಅಥವಾ ಅತಿಯಾಗಿ ಪ್ರೀತಿಸಿದ್ದರೆ ಅಂತಹ ವಿಚಾರಗಳನ್ನು ಪತಿಯೊಂದಿಗೆ ಹಂಚಿಕೊಳ್ಳಬೇಡಿ. ಸಂಬಂಧಗಳಲ್ಲಿ ಅಭದ್ರತೆ ಕಾಡುವುದಕ್ಕೆ ಇದು ಪ್ರಮುಖ ಕಾರಣವಾಗುತ್ತದೆ. ನಿಮ್ಮ ಹಳೆಯ ಪ್ರೀತಿಯ ವಿಚಾರಗಳನ್ನು ಆಗಾಗ ಚರ್ಚಿಸುವುದನ್ನು ಮಾಡಬೇಡಿ.

ನ್ಯೂನ್ಯತೆಗಳ ಚರ್ಚೆ ಬೇಡ: ಸಂಬಂಧದಲ್ಲಿ ಪ್ರಾಮಾಣಿಕರಾಗಿರಿ. ಆದರೆ ಸಂಗಾತಿಯ ನ್ಯೂನ್ಯತೆಗಳನ್ನು ಚರ್ಚಿಸಬೇಡಿ. ಆತನ ವೀಕ್​ಪಾಯಿಂಟ್​ಗಳನ್ನು ಎತ್ತಿ ಆಗಾಗ ಹೀಯಾಳಿಸಬೇಡಿ. ನಿನ್ನಿಂದ ಅದು ಸಾಧ್ಯವಿಲ್ಲ, ಇದು ಸಾಧ್ಯವಿಲ್ಲ ಎಂದು ಪದೇ ಪದೇ ಹೇಳಬೇಡಿ. ಇದರಿಂದ ಆತನಿಗೆ ಮುಜುಗರವಾಗಬಹುದು.

ಹಣದ ಸಮಸ್ಯೆ: ಹಣಕಾಸಿನ ಬಗ್ಗೆ ಚರ್ಚಿಸಿ, ಜಂಟಿ ಬಜೆಟ್‌ಗಳನ್ನು ರಚಿಸಿ ಆದರೆ ನಿಮ್ಮಿಬ್ಬರ ನಡುವೆ ಹಣವನ್ನು ಸಮಸ್ಯೆಯಾಗಿ ಮಾಡಬೇಡಿ. ಹಣದ ವಿಷಯದಲ್ಲಿ ಅನೇಕ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಭಿನ್ನ ಕಾರಣಗಳನ್ನು ಹೊಂದಿರಬಹುದು. ಹಣವಿಲ್ಲ ಎಂದು ಕೊರಗುವ ಬದಲು ಹಣದ ವ್ಯಯದ ಬಗ್ಗೆ ಸರಿಯಾದ ಪ್ಲಾನ್ ಮಾಡಿಕೊಳ್ಳಿ​.

ಸಂಬಂಧದ ಬಗ್ಗೆ ಸ್ನೇಹಿತರು ಆಡುವ ಮಾತುಗಳು: ಪ್ರತಿಯೊಬ್ಬರು ನಿಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಹಾಗೆಂದು ಎಲ್ಲವನ್ನೂ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಡಿ. ಆದಷ್ಟು ಧನಾತ್ಮಕ ಅಂಶಗಳನ್ನು ಹೇಳಿ. ಋಣಾತ್ಮ ಅಂಶಗಳನ್ನು ಸರಿಪಡಿಸಲು ಪ್ರಯತ್ನಸಿ. ಇದರಿಂ ಸಂಬಂಧ ಹದಗೆಡುವುದನ್ನು ತಡೆಯಬಹುದು.

ಇದನ್ನೂ ಓದಿ:

ಕಳೆದು ಹೋದ ಘಟನೆಗಳನ್ನ ಮರೆಯೋದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ