
ಬೇಸಿಗೆ ರಜೆ (summer holiday) ಶುರುವಾಯಿತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಹೆತ್ತವರಿಗೆ ಯಾಕಾದ್ರೂ ಮಕ್ಕಳಿಗೆ ಬೇಸಿಗೆ ರಜೆ ಶುರುವಾಯಿತು, ಈ ಮಕ್ಕಳ ಕಾಟ ಹೇಗಪ್ಪಾ ತಡೆದುಕೊಳ್ಳುವುದು ಎಂದು ಹೇಳುವುದನ್ನು ಕೇಳಿರುತ್ತೀರಿ. ರಜೆ ಶುರುವಾಗುತ್ತಿದ್ದಂತೆ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಮಕ್ಕಳನ್ನು ಕ್ಯಾಂಪ್ (camp) ಗಳಿಗೆ ಸೇರಿಸಿ ತಮ್ಮ ತಲೆಬಿಸಿಯನ್ನು ದೂರ ಮಾಡಿಕೊಳ್ಳುತ್ತಾರೆ ಈ ಹೆತ್ತವರು. ಆದರೆ ಈ ಪುಟಾಣಿಗಳು ಮಾತ್ರ ಮನೆಯಲ್ಲೇ ಯಕ್ಷಗಾನವನ್ನು ಮಾಡುತ್ತಿದ್ದಾರೆ. ಜನಪ್ರತಿನಿಧಿ (janaprathinidhi) ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.
ಹೌದು, ಈಗಿನ ಮಕ್ಕಳು ಬೇಸಿಗೆ ರಜೆಯಲ್ಲಿ ಶಿಬಿರ, ಸ್ವಿಮ್ಮಿಂಗ್, ಡ್ರಾಯಿಂಗ್ ಸೇರಿದಂತೆ ತಮ್ಮ ಆಸಕ್ತಿದಾಯಕ ವಿಷಯವನ್ನು ಕಲಿಯಲು ಕ್ಲಾಸ್ ಸೇರಿಕೊಳ್ಳುವುದನ್ನು ನೋಡಬಹುದು. ಕೆಲ ಪುಟಾಣಿಗಳು ಆಟ ಆಡುತ್ತಾ ಎಂದು ಬೇಸಿಗೆರಜೆಯನ್ನು ಎಂಜಾಯ್ ಮಾಡುತ್ತಾರೆ. ಆದರೆ ಕೆಲವು ಮಕ್ಕಳು ತಮ್ಮ ವಿಭಿನ್ನವಾದ ಆಸಕ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯೆನ್ನುವಂತೆ ಇಲ್ಲೊಂದು ಪುಟಾಣಿಗಳು ಆಟವಾಡುವುದನ್ನು ಬಿಟ್ಟು ಯಕ್ಷಗಾನವನ್ನು ಮಾಡುತ್ತಿದ್ದಾರೆ.
ಆಟ ಎಂದು ಬ್ಯುಸಿಯಾಗಿರುವ ಮಕ್ಕಳ ನಡುವೆ ಈ ಪುಟಾಣಿಗಳು ಕರಾವಳಿ ಗಂಡುಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಒಂದನೇ ತರಗತಿ ಶಾಶ್ವತ ಭಾಗವತಿ ಹಾಡನ್ನು ಹಾಡಿದ್ದು, ಮತ್ತೊಬ್ಬ ಪುಟಾಣಿಯೂ ಚಂಡೆ ನುಡಿಸುವುದರಲ್ಲಿ ಬ್ಯುಸಿಯಾಗಿದ್ದಾನೆ. ಇನ್ನೊಬ್ಬನು ಭಾಗವತಿಕೆ ಹಾಡಿಗೆ ಯಕ್ಷಗಾನ ನೃತ್ಯವನ್ನು ಮಾಡಿರುತ್ತಿರುವುದನ್ನು ನೋಡಬಹುದು. ಈ ಪುಟಾಣಿಗಳಿಗೆ ಯಕ್ಷಗಾನದ ಮೇಲೆ ಆಸಕ್ತಿ ಎಷ್ಟಿದೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ