Oral Health : ಹಲ್ಲು ಹುಳುಕು ಆಗಿದ್ರೆ ಟೆನ್ಶನ್ ಬೇಡ, ಆಹಾರ ಕ್ರಮವು ಹೀಗಿರಲಿ

ಇಂದಿನ ಆಹಾರ ಪದ್ಧತಿಯಿಂದಾಗಿ ಹಲ್ಲು ಬೇಗನೇ ಹುಳುಕಾಗುತ್ತಿದೆ. ಹೀಗಾಗಿ ಹಲ್ಲು ನೋವು ಸೇರಿದಂತೆ ಬಾಯಿಯ ಆರೋಗ್ಯವು ಹಾಳಾಗುತ್ತಿದೆ. ಒಂದು ವೇಳೆ ಹಲ್ಲು ಹುಳುಕಾಗಿದ್ರೆ ತಕ್ಷಣವೇ ನೀವು ಸೇವಿಸುವ ಆಹಾರದಲ್ಲಿ ಈ ಆಹಾರಕ್ಕೆ ಹೆಚ್ಚು ಮಹತ್ವ ನೀಡುವುದು ಉತ್ತಮ.

Oral Health : ಹಲ್ಲು ಹುಳುಕು ಆಗಿದ್ರೆ ಟೆನ್ಶನ್ ಬೇಡ, ಆಹಾರ ಕ್ರಮವು ಹೀಗಿರಲಿ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Jun 20, 2024 | 2:28 PM

ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರಲ್ಲಿ ಹುಳುಕು ಹಲ್ಲಿನ ಸಮಸ್ಯೆಯೂ ಹಾಳಾಗುತ್ತಿದೆ. ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇರುವುದು, ಹಲ್ಲಿಗೆ ಆಹಾರ ಅಂಟಿಕೊಳ್ಳುವುದು, ಪದೇ ಪದೇ ಆಹಾರ ಸೇವನೆ, ತಿನ್ನುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಸಾಕು ಹಲ್ಲಿನ ಆರೋಗ್ಯವು ಹಾಳಾಗುತ್ತದೆ. ಹುಳುಕು ಹಲ್ಲುಗಳಿದ್ದರೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಸಮಸ್ಯೆಯೂ ಬಿಗಡಾಯಿಸಬಹುದು. ಅದಲ್ಲದೇ, ಹಲ್ಲು ನೋವಿನ ಸಮಸ್ಯೆಯೂ ಉಂಟಾಗುತ್ತದೆ. ಹೀಗಾಗಿ ಹಲ್ಲು ಹುಳುಕು ಆಗಿದ್ದರೆ, ಈ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿ.

  • ಎಷ್ಟು ನೀರು ಕುಡಿಯುತ್ತೇವೆಯೋ ಆರೋಗ್ಯಕ್ಕೆ ಅಷ್ಟು ಒಳ್ಳೆಯದು ಎನ್ನುವುದು ತಿಳಿದಿರುವ ವಿಚಾರ. ನೀರು ಸೇವನೆಯೂ ಚರ್ಮದ ಆರೋಗ್ಯವಂತವಾಗಿರಿಸುವುದಲ್ಲದೆ, ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ನೀರು ಕುಡಿಯುವುದರಿಂದ ಹಲ್ಲುಗಳ ನಡುವೆ ಸಿಲುಕಿರುವ ಆಹಾರದ ಚೂರುಗಳನ್ನು ತೆಗೆದು ಹಾಕಿ ಹಲ್ಲುಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
  • ಹಲ್ಲು ಹುಳುಕಾಗಿದ್ದರೆ ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
  • ಆಹಾರ ಸೇವಿಸಿದ ಬಳಿಕ ಬಾಯಿ ಮುಕ್ಕಳಿಸುವ ಅಭ್ಯಾಸವು ಒಳ್ಳೆಯದು. ಸೇವಿಸಿದ ಆಹಾರವು ಹಲ್ಲಿನ ನಡುವೆ ಸಿಕ್ಕಿಕೊಂಡು ಹಲ್ಲಿನ ಹುಳುಕು ಸೇರಿದಂತೆ ಇನಿತ್ತರ ಸಮಸ್ಯೆಗೆ ಕಾರಣವಾಗುತ್ತದೆ. ಬಾಯಿ ಮುಕ್ಕಳಿಸುವ ಅಭ್ಯಾಸವು ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ.
  • ಕ್ಯಾಲ್ಸಿಯಂಯುಕ್ತ ಆಹಾರಗಳಾದ ಹಾಲು ಹಾಗೂ ಮೊಟ್ಟೆಯ ಸೇವನೆಯೂ ಹಲ್ಲು ಹುಳುಕಾಗುವುದರಿಂದ ತಡೆಯುತ್ತದೆ.
  • ಹಣ್ಣುಗಳು, ಹಸಿರುವ ತರಕಾರಿಗಳು, ಅಧಿಕ ನಾರಿನಂಶವಿರುವ ತರಕಾರಿಗಳು ಹಾಗೂ ಧಾನ್ಯಗಳ ಸೇವನೆಯೂ ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
  •  ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಜಗಿದು ತಿನ್ನುವುದರಿಂದ ಹಲ್ಲುಗಳಿಗೆ ಬೇಕಾದ ಪೋಷಕಾಂಶಗಳು ದೊರೆಯುವುದರೊಂದಿಗೆ ಹಲ್ಲುಗಳ ಆರೋಗ್ಯವು ಚೆನ್ನಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: