ಹಣ್ಣುಗಳಾಗಿರಲಿ ಇತರೆ ಆಹಾರ ಪದಾರ್ಥಗಳಾಗಿರಲಿ ಫ್ರೆಶ್ ಆಗಿರಿಸಲು ಫ್ರಿಡ್ಜ್ ಬಳಕೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಅಂತಹ ಆಹಾರಗಳೇ ಅನಾರೋಗ್ಯಕ್ಕೆ ಕಾರಣವಾಗಬಹುದು. ಕಲ್ಲಂಗಡಿ ಸೇರಿದಂತೆ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಎಂದಿಗೂ ಇಡಬೇಡಿ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನೇ ಜನರು ಕೊಂಡುಕೊಳ್ಳುತ್ತಾರೆ. ಕಲ್ಲಂಗಡಿಯಲ್ಲಿ ಶೇ.92ರಷ್ಟು ನೀರಿನಂಶವಿರುತ್ತದೆ.
ಕಲ್ಲಂಗಡಿ, ಈರುಳ್ಳಿ, ಬಾಳೆಹಣ್ಣು, ಜೇನುತುಪ್ಪ,ಟೊಮೆಟೋ, ಹಾಟ್ ಕೆಚ್ಅಪ್, ಟೊಮೆಟೋ ಕೆಚ್ಅಪ್, ಬ್ರೆಡ್ಗಳು, ಸೇಬುಹಣ್ಣು, ಅಡುಗೆ ಎಣ್ಣೆ, ಕಾಫಿಬೀಜ, ಅಥವಾ ಕಾಫಿ ಪೌಡರ್, ಗೋಡಂಬಿ, ಬಾದಾಮಿ, ಸ್ಟೋನ್ ಫ್ರೂಟ್ ರೀತಿಯ ಆಹಾರಗಳು ಅಥವಾ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ.
ಕಲ್ಲಂಗಡಿಯಲ್ಲಿ ಪ್ರೋಟೀನ್, ವಿಟಮಿನ್, ನಾರಿನಂಶ ಮುಂತಾದ ಹಲವು ಪೌಷ್ಟಿಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ನಾರಿನಂಶವು ಹಸಿವನ್ನು ನಿಯಂತ್ರಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಕೂಡಾ ಸಹಕಾರಿಯಾಗಿದೆ. ಆದರೆ ಹೆಚ್ಚಿನವರು ಈ ಹಣ್ಣನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದು ತಪ್ಪು. ಕಲ್ಲಂಗಡಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ.
ಫ್ರಿಡ್ಜ್ನಲ್ಲಿಟ್ಟಿರುವ ಕಲ್ಲಂಗಡಿ ತಿನ್ನುವುದರಿಂದಾಗುವ ಅಪಾಯ:ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ನಲ್ಲಿಟ್ಟು ತಿಂದರೆ, ಫುಡ್ ಪೋಯಿಜನ್ ಆಗುವ ಸಾಧ್ಯತೆ ಇದೆ. ಹಾಗಾಗಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡಲೇ ಬಾರದು. ಹೀಗೆ ಮಾಡಿದರೆ ನಿಮ್ಮ ಆರೋಗ್ಯ ಅಥವಾ ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಹಾಳುಮಾಡಿಕೊಳ್ಳುವಂತಾಗುತ್ತದೆ.
ಕಲ್ಲಂಗಡಿ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಅತಿ ಹೆಚ್ಚು ನೀರಿನಂಶವಿರುವ ಹಣ್ಣು. ಆದರೆ ಇದನ್ನು ಫ್ರಿಜ್ ನಲ್ಲಿಟ್ಟರೆ ಅದರ ಪೋಶಕಾಂಶ ಕಡಿಮೆಯಾಗುತ್ತದೆ. ಜೊತೆಗೆ ಕೋಲ್ಡ್ ಕಲ್ಲಂಗಡಿ ತಿಂದರೆ ಕೆಮ್ಮು, ನೆಗಡಿ ಬರುವ ಸಾಧ್ಯತೆ ಇರುತ್ತದೆ.
ಗಿಡಮೂಲಿಕೆಗಳು: ನೀವು ಯಾವುದೇ ತಾಜಾ ಗಿಡಮೂಲಿಕೆಗಳನ್ನು ಫ್ರಿಡ್ಜ್ ನಲ್ಲಿ ಇಡುತ್ತಲಿದ್ದರೆ ಆಗ ನೀವು ಇದನ್ನು ನಿಲ್ಲಿಸಬೇಕು. ಫ್ರಿಡ್ಜ್ ನಲ್ಲಿ ಇಟ್ಟಾಗ ಗಿಡಮೂಲಿಕೆಗಳು ಬೇಗನೆ ಒಣಗಿ ಹೋಗುವುದು ಎಂದು ತಿಳಿಯಿರಿ. ರೋಸ್ಮೇರಿ, ಥೈಮೆ ಮತ್ತು ಒರೆಗಾನೊವನ್ನು ನೀವು ಪೇಪರ್ ಟವೆಲ್ ನಲ್ಲಿ ಸುತ್ತಿಕೊಂಡು ಫ್ರಿಡ್ಜ್ ನಲ್ಲಿ ಇಡಬಹುದು.
ಜೇನುತುಪ್ಪ: ನೈಸರ್ಗಿಕವಾಗಿ ಸಿಗುವಂತಹ ಜೇನುತುಪ್ಪವನ್ನು ನೀವು ಅನೈಸರ್ಗಿಕವಾದ ಫ್ರಿಡ್ಜ್ ನಲ್ಲಿ ಇಟ್ಟರೆ ಆಗ ಅದರ ರುಚಿ ಕೆಡುವುದು. ಇದರ ನಿಜವಾದ ರುಚಿ ಹಾಗೂ ಸುವಾಸನೆ ಪಡೆಯಬೇಕಾದರೆ ನೀವು ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡಬಾರದು.
ಬ್ರೆಡ್: ಫ್ರಿಡ್ಜ್ ನಲ್ಲಿ ನೀವು ಇಡಬಾರದ ಆಹಾರಗಳಲ್ಲಿ ಬ್ರೆಡ್ ಕೂಡ ಒಂದಾಗಿದೆ. ಬ್ರೆಡ್ ನ್ನು ನೀವು ಫ್ರಿಡ್ಜ್ ನಲ್ಲಿಇಟ್ಟರೆ ಅದು ಬೇಗನೆ ಕೆಡುವುದು ಮತ್ತು ಒಣಗುವುದು ಕೂಡ. ಒಣ ಹಾಗೂ ತಂಪಾಗಿರುವ ಜಾಗದಲ್ಲಿ ಬ್ರೆಡ್ ಅನ್ನು ಇಡಬೇಕು.
ಈರುಳ್ಳಿ: ಕೆಲವರು ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡುವಂತಹ ಅಭ್ಯಾಸ ಬೆಳೆಸಿಕೊಂಡಿರುವರು. ಆದರೆ ಈರುಳ್ಳಿಯನ್ನು ಯಾವಾಗಲೂ ಒಣ ಹಾಗೂ ಕತ್ತಲಿನಲ್ಲಿ ಇಡಬೇಕು. ಅವುಗಳಿಗೆ ಮೊಳಕೆ ಬರದೆ, ಗಾಳಿಯಾಡದಂತೆ ಇಡಬೇಕು. ಅರ್ಧ ಈರುಳ್ಳಿಯನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟರೂ ಆಗ ನೀವು ಅದಕ್ಕೊಂದು ಫಾಯಿಲ್ ಪೇಪರ್ ಸುತ್ತಿಕೊಂಡು ಇಟ್ಟುಬಿಡಿ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:54 am, Fri, 3 June 22