Soaked Foods:ಈ ಆಹಾರಗಳನ್ನು ನೆನೆಸಿಯೇ ತಿನ್ನಿ, ಏನೆಲ್ಲಾ ಪ್ರಯೋಜನಗಳಿವೆ ನೋಡಿ
Soaked Foods: ಹಲವು ಆಹಾರ ಪದಾರ್ಥಗಳನ್ನು ಹಾಗೆಯೇ ತಿನ್ನುವುದಕ್ಕಿಂತ ನೆನೆಸಿ(Soak) ತಿನ್ನುವುದರಿಂದ ಹೆಚ್ಚು ಪ್ರಯೋಜನ ಕಾಣಬಹುದು. ರಾತ್ರಿಯಿಡೀ ನೆನೆಸಿದ ಈ ಆಹಾರವನ್ನು ಸೇವಿಸುವುದರಿಂದ ದೇಹವು ಸಾಕಷ್ಟು ಪೌಷ್ಟಿಕಾಂಶವನ್ನು ಪಡೆಯುತ್ತೇವೆ.
ಹಲವು ಆಹಾರ ಪದಾರ್ಥಗಳನ್ನು ಹಾಗೆಯೇ ತಿನ್ನುವುದಕ್ಕಿಂತ ನೆನೆಸಿ(Soak) ತಿನ್ನುವುದರಿಂದ ಹೆಚ್ಚು ಪ್ರಯೋಜನ ಕಾಣಬಹುದು. ರಾತ್ರಿಯಿಡೀ ನೆನೆಸಿದ ಈ ಆಹಾರವನ್ನು ಸೇವಿಸುವುದರಿಂದ ದೇಹವು ಸಾಕಷ್ಟು ಪೌಷ್ಟಿಕಾಂಶವನ್ನು ಪಡೆಯುತ್ತೇವೆ.
ಕೆಲವು ಆಹಾರ ಪದಾರ್ಥಗಳಿವೆ ಅವುಗಳನ್ನ ಹಾಗೆ ತಿನ್ನುವುದಕ್ಕಿಂತ ನೆನೆಸಿ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿವೆ. ಹೌದ್ ಇಂದು ನಾವು ನಿಮಗಾಗಿ ನೆನಸಿ ಸೇವಿಸಬಹುದಾದ 5 ಆಹಾರಗಳ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ.
ಈ ಆಹಾರಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಅವು ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ, ಇದರಿಂದಾಗಿ ಅವುಗಳ ಪೌಷ್ಟಿಕತೆಯು ಬಹಳಷ್ಟು ಹೆಚ್ಚಾಗುತ್ತದೆ. ನೆನೆಸಿದಾಗ ಈ 5 ಆಹಾರಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹವನ್ನು ಯಾವುದೇ ರೋಗಗಳ ವಿರುದ್ಧ ಹೋರಾಡಲು ಉತ್ತಮವಾಗಿಸುತ್ತದೆ.
ನೆನೆಸಿದ ಬಾದಾಮಿಯ ಪ್ರಯೋಜನಗಳು ರಾತ್ರಿಯಿಡೀ ನೆನೆಸಿದ ನಂತರ, ಬಾದಾಮಿಯ ಪೋಷಣೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ನಿಂದ ಪರಿಹಾರ ನೀಡುತ್ತದೆ ಮತ್ತು ಸ್ಮರಣೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಗಸೆ ಬೀಜಗಳು ನೆನೆಸಿದ ಅಗಸೆ ಬೀಜಗಳನ್ನು ತಿನ್ನುವುದು ಸಹ ನಿಮಗೆ ಪ್ರಯೋಜನಕಾರಿ. ಇದು ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲ ಹೊಂದಿದೆ. ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆ ನಿವಾರಿಸುತ್ತದೆ. ಇದು ಅಗಸೆ ಬೀಜದ ಸೇವನೆ ತುಂಬಾ ಪ್ರಯೋಜನಕಾರಿ.
ನೆನೆಸಿದ ಬೇಳೆ ಕಾಳಿನ ಲಾಭಗಳು
ನೆನೆಸಿದ ಬೇಳೆ ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳು ಸಿಗುತ್ತವೆ. ಇದರಲ್ಲಿ ಹೇರಳವಾದ ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ. ಬೆಳಿಗ್ಗೆ ಬೇಳೆ ತಿನ್ನುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೆನೆಸಿದ ಒಣದ್ರಾಕ್ಷಿಯಿಂದ ಏನು ಪ್ರಯೋಜನ?
ಬೆಳಗ್ಗೆ ಒಣದ್ರಾಕ್ಷಿಯನ್ನು ರಾತ್ರಿ ನೆನೆಸುವುದು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯನ್ನು ಸಂಪೂರ್ಣವಾಗಿ ಆರೋಗ್ಯಕರಗೊಳಿಸುತ್ತದೆ. ಇದಲ್ಲದೇ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳು ನಮ್ಮನ್ನು ಸುಲಭವಾಗಿ ಅನಾರೋಗ್ಯಕ್ಕೆ ತಳ್ಳುವುದಿಲ್ಲ.
ನೆನೆಸಿದ ಮೆಂತ್ಯ ಮತ್ತು ಅಗಸೆ ಬೀಜಗಳ ಸೇವನೆ
ನೆನೆಸಿದ ಮೆಂತ್ಯ ಮತ್ತು ಅಗಸೆ ಬೀಜಗಳು, ಒಣದ್ರಾಕ್ಷಿ ಮತ್ತು ಹೆಸರು ಕಾಳು ಅನ್ನು ನಿಯಮಿತವಾಗಿ ತಿನ್ನಿರಿ. ಅದರ ಪ್ರಯೋಜನಗಳು ಸಾಕಷ್ಟಿದೆ. ಆರೋಗ್ಯಕರವಾಗಿರಲು, ಆಹಾರದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಜೊತೆಗೆ ಕೆಲವು ವಸ್ತುಗಳನ್ನು ತಿನ್ನುವ ಸರಿಯಾದ ವಿಧಾನ ತಿಳಿಯುವುದು ಅವಶ್ಯಕ.
ಗಸಗಸೆ ಬೀಜ ಲಡ್ಡು ಅಥವಾ ಮಸಾಲೆಗಳಲ್ಲಿ ಬಳಸುವ ಗಸಗಸೆ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಫೋಲೇಟ್, ಥಯಾಮಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲ ಹೊಂದಿರುತ್ತದೆ. ಗಸಗಸೆಯಲ್ಲಿರುವ ವಿಟಮಿನ್ ಬಿ ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಇದು ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಹೆಸರು ಕಾಳು ಹೆಸರು ಕಾಳು ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಬಿ ಯಲ್ಲಿ ಸಮೃದ್ಧವಾಗಿದೆ. ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಅಲ್ಲದೆ, ಇದರಲ್ಲಿ ಇರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಪ್ರಮಾಣವು ಅಧಿಕ ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನ ನೀಡುತ್ತದೆ. ಹೆಸರು ಕಾಳು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕ ಸಹ ಹೊಂದಿದೆ. ಇದು ಮಧುಮೇಹ ಮತ್ತು ಕ್ಯಾನ್ಸರ್ ರೋಗಗಳ ಅಪಾಯವನ್ನು ತಗ್ಗಿಸುತ್ತದೆ.
ಈ ಮೇಲಿನ ಲೇಖನದಲ್ಲಿರುವ ಅಂಶಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ