ಬೇಸಿಗೆಯಲ್ಲಿ ಉತ್ತಮ ಕಲ್ಲಂಗಡಿಯನ್ನು ಆಯ್ಕೆ ಮಾಡುವುದು ಹೇಗೆ?

ಬೇಸಿಗೆಯಲ್ಲಿ ಉತ್ತಮ ಕಲ್ಲಂಗಡಿಯನ್ನು ಆಯ್ಕೆ ಮಾಡುವುದು ಹೇಗೆ?
ಕಲ್ಲಂಗಡಿ

ಬೇಸಿಗೆ(Summer)ಯ ಬಿಸಿಲ ಧಗೆಯನ್ನು ತಣಿಸಿಕೊಳ್ಳಲು ಜನರು ಕಲ್ಲಂಗಡಿ ಹಣ್ಣು, ಜ್ಯೂಸ್​ನ ಮೊರೆ ಹೋಗುತ್ತಾರೆ. ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡಿ ಮನೆಗೆ ಬಂದವರೇ ಅಯ್ಯೋ ಇದೆಂಥಾ ಹಣ್ಣು ತಂದೆ, ಅಂಗಡಿಯವನು ಮೋಸ ಮಾಡಿದ್ದಾನೆ. ರುಚಿಯೂ ಇಲ್ಲ ಸಿಹಿಯೂ ಇಲ್ಲ ಎಂದು ಗೊಣಗುವುದುಂಟು ಆದರೆ ಹಣ್ಣನ್ನು ಖರೀದಿಸುವ ಮುನ್ನ ಈ ಕೆಲವು ಟಿಪ್ಸ್​ಗಳನ್ನು ಖಂಡಿತವಾಗಿಯೂ ಅನುಸರಿಸಿ.

TV9kannada Web Team

| Edited By: Nayana Rajeev

May 13, 2022 | 1:05 PM

ಬೇಸಿಗೆ(Summer)ಯ ಬಿಸಿಲ ಧಗೆಯನ್ನು ತಣಿಸಿಕೊಳ್ಳಲು ಜನರು ಕಲ್ಲಂಗಡಿ ಹಣ್ಣು, ಜ್ಯೂಸ್​ನ ಮೊರೆ ಹೋಗುತ್ತಾರೆ. ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡಿ ಮನೆಗೆ ಬಂದವರೇ ಅಯ್ಯೋ ಇದೆಂಥಾ ಹಣ್ಣು ತಂದೆ, ಅಂಗಡಿಯವನು ಮೋಸ ಮಾಡಿದ್ದಾನೆ. ರುಚಿಯೂ ಇಲ್ಲ ಸಿಹಿಯೂ ಇಲ್ಲ ಎಂದು ಗೊಣಗುವುದುಂಟು ಆದರೆ ಹಣ್ಣನ್ನು ಖರೀದಿಸುವ ಮುನ್ನ ಈ ಕೆಲವು ಟಿಪ್ಸ್​ಗಳನ್ನು ಖಂಡಿತವಾಗಿಯೂ ಅನುಸರಿಸಿ.

ಕಲ್ಲಂಗಡಿ(Watermelon) ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ, ಈ ಹಣ್ಣಿನ ಸೇವನೆಯಿಂದ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಅಷ್ಟು ಮಾತ್ರವಲ್ಲ, ಮಾತ್ರವಲ್ಲ ಈ ಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ.

ಸಿಹಿ ಮತ್ತು ಕೆಂಪು ಕಲ್ಲಂಗಡಿ ಗುರುತಿಸುವುದು ಹೇಗೆ? ಹಣ್ಣು ಖರೀದಿ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಿದರೆ ಸಿಹಿ ಕಲ್ಲಂಗಡಿ ಹಣ್ಣನ್ನು ಗುರುತಿಸಬಹುದು. ಮಾತ್ರವಲ್ಲ ರುಚಿಕರ ಹಣ್ಣನ್ನೇ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.

ಹಣ್ಣು ಹಳದಿಯಾಗಿರಬೇಕು : ಕಲ್ಲಂಗಡಿ ಕೆಳಭಾಗದಲ್ಲಿ ಹೆಚ್ಚು ಹಳದಿ ಕಲೆಗಳು ಇದ್ದರೆ, ಅಂಥಹ ಕಲ್ಲಂಗಡಿ ಸಿಹಿಯಾಗಿರುತ್ತದೆ. ಅನೇಕ ಜನರು ಹಸಿರು ಕಲ್ಲಂಗಡಿ ಖರೀದಿಸುತ್ತಾರೆ. ಆದರೆ ತಿಳಿ ಹಳದಿ ಕಲ್ಲಂಗಡಿ ಸಿಹಿ ಮತ್ತು ಕೆಂಪು ಬಣ್ಣದಲ್ಲಿರುತ್ತದೆ.

ಕಲ್ಲಂಗಡಿ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಅನೇಕ ಬಾರಿ ಕಲ್ಲಂಗಡಿ ಹಣ್ಣು ಸಿಹಿಯಾಗಿಯಾಗಿರುವುದಿಲ್ಲ. ಮಾತ್ರವಲ್ಲದೆ ಅದರ ಬಣ್ಣ ಕೂಡಾ ಮಾಸಿದಂತಿರುತ್ತದೆ. ಹೀಗಿದ್ದಾಗ ಹಣ್ಣು ತಿನ್ನಲು ಇಷ್ಟವಾಗುವುದಿಲ್ಲ. ಕಲ್ಲಂಗಡಿಯಲ್ಲಿ ಶೇ.95 ರಷ್ಟು ನೀರು ಇದೆ ಎಂದು ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ ಬೇಸಿಗೆಯಲ್ಲಿ ಈ ಹಣ್ಣನ್ನು ತಿಂದರೆ ದೇಹದಲ್ಲಿ ನೀರಿನ ನೀಗಿಸಬಹುದಾಗಿದೆ. ಈ ಕಾರಣಕ್ಕಾಗಿಯೇ ಜನರು ಬೇಸಿಗೆಯಲ್ಲಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ.

ಆಕಾರವನ್ನು ನೋಡಿ : ಮೊಟ್ಟೆಯ ಆಕಾರದ ಕಲ್ಲಂಗಡಿಗಳು ಹೆಚ್ಚಾಗಿ ಸಿಹಿಯಾಗಿರುತ್ತವೆ. ವೃತ್ತಾಕಾರದಲ್ಲಿರುವ ಕಲ್ಲಂಗಡಿ ಹೆಚ್ಚು ರುಚಿಯಾಗಿರುವುದಿಲ್ಲ..

ಹಣ್ಣಿನಿಂದ ಶಬ್ದ ಕೇಳಿಸುತ್ತದೆ: ಕಲ್ಲಂಗಡಿ ಖರೀದಿಸಲು ಹೋಗಿದ್ದರೆ, ಮೊದಲು ಹಣ್ಣನ್ನು ನಿಮ್ಮ ಕೈನಲ್ಲಿಟ್ಟುಕೊಂಡು ಬೆರಳುಗಳ ಸಹಾಯದಿಂದ ನಿಧಾನವಾಗಿ ಹಣ್ಣಿನ ಮೇಲೆ ಟ್ಯಾಪ್ ಮಾಡಿ ಅದರಲ್ಲಿ ಢಕ್ ಢಕ್ ಎನ್ನುವ ಶಬ್ದ ಕೇಳುವುದು ಆಗ ಹಣ್ಣು ಚೆನ್ನಾಗಿದೆ ಎಂದರ್ಥ.

ಸಣ್ಣ ರಂಧ್ರ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ: ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಆ ಹಣ್ಣಿನಲ್ಲಿ ಸಣ್ಣ ರಂಧ್ರ ಕೂಡಾ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಹಣ್ಣು ಬೇಗ ಬೆಳೆಯಲಿ ಎನ್ನುವ ಕಾರಣಕ್ಕಾಗಿ ಹಾನಿಕಾರಕ ಹಾರ್ಮೋನ್ ಗಳ ಚುಚ್ಚುಮದ್ದುಗಳನ್ನು ಹಾಕಿ ಬಿಡುತ್ತಾರೆ.

ತೂಕ ನೋಡಿ ಖರೀದಿಸಿ : ಕಲ್ಲಂಗಡಿ ಹಣ್ಣಿನ ತೂಕವನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಿ. ಕಲ್ಲಂಗಡಿ ಹಣ್ಣು ಎತ್ತಲು ಬಹಳ ಭಾರವಾಗಿದ್ದರೆ ಅದು ತಿನ್ನಳು ಖಂಡಿತಾ ರುಚಿಯಾಗಿರುವುದಿಲ್ಲ. ಹಣ್ಣು ಎತ್ತಿಕೊಳ್ಳಲು ಹಗುರವಾಗಿದ್ದರೆ ಆ ಹಣ್ಣು ಬಹಳ ರುಚಿಯಾಗಿರುತ್ತದೆ. ಈ ಮೇಲಿನ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿ ಅಲ್ಲ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada