ಬೇಸಿಗೆಯಲ್ಲಿ ಸುಡುವ ಸೂರ್ಯನಿಂದ ಬೆಂದ ಜನರಿಗೆ ಕಲ್ಲಂಗಡಿಯೇ ಪರಿಹಾರ! ಬೆಳೆಗಾರರ ಮುಖದಲ್ಲಿ ಮಂದಹಾಸ

ಬೇಸಿಗೆಯಲ್ಲಿ ಸುಡುವ ಸೂರ್ಯನಿಂದ ಬೆಂದ ಜನರಿಗೆ ಕಲ್ಲಂಗಡಿಯೇ ಪರಿಹಾರ! ಬೆಳೆಗಾರರ ಮುಖದಲ್ಲಿ ಮಂದಹಾಸ
ಬೇಸಿಗೆಯ ಬಿರು ಬಿಸಿಯಲ್ಲಿ ಸುಡುವ ಸೂರ್ಯನಿಂದ ಬೆಂದ ಜನರಿಗೆ ಕಲ್ಲಂಗಡಿಯೇ ಪರಿಹಾರ! ಬೆಳೆಗಾರರ ಮುಖದಲ್ಲಿ ಮಂದಹಾಸ

Watermelon in Kolar: ಈ ಬಾರಿಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದೆ, ಸೂರ್ಯ ಪ್ರಖರವಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರೋದಕ್ಕೂ ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಬಿಸಿಲಿನ ತಾಪಕ್ಕೆ ಬೆಂಡಾಗಿರುವ ಜನರು ದಣಿವಾರಿಸಿಕೊಳ್ಳಲು ಏನೆಲ್ಲಾ ಸರ್ಕಸ್​ ಮಾಡುತ್ತಿದ್ದಾರೆ, ಹೇಗಿದೆ ಈ ಬಾರಿಯ ಬಿಸಿಲ ಬೇಗೆ ಇಲ್ಲಿದೆ ಡೀಟೇಲ್ಸ್​...

TV9kannada Web Team

| Edited By: sadhu srinath

Apr 05, 2022 | 8:49 PM

ಈ ಬಾರಿಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದೆ, ಸೂರ್ಯ ಪ್ರಖರವಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರೋದಕ್ಕೂ ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಬಿಸಿಲಿನ ತಾಪಕ್ಕೆ ಬೆಂಡಾಗಿರುವ ಜನರು ದಣಿವಾರಿಸಿಕೊಳ್ಳಲು ಏನೆಲ್ಲಾ ಸರ್ಕಸ್​ ಮಾಡುತ್ತಿದ್ದಾರೆ, ಹೇಗಿದೆ ಈ ಬಾರಿಯ ಬಿಸಿಲ ಬೇಗೆ ಇಲ್ಲಿದೆ ಡೀಟೇಲ್ಸ್​…

ಕೋಲಾರದಲ್ಲಿ ಬಿಸಿಲಿನ ತಾಪಕ್ಕೆ ಬೆಂಡಾಗಿ ಕಲ್ಲಂಗಡಿ ಮೊರೆ ಹೋದ ಜನರು..! ಕೋಲಾರ ಅಂದ್ರೆನೆ ಬರದ ಜಿಲ್ಲೆ… ವರ್ಷಪೂರ್ತಿ ಸುಡುವ ಬಿಸಿಲು, ಧಗ ಧಗಿಸುವ ಸೂರ್ಯ ಜನರ ನೆತ್ತಿ ಸುಡುತ್ತಿರುತ್ತಾನೆ. ಹೀಗಿರುವಾಗ ಈ ವರ್ಷ ಮುಂಗಾರು ಮಳೆಗೆ ಇನ್ನೂ ಸಾಕಷ್ಟು ಸಮಯವಿದೆ. ಹಿಂದಿರುಗಿ ನೋಡಿದಾಗ ಮಳೆ ಬಿದ್ದು ಹಲವು ತಿಂಗಳುಗಳೇ ಕಳೆದಿವೆ. ಕೆರೆಗಳಲ್ಲಿ ನೀರಿದ್ದರೂ ಪ್ರಯೋಜನವಿಲ್ಲ ಎನ್ನುಂತಾಗಿ ಕಾದು ಕೆಂಡದಂತಾಗಿರುವ ಭೂಮಿಯನ್ನು ನೋಡಿದಾಗ! ಹೀಗಿರುವಾಗ ಮಾರ್ಚ್​ ಆರಂಭದಲ್ಲೇ ಬೇಸಿಗೆ ತೀವ್ರತೆ ಹೆಚ್ಚಾಗಿತ್ತು. ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ತಾಪಮಾನ 34-38 ಡಿಗ್ರಿ ದಾಖಲಾಗಿದೆ. ಎಂದೂ ಕಂಡರಿಯದ ಈ ರಣಬಿಸಿಲಿಗೆ ಜನ ತತ್ತರಿಸಿ ಹೋಗಿದ್ದು, ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಎಳೆ ನೀರು, ಮಜ್ಜಿಗೆಯಂತಹ ತಂಪು ಪಾನೀಯಗಳತ್ತ ಬಾಯ್ಬಿಟ್ಟುಕೊಂಡು ನೋಡುವಂತಾಗಿದೆ. ಹಾಗಾಗಿ ನಗರದ ಒಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್​ಗಳು ಜೋರಾಗಿವೆ. ಎಲ್ಲಾ ಕಡೆಯೂ ಜನರು ಮುಗಿಬಿದ್ದು, ಬಿಸಿಲಲ್ಲಿ ಕಲ್ಲಂಗಡಿ ಸವಿಯುತ್ತಾ ಬಿಸಿಲಿನಿಂದ ಬೆಂದು ಕೊಂಚ ನಿಟ್ಟುಸಿರು ಬಿಡುತ್ತಿದ್ದಾರೆ.

Watermelon to pacify starched kolar people in the summer watermelon growers get good money and sellers good profit

ಕೋಲಾರ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆದ ರೈತರಿಗೆ ಬಂಪರ್​!

ಇನ್ನು… ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆದ ರೈತರಿಗೆ ಬಂಪರ್​! ಕೋಲಾರ ಜಿಲ್ಲೆಯಲ್ಲೂ ಈ ಬಾರಿ ತಾಪಮಾನ ಏರಿಕೆಯಾಗಿದೆ. ಕಳೆದ ನವೆಂಬರ್​ ತಿಂಗಳಲ್ಲಿ ಉತ್ತಮ ಮಳೆ ಆಗಿದೆ, ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರಿದೆ. ಆದರೂ ಕೂಡಾ ತಾಪಪಾನ ಮಾತ್ರ ಹೇಳತೀರದಂತಾಗಿದೆ. ಇನ್ನು ಜಿಲ್ಲೆಯಲ್ಲಿ ನೀರಾವರಿ ಹೆಚ್ಚಾಗಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಳೆದ ಬಾರಿ ಹೆಚ್ಚಾಗಿ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಕಲ್ಲಂಗಡಿ ಹಣ್ಣುಗಳನ್ನು ತರಿಸಿಕೊಳ್ಳಬೇಕಿತ್ತು. ಆದರೆ ಈ ವರ್ಷ ಹೆಚ್ಚಾಗಿ ಜಿಲ್ಲೆಯ ಕೆರೆಗಳಲ್ಲಿ ನೀರಿದೆ, ಜೊತೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯ ಪರಿಣಾಮ ಹೆಚ್ಚಿನ ರೈತರು ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ. ಹಾಗಾಗಿ ಕಲ್ಲಂಗಡಿ ಹಣ್ಣು ಬೆಳೆದಿರುವ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿದೆ, ಅದರ ಜೊತೆಗೆ ಕಲ್ಲಂಗಡಿ ಹಣ್ಣಿನ ವ್ಯಾಪಾರಸ್ಥರಿಗೂ ಒಳ್ಳೆಯ ಲಾಭ ಎನ್ನುವಂತಾಗಿದೆ.

ರಸ್ತೆಯ ಬದಿಗಳಲ್ಲಿ ಕಿ.ಮೀ.ಗೆ ಎರಡರಂತೆ ಇವೆ ಕಲ್ಲಂಗಡಿ ಸ್ಟಾಲ್​ಗಳು! ಬಿಸಿಲಿನ ತಾಪ ಜನರ ನೆತ್ತಿ ಸುಡುವ ಜೊತೆಗೆ ಬಾಯಾರಿಕೆಯಾಗಿ ಏನಾದರೂ ಒಂದಷ್ಟು ದಣಿವಾರಿಸಿಕೊಳ್ಳಲು ಸಿಕ್ಕರೆ ಸಾಕಪ್ಪಾ ಎನ್ನುವ ಸ್ಥಿತಿ ಇದೆ. ಅದಕ್ಕಾಗಿಯೇ ಕೋಲಾರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀ ಕಿ.ಮೀ ವ್ಯಾಪ್ತಿಯಲ್ಲಿ ಒಂದು ಎರಡು ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಟೆಂಟ್​ ಹಾಕಿಕೊಂಡು ವ್ಯಾಪಾರ ಶುರುಮಾಡಿದ್ದಾರೆ. ಎಲ್ಲಾ ವ್ಯಾಪಾರಸ್ಥರಿಗೂ ಒಳ್ಳೆಯ ವ್ಯಾಪಾರ, ಒಂದಷ್ಟು ಆದಾಯ ಮಾಡಿಕೊಳ್ಳುವಂತಾಗಿದೆ ಎಂದು ವ್ಯಾಪಾರಸ್ಥರು ಖಷಿಯಾಗಿದ್ದಾರೆ.

ಒಟ್ಟಾರೆ ಬಯಲು ಸೀಮೆ ಕೋಲಾರದಲ್ಲಿ ಬಿಸಿಲ ತಾಪ ಹೆಚ್ಚಾಗಿದೆ. ಹೀಗಾಗಿ ಜನರು ಬಿಸಿಲ ಬೇಗೆಯಿಂದ ತತ್ತರಿಸಿದ್ದು, ತಂಪಾದ ಹಣ್ಣು ಹಂಪಲು ತಿಂದು, ಜ್ಯೂಸ್​ ಕುಡಿದು, ದಣಿವಾರಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತೋ ಆ ದೇವರೇ ಬಲ್ಲ. -ರಾಜೇಂದ್ರ ಸಿಂಹ

Follow us on

Related Stories

Most Read Stories

Click on your DTH Provider to Add TV9 Kannada