ದಿನನಿತ್ಯದ ಈ ಅಭ್ಯಾಸಗಳು ನಿಮ್ಮನ್ನು ಮಾನಸಿಕ ಖಿನ್ನತೆಗೆ ದೂಡಬಹುದು

| Updated By: Pavitra Bhat Jigalemane

Updated on: Feb 24, 2022 | 11:01 AM

ವರ್ಕ್​ ಫ್ರಾಮ್​ ಹೋಮ್​ನಿಂದ ಕುಟುಂಬದೊಂದಿಗೆ ಇದ್ದೂ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಇದು ನಿಮ್ಮನ್ನು ಇನ್ನಷ್ಟು ಒತ್ತಡಕ್ಕೆ ದೂಡುತ್ತದೆ.

ದಿನನಿತ್ಯದ ಈ ಅಭ್ಯಾಸಗಳು ನಿಮ್ಮನ್ನು ಮಾನಸಿಕ ಖಿನ್ನತೆಗೆ ದೂಡಬಹುದು
ಸಾಂಕೇತಿಕ ಚಿತ್ರ
Follow us on

ಉದ್ಯೋಗ ಎಲ್ಲರಿಗೂ ಬೇಕು. ಆದರೆ ಅದರ ನಿರ್ವಹಣೆ ಸರಿಯಾದ ಕ್ರಮದಲ್ಲಿ ಆಗದಿದ್ದರೆ ಮಾನಸಿಕ ಸಮಸ್ಯೆಗಳು ಎದುರಾಗುವುದು ಖಚಿತ. ಮಾನಸಿಕ ಖಿನ್ನತೆ ನಿಮ್ಮನ್ನು ಸುಖಾ ಸುಮ್ಮನೆ ಆತಂಕ, ಒತ್ತಡಗಳು ಹೆಚ್ಚಾಗುವಂತೆ ಮಾಡಿ ಅನಾರೋಗ್ಯ ಕಾಡುವಂತೆ ಮಾಡುತ್ತದೆ. ಹೀಗಾಗಿ ಜೀವನಶೈಲಿ ಬದಲಾಯಿಸಿಕೊಳ್ಳದಿದ್ದರೆ ಇಂತಹ ಸಮಸ್ಯೆಗಳನ್ನುಸರಿಯಾಗಿಸಿಕೊಳ್ಳಲು ಸಾಧ್ಯವಿಲ್ಲ. ಅಸಹಜ ಜೀವನ ಶೈಲಿ ಮಾನಸಿಕ ಮಾತ್ರವಲ್ಲದೆ ದೈಹಿಕವಾಗಿಯೂ ಪೆಟ್ಟು ನೀಡುತ್ತದೆ. ಹಾಗಾದರೆ ಯಾವೆಲ್ಲಾ ಕ್ರಮಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಲಬಲ್ಲದು ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು, ಇಲ್ಲಿದೆ ನೋಡಿ ಮಾಹಿತಿ

ಸಮಯಕ್ಕಿಂತ ಹೆಚ್ಚು ಕೆಲಸ ಮಾಡುವುದು:
ಉದ್ಯೋಗ ಜೀವನದಲ್ಲಿ ಕುಟುಂಬಕ್ಕೂ ಸಮಯ ಮೀಸಲಿಡುವುದು ಅತೀ ಮುಖ್ಯವಾಗಿದೆ.  ವರ್ಕ್​ ಫ್ರಾಮ್​ ಹೋಮ್​ನಿಂದ ಕುಟುಂಬದೊಂದಿಗೆ ಇದ್ದೂ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಇದು ನಿಮ್ಮನ್ನು ಇನ್ನಷ್ಟು ಒತ್ತಡಕ್ಕೆ ದೂಡುತ್ತದೆ. ಅಲ್ಲದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಆದ್ದರಿಂದ ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಡಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಇದು ನಿಮಗೆ ಒತ್ತಡದಿಂದ ಮುಕ್ತರಾಗಲು ಸಹಾಯ ಮಾಡುತ್ತದೆ.

ಅಸಮರ್ಪಕ ಸಮಯ ನಿರ್ವಹಣೆ:
ಕೆಲಸದ ವೇಳೆ ಸರಿಯಾದ  ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು, ಕನಿಷ್ಟ 5 ನಿಮಿಷವಾದರೂ ಬ್ರೇಕ್​ ತೆಗದುಕೊಳ್ಳದಿರುವುದು ಅಸಮರ್ಪಕ ಸಮಯ ನಿರ್ವಹಣೆಯ ಲಕ್ಷಣವಾಗಿದೆ.  ಒಂದಾದ ಮೇಲೊಂದರಂತೆ ಮೀಟಿಂಗ್​ಗಳನ್ನು ಅಟೆಂಡ್​ ಮಾಡಿ ಸ್ವಲ್ಪವೂ ಗ್ಯಾಪ್​ ತೆಗೆದುಕೊಳ್ಳದಿದ್ದರೆ ಅದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ.  ಆದರಿಂದ ಸಮಯ ನಿರ್ವಹಣೆಯೊಂದಿಗೆ ಕೆಲಸ ಮಾಡಿ.

ಸರಿಯಾಗಿ ನಿದ್ದೆ ಮಾಡದೇ ಇರುವುದು:
ಕೆಲಸದ ಒತ್ತಡ, ಮಾನಸಿಕ ತೊಳಲಾಟಗಳ ನಡುವೆ ಸರಿಯಾಗಿ ನಿದ್ದೆ ಮಾಡದೆ ಇರುವುದು ನಿಮ್ಮ ಮಾನಸಿಕ ಸ್ಥತಿಗತಿಯನ್ನು ಹದಗೆಡಿಸುತ್ತದೆ. ಆದ್ದರಿಂದ ಪ್ರತೀ ಆರೋಗ್ಯವಂತ ವ್ಯಕ್ತಿಗೆ ಕನಿಷ್ಠ 6 ರಿಂದ 8 ಗಂಟೆಗಳ ನಿದ್ದೆ ಅತ್ಯಗತ್ಯವಾಗಿದೆ. ನಿದ್ದೆ ಪ್ರತೀ ಜೀವಿಯ ಎಲ್ಲಾ ರೀತಿಯ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಈ ರೀತಿಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸರಿಯಾದ ಸಮಯಕ್ಕೆ ನಿದ್ದೆ ಮಾಡಿ.

ಸಂಬಂಧವಿಲ್ಲದ ಕೆಲಸಗಳನ್ನು ಕೈಗೆತ್ತಿಕೊಳ್ಳುವುದು:
ಪ್ರತೀ ಉದ್ಯೋಗಿಗೆ ಅವನದೇ ಜವಾಬ್ದಾರಿಗಳಿರುತ್ತದೆ. ಅದನ್ನು ಬಿಟ್ಟು ಸಂಬಂಧವಿಲ್ಲದ ಅಥವಾ ಅನಗತ್ಯ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಳ್ಳುವುದು ನಿಮ್ಮ ಮಾನಸಿಕ ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಹೀಗಾಗಿ ನಿಮ್ಮ ಉದ್ಯೋಗದ ಸ್ಥಳದಲ್ಲಿ ನಿಮ್ಮ ಕೆಲಸದಲ್ಲಿ ಮಾತ್ರ ಆದಷ್ಟು ಗಮನಹರಿಸಿ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಒಳಿತು.

ತಪ್ಪಿತಸ್ಥ ಭಾವನೆಯಿಂದ ಕೆಲಸಮಾಡುವುದು:
ಯಾವಾಗಲೂ ಮಾಡಿದ ಅಥವಾ ಮಾಡುವ ಕೆಲಸದ ಬಗ್ಗೆ ಗಿಲ್ಟಿ ಭಾವನೆ ಬೇಡ. ತಪ್ಪು ಎಲ್ಲರೂ ಮಾಡುತ್ತಾರೆ. ಆದರೆ ಅದನ್ನು ಸರಿಪಡಿಸಿಕೊಂಡು ಮತ್ತೆಂದೂ ಪುನಾರಾವರ್ತನೆಯಾಗದ ರೀತಿಯಲ್ಲಿ ಕೆಲಸ ಮಾಡಿ. ಅದನ್ನು ಬಿಟ್ಟು ತಪ್ಪಿತಸ್ಥ ಭಾವನೆಯಲ್ಲಿ ಕೆಲಸ ಮಾಡುವುದರಿಂದ ಮಾನಸಿಕ ನೆಮ್ಮದಿಯೂ ಹದಗೆಡುತ್ತದೆ. ಕೆಲಸದಲ್ಲಿಯೂ ನಿರುತ್ಸಾಹ ಮೂಡುತ್ತದೆ.

ಇದನ್ನೂ ಓದಿ:

ಗರ್ಭಿಣಿಯರ ಆರೋಗ್ಯಕ್ಕೂ ಒಳಿತು ಬೆಲ್ಲ: ಇಲ್ಲಿದೆ ಉಪಯುಕ್ತ ಮಾಹಿತಿ