ಗರ್ಭಿಣಿಯರ ಆರೋಗ್ಯಕ್ಕೂ ಒಳಿತು ಬೆಲ್ಲ: ಇಲ್ಲಿದೆ ಉಪಯುಕ್ತ ಮಾಹಿತಿ

ಗರ್ಭಿಣಿಯರಿಗೂ ಬೆಲ್ಲ ಅತ್ಯುತ್ತಮ ಆಹಾರವಾಗಿದೆ. ಈ ಕುರಿತು ದೆಹಲಿಯ ನ್ಯೂಟ್ರಿಶಿಯನ್​ ರುಪಾಲಿ ಮಾತಹುರ್​ ಎನ್ನುವವರು ವಿವರಿಸಿದ್ದಾರೆ.ಇಲ್ಲಿದೆ ನೋಡಿ ಮಾಹಿತಿ

ಗರ್ಭಿಣಿಯರ ಆರೋಗ್ಯಕ್ಕೂ ಒಳಿತು ಬೆಲ್ಲ: ಇಲ್ಲಿದೆ ಉಪಯುಕ್ತ ಮಾಹಿತಿ
ಬೆಲ್ಲ
Follow us
TV9 Web
| Updated By: Pavitra Bhat Jigalemane

Updated on:Feb 23, 2022 | 3:33 PM

ಬೆಲ್ಲ(Jaggery) ಎಲ್ಲಾ ವಯಸ್ಸಿನವರಿಗೂ ಉತ್ತಮ ಆಹಾರ. ಯಥೇಚ್ಛವಾದ ಕಬ್ಬಿಣಾಂಶ (Iron Content)ವನ್ನು ಹೊಂದಿರುವ ಬೆಲ್ಲವು ಆರೋಗ್ವಯನ್ನು ವೃದ್ಧಿಸಲು ಸಹಾಯಕವಾಗಿದೆ.  ಹಾರ್ಮೋನುಗಳ ಅಸಮತೋಲನವನ್ನು ಬೆಲ್ಲ ಸರಿದೂಗಿಸುತ್ತದೆ. ಹೀಗಾಗಿ ಪ್ರತಿದಿನ ಬೆಲ್ಲದ ಸೇವನೆ ದೇಹಕ್ಕೆ ಅಗತ್ಯ ಆಹಾರಗಳಲ್ಲಿ ಒಂದು ಎನ್ನಬಹುದು. ಪ್ರತಿದಿನ ಬೆಲ್ಲದೊಂದಿಗೆ ನೀರನ್ನು ಸೇವಿಸುವುದರಿಂದ ದೇಹ ನಿರ್ಜಲೀಕರಣವಾಗುವುದು ತಪ್ಪುತ್ತದೆ. ದೇಹವನ್ನು ತಂಪಾಗಿಸಿರಿ ಹಲವು ಕಾಯಿಲೆಗಳು ಬರದಂತೆ ತಡೆಯುತ್ತದೆ. ಅಲ್ಲದೆ ಚರ್ಮದ ಆರೋಗ್ಯಕ್ಕೂ ಬೆಲ್ಲ ಉತ್ತಮ ಪದಾರ್ಥವಾಗಿದೆ. ಗರ್ಭಿಣಿಯರಿಗೂ ಬೆಲ್ಲ ಅತ್ಯುತ್ತಮ ಆಹಾರವಾಗಿದೆ. ಹೀಗಾಗಿ ಗರ್ಭಾವಸ್ಥೆಯ (Pregnancy) ಸಂದರ್ಭದಲ್ಲಿ ಬೆಲ್ಲದ ಸೇವನೆ ಒಳ್ಳೆಯದು.   ಈ ಕುರಿತು ದೆಹಲಿಯ ನ್ಯೂಟ್ರಿಶಿಯನ್​ ರುಪಾಲಿ ಮಾತಹುರ್​ ಎನ್ನುವವರು ವಿವರಿಸಿದ್ದಾರೆ.ಇಲ್ಲಿದೆ ನೋಡಿ  ಮಾಹಿತಿ

ಕಬ್ಬಿಣಾಂಶ: ಬೆಲ್ಲದಲ್ಲಿ ಸಮೃದ್ಧವಾದ ಕಬ್ಭಿಣಾಂಶವಿದೆ. ಕಬ್ಬಿಣಾಂಶವು ದೇಹದಲ್ಲಿ ಬ್ಲಡ್​​ ಸೆಲ್ಸ್​ಗಳನ್ನು ಉತ್ಪತ್ತಿ ಮಾಡಲು ಸಹಾಯಕಾವಗಿದೆ. ಗರ್ಭಧರಿಸಿದ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚು ಕಬ್ಬಿಣಾಂಶದ ಅಗತ್ಯವಿದೆ. ಆದ್ದರಿಂದ ಪ್ರತಿದಿನ  ಬೆಲ್ಲವನ್ನು ಸೇವಿಸುವುದು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು.

ಸೋಂಕು ಹರಡುವುದನ್ನು ತಡೆಯುತ್ತದೆ: ಬೆಲ್ಲದಲ್ಲಿನ ಆ್ಯಂಟಿ ಆಕ್ಸಿಡೆಂಟ್​ ಅಂಶಗಳು ಸೋಂಕು ಹರಡುವುದುನ್ನು ಅಥವಾ ಇನ್ಫೆಕ್ಷನ್​ ಆಗುವುದನ್ನು ತಡೆಯುತ್ತದೆ. ಗರ್ಭಣಿಯರಲ್ಲಿ ರಕ್ತವನ್ನು ಉತ್ಪತ್ತಿ ಮಾಡುವ ಮುಲಕ ಹೆರಿಗೆಯ ಸಂದರ್ಭದಲ್ಲಾಗುವ ಅಪಾಯವನ್ನು ತಡೆಯುತ್ತದೆ.

ಮೂಳೆಗಳ ಆರೋಗ್ಯ: ಬೆಲ್ಲ ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ. ಬೆಲ್ಲದಲ್ಲಿರುವ ಮ್ಯಾಗ್ನಿಶಿಯಂ ಅಂಶಗಳು  ಮೂಳಗಳನ್ನು ಬಲಪಡಿಸಿ ಆರೋಗ್ಯವನ್ನು ಕಾಪಾಡುತ್ತದೆ.

ನೀರಿನ ಧಾರಣವನ್ನು ಕಡಿಮೆ ಮಾಡುತ್ತದೆ: ಗರ್ಭಾವಸ್ಥೆಯ ಸಂದರ್ಭದಲ್ಲಿ ನೀರಿನ ಧಾರಣ ಸಹಜ. ಇದನ್ನು ನಿಯಂತ್ರಿಸಲು ಬೆಲ್ಲ ಸಹಾಯ ಮಾಡುತ್ತದೆ. ಬೆಲ್ಲದಲ್ಲಿರುವ ಪೊಟ್ಯಾಷಿಯಂ ಮತ್ತು ಸೋಡಿಯಂ ಅಂಶಗಳು ಮಗು ಮತ್ತು ತಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ: ಮಲಬದ್ಧತೆ, ಅಜೀರ್ಣ ಗರ್ಭಾವಸ್ಥೆಯ ಸಂದರ್ಭದಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಬೆಲ್ಲ ಪರಿಹಾರ ನೀಡುತ್ತದೆ. ಪ್ರತಿದಿನ ಬೆಲ್ಲದ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.  ಮಲಬದ್ಧತೆಯ ಸಮಸ್ಯೆಗೂ ಬೆಲ್ಲ ಪರಿಹಾರ ನೀಡುತ್ತದೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್ ಅಭಿಪ್ರಾಯವಾಗಿರುವುದಿಲ್ಲ. ಹಿಂದೂಸ್ತಾನ್​ಟೈಮ್ಸ್​ ವರದಿಯನ್ನು ಆದರಿಸಿ ಮಾಹಿತಿಯನ್ನು ಆಧರಿಸಿದೆ.) 

ಇದನ್ನೂ ಓದಿ:

COVID-19: ರೆಡ್​ ವೈನ್ ಸೇವನೆಯಿಂದ​ ಕೊರೊನಾದಿಂದ ದೂರವಿರಬಹುದು-ಅಧ್ಯಯನ

Published On - 3:29 pm, Wed, 23 February 22

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ