COVID-19: ರೆಡ್ ವೈನ್ ಸೇವನೆಯಿಂದ ಕೊರೊನಾದಿಂದ ದೂರವಿರಬಹುದು-ಅಧ್ಯಯನ
Red Wine Effects :ಯುಎಸ್ ನ್ಯಾಷನಲ್ ಹೆಲ್ತ್ ಸರ್ವೀಸ್‌ನ ಅಮೇರಿಕನ್ ಜರ್ನಲ್ ಆಫ್ ಹೆಲ್ತ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ವಾರಕ್ಕೆ ಒಂದರಿಂದ ಐದು ಗ್ಲಾಸ್ ಕೆಂಪು ವೈನ್ ಸೇವಿಸುವವರಿಗೆ ಕೋವಿಡ್ 19 ಸೋಂಕಿಗೆ ಒಳಗಾಗುವ ಸಾಧ್ಯತೆ 10 ರಿಂದ 16 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಕಂಡುಹಿಡಿದಿದೆ.
Updated on:Feb 23, 2022 | 12:52 PM



ರೆಡ್ ವೈನ್ ಮಾತ್ರವಲ್ಲ. ಶಿಫಾರಸ್ಸು ಮಾಡಿದ ಬಿಳಿ ವೈನ್ ಮತ್ತು ಶಾಂಪೇನ್ (ವಾರಕ್ಕೆ 1-4 ಗ್ಲಾಸ್) ಸೇವಿಸುವುದರಿಂದ ಕೋವಿಡ್ ಅಪಾಯವನ್ನು ಶೇಕಡಾ 8 ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಮದ್ಯಪಾನ ಮಾಡದವರಲ್ಲಿ ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ತೋರಿಸಿವೆ. ಮತ್ತು ಮದ್ಯಪಾನ ಮಾಡುವವರಿಗೆ ಸೋಂಕು ತಗಲುವ ಸಾಧ್ಯತೆ ಕಡಿಮೆ

ವಾರಕ್ಕೊಮ್ಮೆ ಆಲ್ಕೋಹಾಲ್ ಸೇವನೆ ಉತ್ತಮ ಎನ್ನಲಾಗಿದೆ. 14 ಯೂನಿಟ್‌ಗಿಂತ ಕಡಿಮೆ ಆಲ್ಕೋಹಾಲ್, 14 ಯೂನಿಟ್‌ಗಿಂತ ಹೆಚ್ಚು, 26 ಯೂನಿಟ್‌ಗಿಂತ ಕಡಿಮೆ ಮತ್ತು 26 ಯೂನಿಟ್‌ಗಿಂತ ಹೆಚ್ಚು ಸೇವಿಸುವ ಒಟ್ಟು 473,958 ಜನರಲ್ಲಿ ಅಧ್ಯಯಯನ ನಡೆಸಲಾಯಿತು. ಅವರಲ್ಲಿ 16,559 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಪಾಲಿಫಿನಾಲ್‌ಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ರಕ್ತ ಪರಿಚಲನೆಯ ಸಮಯದಲ್ಲಿ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ
Published On - 11:12 am, Wed, 23 February 22



















