Updated on: Feb 23, 2022 | 6:00 AM
‘ಭೀಮ್ಲಾ ನಾಯಕ್‘ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹುಟ್ಟಿದೆ. ಅಭಿಮಾನಿಗಳ ಕುತೂಹಲ ತಣಿಸುವ ನಿಟ್ಟಿನಲ್ಲಿ ‘ಭೀಮ್ಲಾ ನಾಯಕ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಟ್ರೇಲರ್ ನೋಡಿ ಒಂದು ವರ್ಗ ಸಂತಸ ವ್ಯಕ್ತಪಡಿಸಿದೆ. ಆದರೆ, ಇನ್ನೂ ಕೆಲವರು ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಮಲಯಾಳಂನ ‘ಅಯ್ಯಪ್ಪನುಮ್ ಕೋಶಿಯುಮ್’ ಸಿನಿಮಾದ ರಿಮೇಕ್ ‘ಭೀಮ್ಲಾ ನಾಯಕ್’. ಪೊಲೀಸ್ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು.
ಪೃಥ್ವಿರಾಜ್ ಹಾಗೂ ಬಿಜು ಮೆನನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್ ಕಲ್ಯಾಣ್ ನಿರ್ವಹಿಸಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ಎರಡೂ ಪಾತ್ರವನ್ನು ಸರಿಯಾಗಿ ತೋರಿಸಲಾಗಿತ್ತು. ಆದರೆ, ಈ ಚಿತ್ರದಲ್ಲಿ ಹಾಗಾಗಿಲ್ಲ ಎನ್ನುವ ಅನುಮಾನ ಕೆಲವರಲ್ಲಿ ಮೂಡಿದೆ.
‘ಭೀಮ್ಲಾ ನಾಯಕ್’ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರನ್ನು ಹೈಲೈಟ್ ಮಾಡಲಾಗಿದೆ. ಆದರೆ, ರಾನಾ ಪಾತ್ರಕ್ಕೆ ಅಷ್ಟಾಗಿ ಒತ್ತು ಕೊಟ್ಟಿಲ್ಲ ಎನ್ನುವ ಆರೋಪ ಸಿನಿಪ್ರಿಯರ ವಲಯದಿಂದ ಬರುತ್ತಿದೆ. ಮೂಲ ಸಿನಿಮಾ ಇಷ್ಟಪಟ್ಟವರು, ಈ ಸಿನಿಮಾ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ರಾನಾ ಅಭಿಮಾನಿಗಳೂ ಕೂಡ ಈ ಬಗ್ಗೆ ಕೊಂಚ ಅಪ್ಸೆಟ್ ಆಗಿದ್ದಾರೆ. ಪವನ್ ಕಲ್ಯಾಣ್ಗೆ ಪ್ರಾಮುಖ್ಯತೆ ನೀಡಲಾಗಿದೆ. ಆದರೆ, ನಮ್ಮ ಹೀರೋನ ನಿರ್ಲಕ್ಷಿಸಿದ್ದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.