Turmeric: ಮುಖಕ್ಕೆ ಅರಿಶಿನ ಹಚ್ತೀರಾ, ಹಾಗಾದರೆ ಈ ತಪ್ಪುಗಳನ್ನು ಮಾಡಲೇಬೇಡಿ

Turmeric:ಅರಿಶಿನದಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಬಹುತೇಕ ಮಂದಿಗೆ ತಿಳಿದಿದೆ. ಆದರೆ ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಅದರದ್ದೇ ಆದ ಕ್ರಮವಿದೆ ಎಂಬುದು ಎಲ್ಲರಿಗೂ ತಿಳಿದಿಲ್ಲ

Turmeric: ಮುಖಕ್ಕೆ ಅರಿಶಿನ ಹಚ್ತೀರಾ, ಹಾಗಾದರೆ ಈ ತಪ್ಪುಗಳನ್ನು ಮಾಡಲೇಬೇಡಿ
ಅರಿಶಿನ
Follow us
TV9 Web
| Updated By: ನಯನಾ ರಾಜೀವ್

Updated on: May 29, 2022 | 12:46 PM

ಅರಿಶಿನ(Turmeric) ದಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಬಹುತೇಕ ಮಂದಿಗೆ ತಿಳಿದಿದೆ. ಆದರೆ ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಅದರದ್ದೇ ಆದ ಕ್ರಮವಿದೆ ಎಂಬುದು ಎಲ್ಲರಿಗೂ ತಿಳಿದಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಮುಖಕ್ಕೆ ಪ್ಯಾಕ್‌ ಆಗಿ ಅರಿಶಿನವನ್ನು ಬಳಸುವುದರಿಂದ ಅರಿಶಿನವು ನಮ್ಮ ದೈನಂದಿನ ಜೀವನಶೈಲಿಯಲ್ಲಿ ವಿಶೇಷ ಸ್ಥಾನ ಹೊಂದಿದೆ.

ಅರಿಶಿನದಲ್ಲಿರುವ ಗುಣಲಕ್ಷಣಗಳು ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಕೂಡ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಆಯುರ್ವೇದದ ಪ್ರಕಾರ, ಅರಿಶಿನವು ಔಷಧೀಯ ಗುಣಗಳನ್ನು ಸಹ ಹೊಂದಿದೆ.

ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ

ಅರಿಶಿನದೊಂದಿಗೆ ಬೇರೆ ಪದಾರ್ಥಗಳ ಮಿಶ್ರಣ ಬೇಡ ಅರಿಶಿನದೊಂದಿಗೆ ರೋಸ್ ವಾಟರ್, ನಿಂಬೆ ರಸ, ಹಾಲು ಇತ್ಯಾದಿಗಳನ್ನು ಮಿಶ್ರಣ ಮಾಡಿ ಎಂದೂ ಮುಖಕ್ಕೆ ಹಚ್ಚಬೇಡಿ. ಅರಿಶಿನಕ್ಕೆ ಅದರದ್ದೇ ಆದ ಗುಣವಿದ್ದು, ಕೇವಲ ಅರಿಶಿನವನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿದರೂ ಸಾಕು. ಹಲವಾರು ವಿಭಿನ್ನ ಪದಾರ್ಥಗಳನ್ನು ಅರಿಶಿನವನ್ನು ಮಿಶ್ರಣ ಮಾಡಿದರೆ, ಅದು ಅರಿಶಿನದೊಂದಿಗೆ ಪ್ರತಿಕ್ರಿಯಿಸುವ ಮೂಲಕ ಚರ್ಮಕ್ಕೆ ಹಾನಿ ಮಾಡಬಹುದು.

ಫೇಸ್​ವಾಶ್​ ಅಥವಾ ಸೋಪಿನಿಂದ ಮುಖ ತೊಳೆಯಬೇಡಿ ಅರಿಶಿನವನ್ನು ಹಚ್ಚಿದ ಬಳಿಕ ಫೇಸ್​ ವಾಶ್ ಅಥವಾ ಸೋಪಿನಿಂದ ಮುಖ ತೊಳೆಯಬೇಡಿ, ಒಂದೊಮ್ಮೆ ಹಾಗೆ ಮಾಡಿದ್ದಲ್ಲಿ ಅರಿಶಿನ ಹಚ್ಚಿಯೂ ಉಪಯೋಗವಿಲ್ಲದಂತಾಗುತ್ತದೆ.

ಬೇಸಿಗೆಯಲ್ಲಿ ಅರಿಶಿನದ ಬಳಕೆ ಕಡಿಮೆ ಇರಲಿ ಬೇಸಿಗೆಯಲ್ಲಿ, ಅರಿಶಿನವನ್ನು ಪೇಸ್ಟ್ ರೂಪದಲ್ಲಿ ಕಡಿಮೆ ಪ್ರಮಾಣದಲ್ಲಿ ಅನ್ವಯಿಸಿ. ನೀವು ಬಯಸಿದರೆ, ಅದಕ್ಕೆ ಮೊಸರು ಸೇರಿಸಿ. ಇದನ್ನು ಮಾಡುವುದರಿಂದ, ಅದರ ಬಿಸಿ ಪರಿಣಾಮ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ. ಇದು ಬೇಸಿಗೆಯಲ್ಲಿ ನಿಜವಾಗಿಯೂ ತ್ವಚೆಗೆ ಒಂದು ರೀತಿಯ ತಂಪಾದ ಅನುಭವವನ್ನೂ ನೀಡುತ್ತದೆ.

ತುಂಬಾ ಹೊತ್ತು ಅರಿಶಿನ ಹಚ್ಚಿಡಬೇಡಿ ಮುಖಕ್ಕೆ ತುಂಬಾ ಹೊತ್ತು ಅರಿಶಿನವನ್ನು ಹಚ್ಚಿ ಇಡಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಅರಿಶಿನದ ಪರಿಣಾಮವು ಬಿಸಿಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ಚರ್ಮದ ಮೇಲೆ ಅರಿಶಿನವನ್ನು ಅನ್ವಯಿಸಿದ ನಂತರ, ಚರ್ಮವು ಹೊಳೆಯುವ ಬದಲಿಗೆ ಮಂಕಾಗಲು ಪ್ರಾರಂಭಿಸಬಹುದು.

ಚೆನ್ನಾಗಿ ಮುಖ ತೊಳೆದುಕೊಳ್ಳಿ ಅರಿಶಿನವು ಮುಖದ ಮೇಲಿನ ಕಲೆಗಳನ್ನು ತೆಗೆಯುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದನ್ನು ಮುಖದ ಮೇಲೆ ದೀರ್ಘಕಾಲದವರೆಗೆ ಬಿಟ್ಟರೆ, ಅದು ನಿಮ್ಮ ಮುಖದ ಮೇಲೆ ಕಲೆ ಮೂಡುವಂತೆ ಮಾಡುತ್ತದೆ. ಆದ್ದರಿಂದ ನೀವು ಅರಿಶಿನವನ್ನು ನಿಮ್ಮ ಚರ್ಮದ ಮೇಲೆ ಹೆಚ್ಚು ಹೊತ್ತು ಬಿಡದಂತೆ ನೋಡಿಕೊಳ್ಳಿ.

ಈ ಮೇಲಿನ ಲೇಖನವು ಸಾಮಾನ್ಯ ಮಾಹಿತಿ ಹಾಗೂ ಮನೆಮದ್ದುಗಳನ್ನು ಒಳಗೊಂಡಿರುತ್ತದೆ. ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ