ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ, ನಮ್ಮ ದೇಹವನ್ನು ಸರಿಯಾದ ರೀತಿಯಲ್ಲಿ ನೀರಿನಾಂಶ (ಹೈಡ್ರೀಕರಿಸಿ) ಅತ್ಯಗತ್ಯ. ಮತ್ತು ಪ್ರಸ್ತುತ ಇರುವ ಬಿಸಿಲಿನ ಶಾಖಕ್ಕೆ ಏನಾದರೂ ತಂಪಾದ ಪಾನೀಯ ಕುಡಿಯಬೇಕೆಂದೆನಿಸುವುದು ಸಾಮಾನ್ಯ. ಆದರೆ ಕಾರ್ಬೋನೇಟೆಡ್ ಪಾನೀಯಗಳು ಮತ್ತು ಪ್ಯಾಕ್ ಮಾಡಿದ ಜ್ಯೂಸ್ ಗಳನ್ನು ಸೇವಿಸುವುದರಿಂದ ಆರೋಗ್ಯ ಹದಗೆಡಬಹುದು. ನೀವು ಈಗಾಗಲೇ ತೂಕ ಇಳಿಸಿಕೊಳ್ಳುವ ಡಯೆಟ್ನಲ್ಲಿದ್ದರೆ, ನೀವು ಈ ರೀತಿಯ ಜ್ಯೂಸ್ ಗಳಿಂದ ಆದಷ್ಟು ದೂರವಿರಬೇಕು. ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಗಳು ನಿಮ್ಮ ಫಿಟ್ ನೆಸ್ ಗುರಿಗಳಿಗೆ ಅಡ್ಡಿಯಾಗಬಹುದು. ಆದ್ದರಿಂದ ನೀವು ಈ ಬೇಸಿಗೆಯ ಋತುವಿನಲ್ಲಿ ದೇಹವನ್ನು ಹೈಡ್ರೀಕರಿಸಲು ಆರೋಗ್ಯಕರ ನೈಸರ್ಗಿಕ ಪಾನೀಯಗಳನ್ನು ಸೇವನೆ ಮಾಡಿ. ಅಂತಹ ಪಾನೀಯಗಳ ಪಟ್ಟಿ ಇಲ್ಲಿದೆ. ಇವುಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ಸೌತೆಕಾಯಿ ಮಜ್ಜಿಗೆ: ಮಜ್ಜಿಗೆ ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಈ ರಿಫ್ರೆಶ್ ಪಾನೀಯವು ಪೋಷಕಾಂಶಗಳಿಂದ ತುಂಬಿದ್ದು, ಅದು ನಿಮ್ಮನ್ನು ರಿಫ್ರೆಶ್ ಮಾಡುವುದಲ್ಲದೆ ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ನೀವು ದೇಹ ತೂಕವನ್ನು ಕಡಿಮೆ ಮಾಡಲು ಬಯಸಿದರೆ ಮಜ್ಜಿಗೆಗೆ ಸೌತೆಕಾಯಿಯನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ದೇಹ ತಂಪಾಗಿಸುವಿಕೆ ಮತ್ತು ನಿರ್ವಿಶೀಕರಣದ ಗುಣಲಕ್ಷಣಗಳನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ಪ್ರಮಾಣದ ನೀರಿನಾಂಶವನ್ನು ಹೊಂದಿರುವ ಸೌತೆಕಾಯಿಯು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇದು ತೂಕ ನಷ್ಟಕ್ಕೆ ಸಹಾಯಕವಾಗಿದೆ.
ಜೀರಿಗೆ ನೀರು(ಜಲ್ ಜೀರಾ): ತೂಕ ಇಳಿಸಿಕೊಳ್ಳುವ ಆಹಾರಕ್ರಮದಲ್ಲಿರುವವರಿಗೆ ಜೀರಿಗೆ ನೀರನ್ನು ಸೇವಿಸಲು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಈ ಜಲ್ ಜೀರಾ ಪಾನೀಯವು ಹೆಚ್ಚು ಸುವಾಸನೆ ಮತ್ತು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜಲ್ ಜೀರಾದಲ್ಲಿ ಹುಣಸೆ ಹಣ್ಣನ್ನು ಸೇರಿಸಿರುತ್ತಾರೆ. ಈ ಹುಣಸೆ ಕಡಿಮೆ ಕೊಬ್ಬಿನಾಂಶ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. ಅಲ್ಲದೆ ಜಲ್ ಜೀರಾದಲ್ಲಿ ಹಲವಾರು ಮಸಾಲೆಗಳನ್ನು ಸಹ ಹಾಕಿರುತ್ತಾರೆ. ಈ ಪೋಷಕಾಂಶಗಳು ನಿಮ್ಮ ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ. ಮತ್ತು ಈ ಪಾನೀಯವನ್ನು ತಯಾರಿಸಲು ಸಕ್ಕರೆಯ ಬದಲಿಗೆ ಬೆಲ್ಲವನ್ನು ಸೇರಿಸಿದರೆ ಇದು ಇನ್ನಷ್ಟು ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ:Summer Drinks: ಪುನರ್ಪುಳಿ ಜ್ಯೂಸ್ನಿಂದ ಬೇಲದ ಹಣ್ಣಿನ ಜ್ಯೂಸ್ ವರೆಗು; ಇಲ್ಲಿದೆ ವಿಶೇಷ 4 ಬೇಸಿಗೆಯ ಪಾನೀಯಗಳು
ಪುನರ್ಪುಳಿ (ಮುರುಗಲ ಹಣ್ಣು) ಜ್ಯೂಸ್: ಇದೊಂದು ಸಾಂಪ್ರದಾಯಿಕ ಪಾನೀಯವಾಗಿದೆ. ಈ ಪುನರ್ಪುಳಿ ಜ್ಯೂಸ್ಗೆ ಶುಂಠಿ, ಕೊತ್ತಂಬರಿ ಸೊಪ್ಪು, ಕಾಯಿ ಮೆಣಸು ಹಾಗೂ ಇನ್ನಿತರ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇದು ರುಚಿಕರ ಮಾತ್ರವಲ್ಲದೆ ಆರೋಗ್ಯಕರವಾದ ಪಾನೀಯವಾಗಿದೆ. ಪುನರ್ಪುಳಿ ನಾರಿನಾಂಶದಿಂದ ಅಧಿಕವಾಗಿರುವುದರಿಂದ ಇದು ನಿಮ್ಮನ್ನು ಹೆಚ್ಚು ಕಾಲ ಸಂತೃಪ್ತವಾಗಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ತೂಕ ನಷ್ಟಕ್ಕೂ ಇದು ಸಹಕಾರಿಯಾಗಿದೆ.
ತೆಂಗಿನ ನೀರು ಮತ್ತು ಸಬ್ಜಾ ಬೀಜಗಳು: ಇದು ಬೇಸಿಗೆಯ ಉತ್ತಮ ಪಾನೀಯವಾಗಿದೆ. ಈ ನೈಸರ್ಗಿಕ ಪಾನೀಯವು ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡದೆ. ನೀವು ತೂಕ ಇಳಿಸಿಕೊಳ್ಳುವ ಆಹಾರಕ್ರಮದಲ್ಲಿದ್ದರೆ, ಈ ಪಾನೀಯವು ನಿಮ್ಮ ತೈಕ ಇಳಿಕೆಗೆ ಸಹಾಯ ಮಾಡುತ್ತದೆ. ಸೀಯಾಳ ಅಥವಾ ತೆಂಗಿನ ನೀರಿಗೆ ನೆನೆಸಿಟ್ಟ ಸಜ್ಬಾ ಬೀಜಗಳನ್ನು ಸೇರಿಸಿ, ನಂತರ ಕುಡಿಯಿರಿ. ಇದು ದೇಹವನ್ನು ತಂಪಾಗಿರಿಸುವುರ ಜೊತೆಗೆ ಶಕ್ತಿಯನ್ನು ನೀಡುತ್ತದೆ.
ಕಲ್ಲಂಗಡಿ ಮತ್ತು ತುಳಸಿ ಕೂಲರ್: ಈ ಬೀಸಿಗೆಯಲ್ಲಿ ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ಸೇವಿಸುತ್ತಾರೆ. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿದ್ದು, ಅದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ ಮತ್ತು ಅದು ಹೊಟ್ಟೆಯ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಹಾಗೆಯೇ ತುಳಸಿಯು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕಲ್ಲಂಗಡಿ ತುಳಸಿ ಕೂಲರ್ ನ್ನು ಸ್ಪಾರ್ಕ್ಲಿಂಗ್ ವಾಟರ್(ಸೋಡಾ ನೀರು) ಬಳಸಿ ತಯಾರಿಸಲಾಗುತ್ತದೆ. ಈ ಪಾನೀಯವು ಈ ಬೇಸಿಗೆಯಲ್ಲಿ ನಿಮ್ಮನ್ನು ರಿಫ್ರೆಶ್ ಆಗಿ ಇರಿಸುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:02 pm, Sat, 22 April 23