Summer Drinks: ಪುನರ್ಪುಳಿ ಜ್ಯೂಸ್ನಿಂದ ಬೇಲದ ಹಣ್ಣಿನ ಜ್ಯೂಸ್ ವರೆಗು; ಇಲ್ಲಿದೆ ವಿಶೇಷ 4 ಬೇಸಿಗೆಯ ಪಾನೀಯಗಳು
ಬೇಸಿಗೆಯಲ್ಲಿ ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಸೇವಿಸುವುದು ಮುಖ್ಯವಾಗಿದೆ. ನೀವು ಪ್ರಯತ್ನಿಸಲೇಬೇಕಾದ 5 ಆರೋಗ್ಯಕರ ಬೇಸಿಗೆ ಪಾನೀಯಗಳು ಇಲ್ಲಿವೆ.
ಬೇಸಿಗೆ ಕಾಲ (Summer) ಬಂದಿದೆ ಮತ್ತು ನಿರ್ಜಲೀಕರಣದಿಂದ (Dehydration) ದೂರವಿರುವ ಅಗತ್ಯವೂ ಇದೆ. ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಹೆಚ್ಚಿನ ದ್ರವಗಳು ಬೇಕಾಗುತ್ತವೆ ಏಕೆಂದರೆ ಹೆಚ್ಚಿದ ತಾಪಮಾನದಿಂದಾಗಿ (Heat) ನೀವು ಹೆಚ್ಚು ಬೆವರುತ್ತೀರಿ. ನೀರನ್ನು ಹೊರತುಪಡಿಸಿ ಹಲವು ಆಯ್ಕೆಗಳು ನಿಮಗೆ ತಂಪಾಗಿರಲು ಮತ್ತು ನಿರ್ಜಲೀಕರಣದಿಂದ ದೂರವಿರಲು ಸಹಾಯ ಮಾಡುತ್ತದೆ. ಈ ಕೆಲವು ಪೌಷ್ಟಿಕ ಆಯ್ಕೆಗಳನ್ನೂ ಈ ಬೇಸಿಗೆಯಲ್ಲಿ ಸೇವಿಸಿ. ನಾವು ಬೇಸಿಗೆಯನ್ನು ಸ್ವಾಗತಿಸುತ್ತಿದ್ದಂತೆ, ಶಾಖವನ್ನು ಮೆಟ್ಟಿ ನಿಲ್ಲಲು ಕೆಲವು ಅತ್ಯುತ್ತಮ ಬೇಸಿಗೆ ಪಾನೀಯಗಳೊಂದಿಗೆ ನಮ್ಮ ದೇಹವನ್ನು ರಿಫ್ರೆಶ್ ಮಾಡೋಣ.
ಬೇಲದ ಹಣ್ಣಿನ ಜ್ಯೂಸ್:
ಇದು ಶಾಖವನ್ನು ತಡೆಯಲು ನಿಮಗೆ ಸಹಾಯ ಮಾಡುವ ಅತ್ಯುತ್ತಮ ಪಾನೀಯಗಳಲ್ಲಿ ಒಂದಾಗಿದೆ. ಬೇಲ್ ಜ್ಯೂಸ್ ಶಕ್ತಿ ವರ್ಧಕವಾಗಿದ್ದು, ಇದು ರೈಬೋಫ್ಲಾವಿನ್ ಮತ್ತು ವಿಟಮಿನ್ ಬಿ ಯಿಂದ ತುಂಬಿರುತ್ತದೆ, ಇದು ಬೇಸಿಗೆಯಲ್ಲಿ ದೇಹದ ಶಕ್ತಿಯ ಪೂರೈಕೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಾಡುವ ವಿಧಾನ: ಬೇಲದ ಹಣ್ಣನ್ನು ನೀರಿನಲ್ಲಿ ನೆನೆಸಿ ಅದನ್ನು ಸೋಸಿ, ನಂತರ ಆ ನೀರಿಗೆ ಬೆಲ್ಲ, ಚಿಟಿಕೆ ಉಪ್ಪು, ಕಾಳುಮೆಣಸಿನ ಪುಡಿ ಹಾಕಿದರೆ ನಿಮ್ಮ ಬೇಲದ ಹಣ್ಣಿನ ಜ್ಯೂಸ್ ಕುಡಿಯಲು ಸಿದ್ದವಾಗಿರುತ್ತದೆ.
ಪುನಾರ್ಪುಳಿ ಜ್ಯೂಸ್:
ಪುನಾರ್ಪುಳಿ ಜ್ಯೂಸ್ ಕುಡಿಯುವುದರಿಂದ ಶಾಖವನ್ನು ಹೊರಹಾಕಲು, ಆಮ್ಲೀಯತೆಯನ್ನು ಕಡಿಮೆ ಮಾಡಲು ಮತ್ತು ಸೂರ್ಯನ ಹೊಡೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪುನಾರ್ಪುಳಿ ಜ್ಯೂಸ್ ಮಧುಮೇಹ-ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಮಾಡುವ ವಿಧಾನ: ಮೊದಲು ಪುನಾರ್ಪುಳಿ ಸೆಪ್ಪೆಯನ್ನು ಸೀರಿನಲ್ಲಿ ನೆನೆಸಿ, ಅಥವಾ ಅಂಗಡಿಯಲ್ಲಿ ಸಿಗುವ ಪುನಾರ್ಪುಳಿ ಸಿರಪ್ ಅನ್ನು ನೀರಿಗೆ ಬೆರೆಸಿ. ನಂತರ ಬೆಲ್ಲ/ಸಕ್ಕರೆ ಸೇರಿಸಿ, ಅರ್ಧ ಗಡಿ ನಿಂಬೆ ಹಣ್ಣಿ ಹಿಂಡಿ ಚಿಟಿಕಿ ಉಪ್ಪು, ಒಂದು ಏಲಕ್ಕಿಯನ್ನು ಜಜ್ಜಿ ಮಿಶ್ರಣಕ್ಕೆ ಸೇರಿಸಿದರೆ ಪುನಾರ್ಪುಳಿ ಜ್ಯೂಸ್ ರೆಡಿ.
ಎಳ್ಳು ಜ್ಯೂಸ್:
ಎಳ್ಳು ಅನೇಕ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಇದು ಅಸ್ತಮಾ, ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್, ಆಸ್ಟಿಯೊಪೊರೋಸಿಸ್, ಮೈಗ್ರೇನ್ ಹಾಗೂ ಮಧುಮೇಹ ರೋಗಗಳಿಗೆ ರಾಮಬಾಣ.
ಮಾಡುವ ವಿಧಾನ: ಚಿಕ್ಕ ಬಾಣಲೆಗೆ ಎಣ್ಣೆ ಹಾಕದೆ ಎಳ್ಳು ಸ್ವಲ್ಪ ಉಬ್ಬುವವರೆಗೆ ಹುರಿದಿಟ್ಟುಕೊಳ್ಳಬೇಕು. ನಂತರ ಅದು ತಣ್ಣಗಾಗುವವರೆಗೆ ಬಿಡಬೇಕು. ಎಳ್ಳು ತಣಿದ ಬಳಿಕ ಅದಕ್ಕೆ ಬೆಲ್ಲ ಹಾಗೂ ಏಲಕ್ಕಿಯನ್ನು ಹಾಕಿ ಮಿಕ್ಸಿ ಜಾರಿನಲ್ಲಿ ಪುಡಿಮಾಡಿಕೊಳ್ಳಿ. ಈ ವೇಳೆ ಅಗತ್ಯಕ್ಕೆ ಬೇಕಾದಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ. ಹೀಗೆ ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಹಾಲು ಮತ್ತು ಉಳಿದ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಮಿಕ್ಸ್ ಆದ ಬಳಿಕ ಕೆಲ ಹೊತ್ತು ಫ್ರಿಡ್ಜ್ ನಲ್ಲಿಡಿ. ಈಗ ತಂಪಾದ ಎಳ್ಳು ಜ್ಯೂಸ್ ಸವಿಯಿರಿ
ಇದನ್ನೂ ಓದಿ: 40ರ ನಂತರ ಹೃದಯದ ಆರೋಗ್ಯವನ್ನು ಹೇಗೆ ರಕ್ಷಿಸುವುದು? ಆಯುರ್ವೇದ ತಜ್ಞರು ಏನು ಸಲಹೆ ನೀಡುತ್ತಾರೆ?
ತುಳಸಿ ಬೀಜ ಜ್ಯೂಸ್
ಕಾಮ ಕಸ್ತೂರಿ ಅಥವಾ ತುಳಸಿ ಬೀಜ ಎಂದೇ ಜನಪ್ರಿಯವಾಗಿರುವ ಪದಾರ್ಥವು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತನ್ನ ಶಕ್ತಿಯುತ ಕಪ್ಪು ಬೀಜಗಳಿಂದ ಚಿಕಿತ್ಸೆ ನೀಡುತ್ತದೆ.ಅವುಗಳು ಸೌಮ್ಯವಾದ ತುಳಸಿ ಪರಿಮಳವನ್ನು ಹೊಂದಿದ್ದು, ಒಮೆಗಾ 3, ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ರೀತಿಯ ಪೋಷಕಾಂಶಗಳಿಂದ ಶ್ರೀಮಂತವಾಗಿದೆ.
ಮಾಡುವ ವಿಧಾನ: ತುಳಿಸಿ ಬೀಜವನ್ನು ನೇರವಾಗಿ ನೆಂಬೆರ್ ಹಣ್ಣಿನ ಜ್ಯೂಸ್ ಜೊತೆ ಕಲಸಿ, ಸ್ವಲ್ಪ ಸಮಯದಲ್ಲಿ ತುಳಸಿ ಬೀಜಗಳು ನೀರನ್ನು ಹೀರಿ ದಪ್ಪಗಾಗುತ್ತದೆ. ಇವು ನಿಮ್ಮ ದೇಹವನ್ನು ಹೈಡ್ರೇಟು ಮಾಡುತ್ತವೆ.