Groundnut: ನೆಲಗಡಲೆ – ಕಡಲೆ ಕಾಯಿ ಹೆಚ್ಚು ತಿಂದರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಎಚ್ಚರವಿರಲಿ!

More Consumption of groundnuts: ಅಡುಗೆ ಮನೆಯಲ್ಲಿ ಕಡಲೆಕಾಯಿ ಬೀಜ ಬಳಸದೆ ಬಹುತೇಕ ಯಾವುದೇ ಅಡುಗೆ ಪೂರ್ಣಗೊಳ್ಳುವುದಿಲ್ಲ. ತಿಂಡಿಗಳಿಂದ ಹಿಡಿದು ವಿವಿಧ ಭಕ್ಷ್ಯ, ಚಟ್ನಿಗಳವರೆಗೆ ಕಡಲೆಕಾಯಿ ಬೀಜ ಬಳಸಲಾಗುತ್ತದೆ.  ಬಡವರ ಬಾದಾಮಿ ಕಡಲೆಕಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

Groundnut: ನೆಲಗಡಲೆ - ಕಡಲೆ ಕಾಯಿ ಹೆಚ್ಚು ತಿಂದರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಎಚ್ಚರವಿರಲಿ!
ಕಡಲೆ ಕಾಯಿ ಹೆಚ್ಚು ತಿಂದರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಎದುರಾಗುತ್ತದೆ
Follow us
ಸಾಧು ಶ್ರೀನಾಥ್​
|

Updated on: Apr 08, 2023 | 6:06 AM

ಅಡುಗೆ ಮನೆಯಲ್ಲಿ ಕಡಲೆಕಾಯಿ ಬೀಜ ಬಳಸದೆ ಬಹುತೇಕ ಯಾವುದೇ ಅಡುಗೆ ಪೂರ್ಣಗೊಳ್ಳುವುದಿಲ್ಲ. ತಿಂಡಿಗಳಿಂದ ಹಿಡಿದು ವಿವಿಧ ಭಕ್ಷ್ಯಗಳು ಮತ್ತು ಚಟ್ನಿಗಳವರೆಗೆ ಕಡಲೆಕಾಯಿ ಬೀಜಗಳನ್ನು ಬಳಸಲಾಗುತ್ತದೆ. ಇವುಗಳನ್ನು ಬಡವರ ಬಾದಾಮಿ ಎಂದೂ ಕರೆಯಲಾಗುತ್ತದೆ. ಕಡಲೆಕಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಪೊಟ್ಯಾಸಿಯಂ, ಕಬ್ಬಿಣ, ಸತು, ವಿಟಮಿನ್-ಇ ಇದರಲ್ಲಿ ಸಮೃದ್ಧವಾಗಿದೆ. ಆದರೆ ಕಡಲೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದಲ್ಲ (Excessive consumption of groundnuts). ಅದರಲ್ಲೂ ಕೆಲವು ಆರೋಗ್ಯ (Health) ಸಮಸ್ಯೆಗಳಿಂದ ಬಳಲುತ್ತಿರುವವರು ಕಡಲೆಕಾಯಿಯನ್ನು ತಿನ್ನಲೇಬಾರದು. ಯಾವ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕಡಲೆಕಾಯಿಯಿಂದ ದೂರವಿರಬೇಕು ಎಂಬುದನ್ನು ತಿಳಿದುಕೊಳ್ಳೋಣ (Side Effects).

ಥೈರಾಯ್ಡ್ ಸಮಸ್ಯೆ: ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ ಕಡಲೆಕಾಯಿಯನ್ನು ಸೇವಿಸುವುದರಿಂದ ನಿಮ್ಮ thyroid stimulating hormone (TSH) ಮಟ್ಟ ಹೆಚ್ಚಬಹುದು. ಅದಕ್ಕಾಗಿಯೇ ನೀವು ಕಡಲೆಕಾಯಿಯನ್ನು ತಿನ್ನಬಾರದು. ನೀವು ಕಡಲೆಕಾಯಿಯನ್ನು ತಿನ್ನುತ್ತಿದ್ದರೆ, ಅವುಗಳನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಿ. ಅಲ್ಲದೆ, ಔಷಧಗಳನ್ನು ಸೇವಿಸುವಾಗ ಕಡಲೆಕಾಯಿಯನ್ನು ತೆಗೆದುಕೊಳ್ಳದಿರುವುದು ಉತ್ತಮ.

ಅಲರ್ಜಿ ಸಮಸ್ಯೆ: ಕಡಲೆಕಾಯಿಯಿಂದ ನಿಮಗೆ ಅಲರ್ಜಿ ಇದ್ದರೆ ಅದ ತಿನ್ನುವುದು ಒಳಿತಲ್ಲ. ಬೇಸಿಗೆಯಲ್ಲಿ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಏಕೆಂದರೆ ಇದು ಕೈ ಮತ್ತು ಕಾಲುಗಳಲ್ಲಿ ತುರಿಕೆ, ಬಾಯಿಯ ಊತ ಅಥವಾ ಚರ್ಮದ ಮೇಲೆ ದದ್ದುಗಳನ್ನು ಉಂಟುಮಾಡಬಹುದು.

ಲಿವರ್ ಸಮಸ್ಯೆ: ಯಕೃತ್ತಿನ ಸಮಸ್ಯೆ ಇರುವವರು ಕಡಲೆಕಾಯಿಯನ್ನು ಸೇವಿಸಬಹುದು. ಆದರೆ ಹೆಚ್ಚು ತಿನ್ನಬಾರದು. ಕಡಲೆಕಾಯಿ ವಾಸ್ತವವಾಗಿ ಕೆಲವು ಅಂಶಗಳನ್ನು ಒಳಗೊಂಡಿದೆ. ಇವು ಯಕೃತ್ತಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಯಕೃತ್ತಿನ ಸಮಸ್ಯೆ ಇರುವವರು ಅವುಗಳನ್ನು ತಪ್ಪಿಸಬೇಕು.

ಸಂಧಿವಾತ: ಸಂಧಿವಾತದಿಂದ ಬಳಲುತ್ತಿರುವವರು ಕಡಲೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಇದು ಲ್ಯಾಕ್ಟಿನ್​​ ಅನ್ನು ಒಳಗೊಂಡಿದೆ. ಇದು ನೋವನ್ನು ಹೆಚ್ಚಿಸುತ್ತದೆ.

Also Read:

ನೀವೂ ಅಲ್ಯೂಮಿನಿಯಂ ಹಾಳೆಯಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ಸೇವಿಸುತ್ತಿದ್ದೀರಾ? ಇದೆಷ್ಟು ಅಪಾಯಕಾರಿ ಗೊತ್ತಾ?

ನೀವು ಅಧಿಕ ತೂಕ ಹೊಂದಿದ್ದರೆ ಕಡಲೆಕಾಯಿ ಬೀಜಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಕಡಲೆಕಾಯಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಕಡಲೆಕಾಯಿಯಲ್ಲಿ ವಿವಿಧ ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಒಮೆಗಾ-3 ಇದ್ದು, ಇದನ್ನು ಅತಿಯಾಗಿ ಸೇವಿಸಿದರೆ ದೇಹ ತೂಕ ನಷ್ಟದ ಸಮಸ್ಯೆಗಳು ಉಂಟಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ