Ear Care: ಆರೋಗ್ಯಕರ ಕಿವಿಗಳಿಗಾಗಿ 4 ತಜ್ಞರ ಬೆಂಬಲಿತ ಆಯುರ್ವೇದ ಸಲಹೆಗಳು
ನಿಮ್ಮ ಕಿವಿಯನ್ನು ಹೇಗೆ ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಎಂಬುದನ್ನು ಚರ್ಚಿಸುವುದು ಬಹಳ ಮುಖ್ಯ ಏಕೆಂದರೆ ಶ್ರವಣ ನಷ್ಟವು ಹೆಚ್ಚು ಪ್ರಚಲಿತದಲ್ಲಿರುವ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ.
ಮಾನವನ ಶ್ರವಣ ಶಕ್ತಿಯು (Hearing Power) ಕಿವಿಗಳಲ್ಲಿ (Ears) ಸುಲಭವಾಗಿ ಸ್ಪಷ್ಟವಾಗಿ ಕಂಡುಬರುತ್ತದೆ. ನಿಮ್ಮ ಕಿವಿಗಳನ್ನು ಕಾಳಜಿ (Ear Care) ವಹಿಸಲು ಹಲವು ಸಲಹೆಗಳನ್ನು ನೀವು ಓದಿರಬಹುದು. ಶುದ್ಧೀಕರಣ (Cleansing) ಒಂದೆಡೆಯಾದರೆ, ಸೋಂಕು ತಡೆಗಟ್ಟುವಿಕೆ (Infection Prevention) ಮತ್ತು ಚಿಕಿತ್ಸೆ ಮತ್ತೊಂದು ಗಮನಹರಿಸುವ ವಿಷಯವಾಗಿದೆ. ಅನಗತ್ಯವಾದ ಶಬ್ದವನ್ನು ಕಡಿಮೆ ಮಾಡಲು ಪ್ರಯತ್ನ ಮಾಡುವುದು ಮತ್ತು ಸಂಭಾವ್ಯ ಶ್ರವಣ ದೋಷದ ಬಗ್ಗೆ ಗಮನಹರಿಸುವುದು ಸಹ ಸರಿಯಾದ ಕಿವಿ ಆರೈಕೆಯ ಭಾಗವಾಗಿದೆ. ಇಯರ್‌ಪ್ಲಗ್‌ಗಳನ್ನು ಬಳಸುವುದು, ವ್ಯಾಯಾಮ ಮಾಡುವುದು, ನಿರ್ದೇಶನದಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ಇತರ ಕಿವಿ-ಆರೋಗ್ಯಕರ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸುಲಭವಾಗಿ ಶ್ರವಣ ನಷ್ಟವನ್ನು ತಡೆಯಬಹುದು.
ಆಯುರ್ವೇದ ವೈದ್ಯರು ಮತ್ತು ಕ್ಷೇಮ ತರಬೇತುದಾರ ವರ ಯನಮಂದ್ರ ಅವರು, “ಆಧುನಿಕ ಜೀವನವು ಜೋರಾಗಿ ಮತ್ತು ಅತಿಯಾಗಿ ಪ್ರಚೋದಿಸುತ್ತದೆ. ನಮ್ಮ ಕಿವಿಗಳು ಒಂದು ನಿರ್ದಿಷ್ಟ ದಿನದಲ್ಲಿ ಬಹಳಷ್ಟು ಶಬ್ದಗಳನ್ನು ಪ್ರಕ್ರಿಯೆಗೊಳಿಸುತ್ತವೆ. ಅವು ನಮ್ಮ ಮನಸ್ಸಿಗೆ ಧ್ವನಿ ಶೋಧಕಗಳು ಮಾತ್ರವಲ್ಲದೆ ಸಮತೋಲನವನ್ನು ಕಾಪಾಡಿಕೊಳ್ಳುತ್ತವೆ” ಎಂದು ಇಂಡಿಯಾ ಟುಡೇ ವರದಿಯಲ್ಲಿ ಹೇಳಿದ್ದಾರೆ. ಆರೋಗ್ಯ ತಜ್ಞರು ನಿಮ್ಮ ಕಿವಿಯ ಆರೋಗ್ಯವನ್ನು ನೋಡಿಕೊಳ್ಳಲು ಆಯುರ್ವೇದ ಸಲಹೆಗಳು ಮತ್ತು ತಂತ್ರಗಳನ್ನು ಹಂಚಿಕೊಳ್ಳುತ್ತಾರೆ.
ನಿಮ್ಮ ಕಿವಿಯ ಆರೋಗ್ಯವನ್ನು ನೋಡಿಕೊಳ್ಳಲು 5 ಆಯುರ್ವೇದ ಸಲಹೆಗಳು
- ತಂಪಾದ ವಾತಾವರಣವಿದ್ದು, ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ತಲೆ ಮತ್ತು ಕಿವಿಗಳನ್ನು ಮುಚ್ಚಿಕೊಲ್ಲಿ. ತಂಪಾದ ಗಾಳಿಯು ನಿಮ್ಮ ಕಿವಿಯೊಳಗೆ ವಾತವನ್ನು ಉಲ್ಬಣಗೊಳಿಸಬಹುದು ಮತ್ತು ಅಸಮತೋಲನವನ್ನು ಉಂಟುಮಾಡಬಹುದು.
- ಇಯರ್‌ಬಡ್‌ಗಳು ಅಥವಾ ಏಆರ್ ಫೋನ್ಗಳು ಅನೇಕರಿಗೆ ಆಧುನಿಕ ಅವಶ್ಯಕತೆಯಾಗಿದೆ ಆದರೆ ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಶಾಶ್ವತ ಶ್ರವಣ ನಷ್ಟವನ್ನು ಉಂಟುಮಾಡಬಹುದು. ವಾಲ್ಯೂಮ್ ಅನ್ನು 60% ಕ್ಕಿಂತ ಕಡಿಮೆ ಮತ್ತು ಸಮಯವನ್ನು 60 ನಿಮಿಷಗಳ ಕೆಳಗೆ ಇರಿಸಿ.
- ಸರಿಯಾದ ಕಾಳಜಿ ಮತ್ತು ನೈರ್ಮಲ್ಯದೊಂದಿಗೆ ಕಿವಿಗಳನ್ನು ಸ್ವಚ್ಛವಾಗಿಡಿ. ಸ್ವಚ್ಛಗೊಳಿಸಲು ಒಂದು ಕ್ಲೀನ್ ಹತ್ತಿ ಬಟ್ಟೆಯನ್ನು ಬಳಸಿ.
- ಏರೋಪ್ಲೇನ್‌ನಲ್ಲಿ ಪ್ರಯಾಣಿಸುವಾಗ ಕಿವಿಗಳು ಸೂಕ್ಷ್ಮಯವಾಗಿರುತ್ತದೆ. ಆಕಳಿಕೆ ಅಥವಾ ಚೂಯಿಂಗ್ ಗಮ್ ಉತ್ತಮ ಕಿವಿ ಒತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಹೆಚ್ಚಿನ ಕಿವಿ ಸಮಸ್ಯೆಗಳನ್ನು ಉತ್ತಮ ಕಾಳಜಿಯೊಂದಿಗೆ ಸುಲಭವಾಗಿ ಪರಿಹರಿಸಬಹುದು. ಮಲಗುವ ಮುನ್ನ ಎಳ್ಳು ಎಣ್ಣೆಯ ಎರಡು ಹನಿಗಳನ್ನು ಬಳಸುವುದರಿಂದ ಕಿವಿ ಸುರಕ್ಷಿತವಾಗಿರುತ್ತದೆ.
ಇದನ್ನೂ ಓದಿ: ಮಧುಮೇಹದ ಮೂತ್ರಪಿಂಡ ಕಾಯಿಲೆಯ ಎಚ್ಚರಿಕೆ ಹಂತಗಳು
ನೀವು 18 ರಿಂದ 40 ವರ್ಷ ವಯಸ್ಸಿನವರಾಗಿದ್ದರೆ, ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ನಿಮ್ಮ ಶ್ರವಣವನ್ನು ಪರೀಕ್ಷಿಸಲುವಂತೆ ಅನೇಕ ಓಟೋಲರಿಂಗೋಲಜಿಸ್ಟ್‌ಗಳು ಸಲಹೆ ನೀಡುತ್ತಾರೆ. ನಿಮ್ಮ ವೈದ್ಯರು ಭೇಟಿ ನೀಡಿ ಶ್ರವಣ ನಷ್ಟಕ್ಕೆ ಚಿಕಿತ್ಸೆ ನೀಡುವ ಹಲವು ಆಯ್ಕೆಗಳನ್ನು ಹೆಚ್ಚು ವಿವರವಾಗಿ ಪರಿಶೀಲಿಸಬಹುದು ಮತ್ತು ಇದು ನಿಮ್ಮ ಆರೋಗ್ಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನಿಮಗೆ ಸಹಾಯ ಮಾಡಬಹುದು.
Published On - 8:00 am, Sat, 8 April 23