ಯುವತಿಯ ಮನ ಸೆಳೆಯಲು ಯುವಕ ಮಾಡಬೇಕಾದ್ದದ್ದು ಏನು? ಇಲ್ಲಿದೆ ಟಿಪ್ಸ್
ಯುವಕ ತಮ್ಮ ಯುವತಿಯೊಂದಿಗೆ ಮಾತನಾಡುವಾಗ, ಆಕೆಯ ಕಣ್ಣಲ್ಲಿ ಕಣ್ಣು ಇಟ್ಟು ಮಾತನಾಡಬೇಕು. ಯುವಕನ ಡ್ರೆಸ್ಸಿಂಗ್ ಶೈಲಿಯು ಯುವತಿ ಗಮನಿಸುವ ಮುಖ್ಯ ವಿಷಯಗಳಲ್ಲಿ ಒಂದಾಗಿದೆ.
ಯೌವನ 18 ರಿಂದ 25 ವರ್ಷದ ವಯಸ್ಸಿನ ಮನಸ್ಸನ್ನು ಮರ್ಕಟದ ಮನಸ್ಸು ಅನ್ನುತ್ತಾರೆ. ಈ ವಯಸ್ಸಿನಲ್ಲಿ ಎಲ್ಲವುದಕ್ಕೂ ಬಹು ಬೇಗ ಆಕರ್ಷಣೆಗೊಳ್ಳುತ್ತವೆ. ಅದು ವಸ್ತುಗಳಾಗಿರಬಹುದು ಅಥವಾ ವ್ಯಕ್ತಿಗಳಾಗಿರುವುದು. ಈ ಹರೆಯದ ವಯಸ್ಸಿನಲ್ಲಿ ಹುಡುಗ, ಸುಂದರವಾದ ಹುಡುಗಿಯನ್ನು ಕಂಡು ಆಕರ್ಷಣೆಗೊಳ್ಳುತ್ತಾನೆ. ಹಾಗೇ ಹುಡುಗಿ (Girl), ಸುಂದರವಾಗಿರವ ಹುಡುಗ (Boy)ನನ್ನು ಕಂಡು ಆಕರ್ಷಣೆಗೊಳ್ಳುವುದು ಸಹಜ. ಈ ಆಕರ್ಷಣೆಯಿಂದ ಸ್ನೇಹ ಬೆಳದು, ಸ್ನೇಹ ಪ್ರೀತಿಗು ತಿರುಗಬಹುದು.
ಇಂತಹ ವಯಸ್ಸಿನಲ್ಲಿ ಯಾವುದೇ ಒಬ್ಬ ಹುಡುಗನಾದರೂ ತಾನು ಸುಂದರವಾಗಿ ಕಾಣಲು ಸಾಕಷ್ಟು ಹರಸಾಹಸ ಪಡುವುದಂತು ಸತ್ಯ. ಹುಡುಗ ತನ್ನ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುತ್ತಾನೆ. ಇದಕ್ಕೆ ಅವನು ಪಡುವ ಪಾಡು ಅಷ್ಟಿಷ್ಟಲ್ಲ. ಹೀಗಿರುವಾಗ ಯುವಕ, ಯುವತಿಯನ್ನ ತನ್ನತ್ತ ಆಕರ್ಷಿಸಿಕೊಳ್ಳಲು ಏನು ಮಾಡಬೇಕು ಕೆಲವೊಂದು ಮಾಹಿತಿ ಇಲ್ಲಿದೆ.
ಇದನ್ನೂ ಓದಿ
- ಯುವಕ ತಮ್ಮ ಯುವತಿಯೊಂದಿಗೆ ಮಾತನಾಡುವಾಗ, ಆಕೆಯ ಕಣ್ಣಲ್ಲಿ ಕಣ್ಣು ಇಟ್ಟು ಮಾತನಾಡಬೇಕು. ಇದರಿಂದ ಆಕೆ ಆಕರ್ಷಿತಳಾಗುವ ಸಾಧ್ಯತೆಗಳಿರುತ್ತವೆ. ಇದು ಇಬ್ಬರ ನುಡುವೆ ಉತ್ತಮ ಬಾಂಧವ್ಯ ಮತ್ತು ಇಬ್ಬರ ಮನದಲ್ಲಿ ಪ್ರೀತಿ ಅರಳಲು ಸಹಾಯವಾಗಬಹುದು. ವೈಜ್ಞಾನಿಕವಾಗಿಯೂ ಕಣ್ಣಿನ ಸಂಪರ್ಕವು ಇಬ್ಬರ ನಡುವಿನ ಪ್ರೀತಿಯ ಇನ್ನಷ್ಟು ವೃದ್ದಿಸುತ್ತದೆ ಎಂದು ಸಾಬೀತಾಗಿದೆ.
- ಯುವಕ, ಯುವತಿಯನ್ನು ತನ್ನತ್ತ ಆಕರ್ಷಿಸಲು ಆಕೆಯೊಂದಿಗೆ ಹೆಚ್ಚು ಸಮಯ ಕಳೆಯದೆ ಕಡಿಮೆ ಸಮಯ ಕಳಿಬೇಕು. ಮತ್ತು ಆಕೆಯೊಂದಿಗೆ ಹೆಚ್ಚಿಗೆ ಮಾತನಾಡದೆ ಇರುವುದು. ಇದರಿಂದ ಯುವತಿ ನಿಮ್ಮತ್ತ ಅಕರ್ಷಣೆಗೊಳ್ಳುತ್ತಾರೆ. ಯುವತಿಯತ್ತ ಕಡಿಮೆ ಗಮನ ಹರಿಸಲುವುದು, ಅವರಿಗೆ ನೀವು ಅಲ್ಪ ಸಮಯವನ್ನು ನೀಡುವುದು ನಿಮ್ಮತ್ತ ಆಕರ್ಷಣೆಗೊಳ್ಳಲು ಒಂದು ಮಾರ್ಗವಾಗಿದೆ.
- ಯುವಕನ ಡ್ರೆಸ್ಸಿಂಗ್ ಶೈಲಿಯು ಯುವತಿ ಗಮನಿಸುವ ಮುಖ್ಯ ವಿಷಯಗಳಲ್ಲಿ ಒಂದಾಗಿದೆ. ಯುವಕ ಔಪಚಾರಿಕ ಬಟ್ಟೆಗಳನ್ನು ಧರಿಸಿದರೆ, ಅದು ತಕ್ಷಣವೇ ಯುವತಿ ನಿಮ್ಮತ್ತ ಆಕರ್ಷಣೆಗೊಳ್ಳುವಂತೆ ಮಾಡುತ್ತದೆ. ಹಾಗೇ ಯುವಕ ಸಾಂದರ್ಭಿಕವಾಗಿ ಉಡುಗೆ ಧರಿಸಿದರೆ ಅದು ಅವರಿಗೆ ತಮಾಷೆಯ ಭಾಗವಾಗಬಹುದು. ಯುವಕ ಇಂತಹ ಸೂಕ್ಷ್ಮವಾದ ವಿಷಯಗಳನ್ನು ಗಮನಿಸಿ, ಅವರಿಗೆ ಇಷ್ಟವಾಗುವಂತಹ ಉಡುಗೆ-ತೊಡುಗೆಗಳನ್ನು ಧರಿಸಿದರೆ ಹೆಚ್ಚು ನಿಮ್ಮತ್ತ ಆಕರ್ಷಣೆಗೊಳ್ಳುತ್ತಾರೆ.
- ಯುವಕರ ಹಾಸ್ಯಗಳನ್ನು ಯುವತಿಯರು ಹೆಚ್ಚು ಇಷ್ಟಪಡುತ್ತಾರೆ. ಇದು ಹಾಸ್ಯದ ಪ್ರಜ್ಞೆಯನ್ನು ಮತ್ತು ಲಘು ಹೃದಯವನ್ನು ಪ್ರದರ್ಶಿಸುತ್ತದೆ. ಯುವತಿಯರು ತಮ್ಮನ್ನು ಹೆಚ್ಚು ನಗಿಸುವವರನ್ನು ಪ್ರೀತಿಸುತ್ತಾರೆ!ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Tue, 17 May 22