ಸಂಬಂಧ ಕನ್ನಡಿಯಂತೆ, ಒಡೆಯದಂತೆ ಉಳಿಸಿಕೊಳ್ಳಲು ಇಲ್ಲಿವೆ ಸೂಕ್ಷ್ಮ ಸಲಹೆಗಳು

| Updated By: ನಯನಾ ರಾಜೀವ್

Updated on: May 09, 2022 | 6:55 PM

ಸಂಬಂಧ ಗಾಜಿನ ಕನ್ನಡಿಯಂತೆ ಅದನ್ನು ಒಡೆಯದ ಹಾಗೆ ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಅದಕ್ಕಿಲ್ಲಿದೆ ಕೆಲವು ಸೂತ್ರಗಳು. ಆದರೆ ವಿಜ್ಞಾನ ಅದಕ್ಕೂ ಮಿಗಿಲಾಗಿ ಈ ವಿಷಯವಾಗಿ ಹೆಚ್ಚಿನದನ್ನು ತಿಳಿಸುತ್ತದೆ. ಅವುಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹಾಗಾಗಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಸಂಬಂಧ ಕನ್ನಡಿಯಂತೆ, ಒಡೆಯದಂತೆ ಉಳಿಸಿಕೊಳ್ಳಲು ಇಲ್ಲಿವೆ ಸೂಕ್ಷ್ಮ ಸಲಹೆಗಳು
Relationship
Follow us on

ಸ್ನೇಹವಾಗಿರಲಿ, ಪ್ರೀತಿಯೇ ಆಗಿರಲಿ ಒಂದು ಸಂಬಂಧ(Relationship )ವನ್ನು ಆರಂಭಿಸುವುದು ಸುಲಭ ಆದರೆ ದೀರ್ಘಕಾಲದವರೆಗೆ ಉಳಿಸಿಕೊಳ್ಳುವುದು ನೀವಂದುಕೊಂಡಷ್ಟು ಸುಲಭವಲ್ಲ. ಒಂದು ಸಂಬಂಧ ಉತ್ತಮವಾಗಿರಬೇಕಿದ್ದರೆ ಅದರಲ್ಲಿ ಹೊಂದಾಣಿಕೆಗೆ ಜಾಗ ಇರಬೇಕು ಹಾಗೆಯೇ ತ್ಯಾಗಕ್ಕೂ ಸಿದ್ಧವಿರಬೇಕು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು, ಕೇವಲ ಸಂತಸದ ಸಮಯದಲ್ಲಿ ಮಾತ್ರವಲ್ಲ ಕಷ್ಟದ ಸಮಯದಲ್ಲೂ ಅವರ ಜತೆ ನಿಲ್ಲಬೇಕು. ರಕ್ಷಣೆ ನೀಡಬೇಕು, ಅತಿಯಾದ ಪ್ರೀತಿ ತೋರಿಸುವುದು ಹೀಗೆ ಇವೆಲ್ಲವೂ ಒಂದು ಉತ್ತಮ ಸಂಬಂಧದ ಸೂತ್ರಗಳು.

ಸಂಬಂಧ ಗಾಜಿನ ಕನ್ನಡಿಯಂತೆ ಅದನ್ನು ಒಡೆಯದ ಹಾಗೆ ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಅದಕ್ಕಿಲ್ಲಿದೆ ಕೆಲವು ಸೂತ್ರಗಳು. ಆದರೆ ವಿಜ್ಞಾನ ಅದಕ್ಕೂ ಮಿಗಿಲಾಗಿ ಈ ವಿಷಯವಾಗಿ ಹೆಚ್ಚಿನದನ್ನು ತಿಳಿಸುತ್ತದೆ. ಅವುಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹಾಗಾಗಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

  1. ಸಂಬಂಧದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಿ: ಯಾರು ಇತರರ ಭಾವನೆಗಳಿಗೆ ಗೌರವ ಕೊಡುವುದಿಲ್ಲವೋ ಅಂಥವರು ಪ್ರೀತಿಯಿಂದ ಸಂಬಂಧಗಳನ್ನು ಅರಿಯುವುದು ಕಷ್ಟವಾಗುತ್ತದೆ, ಜೀವನದಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಗಳಿಗೆ ಒಳಗಾದವರು ಜೀವನದ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ ಹಾಗೆಯೇ ಸಂಬಂಧಗಳ ಮಹತ್ವವನ್ನು ಅವರು ಅರಿತಿರುತ್ತಾರೆ.
  2. ಅತಿಯಾದ ವಾದ ಬೇಡ: ಗಾಗ ವಾದ ಮಾಡಿ: ಕೋಪ ಮಾಡಿಕೊಂಡು ಮನಸ್ಸಿನಲ್ಲಿಯೇ ಇಟ್ಟುಕೊಂಡಿರಬೇಡಿ, ಅವರ ಜತೆ ವಾದ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ, ಆದರೆ ಈ ವಾದಗಳು ಹೆಚ್ಚಾಗಿ ಸಂಬಂಧಗಳನ್ನು ಹಾಳು ಮಾಡುತ್ತದೆ ಎಂದಾದರೆ ಮೌನವಾಗಿರಿ.ಸಂಬಂಧಗಳಲ್ಲಿ ವಾದ ಮಾಡುವುದು ಇದ್ದೇ ಇರುತ್ತದೆ ಹಾಗಿದ್ದಾಗ ಮಾತ್ರ ಅದು ಒಳ್ಳೆಯ ಸಂಬಂಧವಾಗಿರುತ್ತದೆ. ಇಲ್ಲದಿದ್ದರೆ ಅಲ್ಲಿ ಹೇಳುವುದು, ಕೇಳುವುದು ಇಷ್ಟೇ ಇರುತ್ತದೆ. ಅವರ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶವೇ ಇರುವುದಿಲ್ಲ.
  3.  ಇಬ್ಬರ ಅಭಿರುಚಿಯೂ ಬೇರೆ ಬೇರೆ: ಒಬ್ಬರಿಗೆ ನೃತ್ಯ, ಇನ್ನೊಬ್ಬರಿಗೆ ಸಂಗೀತ, ಕ್ರೀಡೆ ಹೀಗೆ ಹತ್ತು ಹಲವು ವಿಷಯಗಳಲ್ಲಿ ಅವರವರ ಅಭಿರುಚಿ ಭಿನ್ನವಾಗಿರುತ್ತದೆ. ಆದರೆ ಯಾವುದೇ ಕಾರಕ್ಕೂ ಬೇರೆಯವರ ಅಭಿರುಚಿಯ ವಿರುದ್ಧ ಮಾತನಾಡಬೇಡಿ ಗೌರವಿಸಿ.
  4. ಪ್ರೀತಿ ಮತ್ತು ಕೆಲಸದಲ್ಲಿ ಧೈರ್ಯವಾಗಿರಿ: ಜೀವನ ಮತ್ತು ಪ್ರೀತಿಯಲ್ಲಿ ಗೆಲ್ಲಲುಬೇಕಾದ ಒಂದು ಗುಣ. ಇದಕ್ಕೆ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ಇರುತ್ತದೆ. ಪ್ರೀತಿಯಲ್ಲಿ ಮತ್ತು ಕೆಲಸದಲ್ಲಿ ಸೋಲುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಅದನ್ನು ಮೀರಿ ಬೆಳೆದಾಗ ಮಾತ್ರ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಾಧ್ಯ.ಲವ್ ಮಾಡಿ ಮದುವೆಯಾದರೆ ಒಪ್ಪಂದಗಳು ಇರುವುದಿಲ್ಲ. ನೋಡಿದ ತಕ್ಷಣ ಪ್ರೀತಿ ಹುಟ್ಟುತ್ತದೆ ಆ ಪ್ರೀತಿ ನಿಜವಾದುದ್ದೋ, ಇಲ್ಲವೋ ಎಂದು ಅರಿಯುವಷ್ಟು ಸಮಯವೂ ಇರುವುದಿಲ್ಲ. ಆದರೆ ಅದು ನಿಜವಾದ ಪ್ರೀತಿಯಾಗಿರದೇ ಆಕರ್ಷಣೆಯೂ ಆಗಿರಬಹುದು. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಕೂಡ ಮುಖ್ಯ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ