Ugadi Trip : ಬೆಂಗಳೂರಿಗರೇ, ಯುಗಾದಿ ಹಬ್ಬಕ್ಕೆ ಈ ಸ್ಥಳಗಳಲ್ಲಿ ಟ್ರಿಪ್ ಹೋದರೆ ಮಜಾನೇ ಬೇರೆ!

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 03, 2024 | 1:47 PM

ಯುಗಾದಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿಯಿವೆ. ಯುಗಾದಿ ಎನ್ನುವ ಹಿಂದೂಗಳಿಗೆ ಹೊಸ ವರ್ಷ ಆರಂಭ. ಆದರೆ ಈ ಹಬ್ಬಗಳು ಸಂತೋಷವನ್ನು ಮಾತ್ರ ನೀಡುವುದಿಲ್ಲ, ರಜಾದಿನಗಳನ್ನು ಸಹ ತರುತ್ತವೆ. ಹೀಗಾಗಿ ಒಂದೆರಡು ದಿನಗಳ ಕಾಲ ಪ್ರವಾಸಕ್ಕೆ ಯೋಜನೆ ರೂಪಿಸಿಕೊಂಡು ಹಬ್ಬದ ಸಂಭ್ರಮದ ನಡುವೆ ಈ ತಾಣಗಳಿಗೆ ಭೇಟಿ ನೀಡುವುದು ಉತ್ತಮ. ನೀವೇನಾದರೂ ಬೆಂಗಳೂರಿನಲ್ಲಿ ನೆಲೆಸಿದ್ದರೆ ಈ ಸ್ಥಳಗಳನ್ನು ಆಯ್ಕೆ ಮಾಡಿ ಒಂದೆರಡು ದಿನಗಳ ಟ್ರಿಪ್ ಪ್ಲಾನ್ ಮಾಡಿ ಹೊಸ ವರ್ಷವನ್ನು ಎಂಜಾಯ್ ಮಾಡಬಹುದು.

Ugadi Trip : ಬೆಂಗಳೂರಿಗರೇ, ಯುಗಾದಿ ಹಬ್ಬಕ್ಕೆ ಈ ಸ್ಥಳಗಳಲ್ಲಿ ಟ್ರಿಪ್ ಹೋದರೆ ಮಜಾನೇ ಬೇರೆ!
Follow us on

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಮರಳಿ ಬರುತಿದೆ ಎಂಬ ಹಾಡಿನ ಸಾಲಿನಂತೆ ಮತ್ತೆ ಯುಗಾದಿಯು ಮರಳಿ ಬರುತ್ತಿದೆ. ಈ ಬಾರಿಯ ಯುಗಾದಿ ಹಬ್ಬವನ್ನು ಏಪ್ರಿಲ್ 8 ರಂದು ಆಚರಿಸಲಾಗುತ್ತಿದೆ. ಯುಗಾದಿವು ಹಬ್ಬವಾಗದೇ ಹಿಂದೂಗಳಿಗೆ ಹೊಸ ವರ್ಷದ ಮೊದಲ ದಿನವಾಗಿದೆ. ಈ ಹಬ್ಬದ ಗುಂಗಿನ ನಡುವೆ ಟ್ರಿಪ್ ಪ್ಲಾನ್ ಮಾಡಿದರೆ ಹಬ್ಬದ ರಂಗು ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಈ ಸ್ಥಳಗಳಿಗೆ ಭೇಟಿ ನೀಡಿದರೆ ಹಬ್ಬದ ಸಂಭ್ರಮದ ನಡುವೆ ಮನಸ್ಸು ನಿರಾಳವಾಗುತ್ತದೆ

ಬಿಆರ್ ಹಿಲ್ಸ್

ಬೆಂಗಳೂರಿನಿಂದ 185 ಕಿಮೀ ದೂರವಿರುವ ಬಿಆರ್ ಹಿಲ್ಸ್ ಅಥವಾ ಬಿಳಿಗಿರಿರಂಗನ ಬೆಟ್ಟವು ಜನಪ್ರಿಯಪ್ರವಾಸಿ ತಾಣಗಳಲ್ಲಿ ಒಂದು. ಬಿಆರ್ ಹಿಲ್ಸ್‌ನ ಸುಂದರ ಮತ್ತು ಪ್ರಶಾಂತ ದೃಶ್ಯಗಳು ಮನಸ್ಸಿಗೆ ಖುಷಿ ನೀಡುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಈ ಸ್ಥಳಕ್ಕೆ ಭೇಟಿ ನೀಡಿದರೆ ಆಹ್ಲಾದಕರ ಅನುಭವವನ್ನು ಪಡೆಯಬಹುದು.

ನಂದಿ ಬೆಟ್ಟ

ಬೆಂಗಳೂರಿಗೆ ಸಮೀಪವಿರುವ ನಂದಿ ಬೆಟ್ಟವು ಮಾಯನಗರಿಯಿಂದ 62 ಕಿಮೀ ದೂರದಲ್ಲಿದೆ. ಸುತ್ತಮುತ್ತಲಿನ ಬೆಟ್ಟಗಳ ರಮಣೀಯ ನೋಟಗಳು ಮತ್ತು ಬೆಟ್ಟದ ಸುತ್ತಲೂ ಮೋಡಗಳು ಬಾನಂಗಳದಲ್ಲಿ ಚಿತ್ತಾರ ಬರೆದಂತೆ ಕಾಣುತ್ತದೆ. ಮುಂಜಾನೆಯ ವೇಳೆ ನಂದಿ ಬೆಟ್ಟಕ್ಕೆ ಹೋದರೆ ಬೆಟ್ಟಗಳ ನಡುವೆ ತಂಪಾದ ವಾತಾವರಣಕ್ಕೆ ಮೈಯೊಡ್ಡಿ ನಿಂತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು.

ಮೈಸೂರು

ಬೆಂಗಳೂರಿನಿಂದ 146 ಕಿಮೀ ದೂರದಲ್ಲಿರುವ ಈ ಮೈಸೂರು ಟ್ರಿಪ್ ಗೆ ಬೆಸ್ಟ್ ಸ್ಥಳ ಆಗಿದೆ. ಪ್ರವಾಸಿಗರಿಗಾಗಿಯೇ ಮೈಸೂರಿನಲ್ಲಿ ಹಲವಾರು ಪ್ರೇಕ್ಷಣಿಯ ಸ್ಥಳಗಳಿವೆ. ಹಬ್ಬದ ದಿನಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದರೆ ಸಮಯವಂತೂ ಖಂಡಿತ ವ್ಯರ್ಥವಾಗುವುದಿಲ್ಲ.

ಕುಂತಿ ಬೆಟ್ಟ

ಪಾಂಡವಪುರದ ಕುಂತಿ ಬೆಟ್ಟ ರಾತ್ರಿ ಚಾರಣಕ್ಕೆ ಹೆಸರುವಾಸಿಯಾಗಿರುವ ಪ್ರವಾಸಿ ತಾಣ ಎನ್ನಬಹುದು ಬೆಂಗಳೂರಿನಿಂದ 126 ಕಿಮೀ ದೂರವಿರುವ ಈ ಸ್ಥಳವು ಭೇಟಿ ನೀಡಿ ರಾತ್ರಿ ಚಾರಣ ಮಾಡಿದರೆ ಅದ್ಭುತ ಆನಂದವನ್ನು ಪಡೆಯಬಹುದು. ಅದಲ್ಲದೇ ಇಲ್ಲಿರುವ ಸುತ್ತಮುತ್ತಲಿರುವ ಸ್ಥಳಗಳಿಗೆ ಭೇಟಿ ನೀಡಿ ಸಣ್ಣ ಪ್ರವಾಸವನ್ನು ಮತ್ತಷ್ಟು ಆನಂದಿಸಬಹುದು.

ಇದನ್ನೂ ಓದಿ: ಕೈ ಕಾಲುಗಳು ಮರಗಟ್ಟಿದಂತಹ ಅನುಭವವಾಗುತ್ತಿದೆಯೇ, ಟೆನ್ಶನ್ ಬೇಡ ಮನೆಯಲ್ಲೇ ಇದೆ ಔಷಧಿ

ಶ್ರೀರಂಗಪಟ್ಟಣ

ಬೆಂಗಳೂರಿನಿಂದ 125 ಕಿಮೀ ದೂರವಿರುವ ಶ್ರೀರಂಗಪಟ್ಟಣವು ಕಾವೇರಿ ನದಿಯ ದಡದಲ್ಲಿದೆ. ಮೈಸೂರಿನ ಸಮೀಪದಲ್ಲಿರುವ ಜನಪ್ರಿಯ ಐತಿಹಾಸಿಕ ಪಟ್ಟಣವಾಗಿದೆ. ಅದಲ್ಲದೇ ಶ್ರೀರಂಗ ಪಟ್ಟಣದಲ್ಲಿ ರಂಗನಾಥಸ್ವಾಮಿ ದೇವಸ್ಥಾನವು ಪ್ರಸಿದ್ಧವಾಗಿದ್ದು, ಇಲ್ಲಿಗೆ ಭೇಟಿ ನೀಡಿದರೆ ಸುತ್ತಲಿನ ಇನ್ನಷ್ಟು ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಸಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ