Home Remedies: ವಿಪರೀತ ಗಂಟಲು ಕೆರೆತವೇ, ಈ ಪದಾರ್ಥ ಸೇವಿಸಿದರೆ ನೋವೆಲ್ಲವು ಮಾಯಾ!
ಉಪ್ಪಿನಕಾಯಿಯ ರಸವು ಗಂಟಲಿನ ಕೆರೆತಕ್ಕೆ ಒಂದು ವಿಲಕ್ಷಣ ಪರಿಹಾರವಾಗಿದೆಯಂತೆ. ಉಪ್ಪಿನಕಾಯಿಯನ್ನು ತಿನ್ನುವುದು ಮತ್ತು ಅದರ ಜ್ಯೂಸ್ ಕುಡಿಯುವುದರಿಂದ ಈ ನೋವು ಮಾಯಾವಾಗುತ್ತದೆ. ಈ ಉಪ್ಪಿನ ಕಾಯಿಯ ರಸ ಉರಿಯೂತ ಗುಣಲಕ್ಷಣಗಳನ್ನು ಹೊಂದಿದೆ ಎಂದಿದ್ದಾರೆ ತಜ್ಞರು.
ಋತುವಿನಲ್ಲಿಯಾಗುವ ಬದಲಾವಣೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅದರಲ್ಲಿ ಈ ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆಯಲ್ಲಿ ಜ್ವರ, ಶೀತ, ನೆಗಡಿ ಹಾಗೂ ಗಂಟಲು ಕೆರೆತದಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಿನ ಮೂಲಕ ಪರಿಹಾರ ಕಂಡುಕೊಳ್ಳುವವರೇ ಹೆಚ್ಚು. ಈ ಗಂಟಲು ಕೆರೆತ ಸಮಸ್ಯೆಯು ಕಾಡಿದಾಗ ತಿನ್ನುವುದಕ್ಕೆ, ಮಾತನಾಡುವುದಕ್ಕೂ ಕಷ್ಟ ಪಡಬೇಕಾಗುತ್ತದೆ. ಈ ವೇಳೆಯಲ್ಲಿ ಶುಂಠಿ ಚಹಾ, ತುಳಸಿ ಚಹಾ ಹೀಗೆ ನಾನಾ ಮನೆ ಮದ್ದಿನ ಮೂಲಕ ಪರಿಹಾರ ಕಂಡುಕೊಳ್ಳಬಹುದಾದರೂ ವೈದ್ಯರ ಪ್ರಕಾರ, ಉಪ್ಪಿನಕಾಯಿ ರಸವು ಅತ್ಯದ್ಭುತವಾದ ಮನೆ ಮದ್ದಾಗಿದೆ ಎಂದಿದ್ದಾರೆ ವೈದ್ಯರು.
ಉಪ್ಪಿನಕಾಯಿ ರಸವು ಗಂಟಲಿನ ಕೆರೆತಕ್ಕೆ ಹೇಗೆ ಚಿಕಿತ್ಸೆ ನೀಡುತ್ತದೆ?
ಗಂಟಲಿನ ಕೆರೆತಕ್ಕೆ ಉಪ್ಪಿನಕಾಯಿ ನೀರಿನಿಂದ ಬಾಯಿ ಮುಕ್ಕಳಿಸುವುದು ಉತ್ತಮ ಮಾರ್ಗವಾಗಿದೆ. ತಜ್ಞರ ಪ್ರಕಾರ, ಉಪ್ಪಿನಕಾಯಿಯ ರಸವು ನೋಯುತ್ತಿರುವ ಗಂಟಲು ನೋವಿಗೆ ಪರಿಹಾರವಾಗಿದೆ. ಇದರಲ್ಲಿರುವ ಉರಿಯೂತ- ಬಸ್ಟಿಂಗ್ ಗುಣಲಕ್ಷಣಗಳು ಈ ಸಮಸ್ಯೆಯನ್ನು ನಿವಾರಿಸುತ್ತದೆ. ಉಪ್ಪು ಅಥವಾ ಸಕ್ಕರೆಯಂತಹ ಅಂಗಾಂಶಗಳಲ್ಲಿನ ದ್ರವಗಳಿಗಿಂತ ಈ ಉಪ್ಪಿನ ಕಾಯಿಯ ರಸವು ಬಹಳ ವೇಗವಾಗಿ ಉರಿಯೂತವನ್ನು ತಗ್ಗಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: ಹಗಲಿನಲ್ಲಿ ಮಾಡುವ ಸಣ್ಣ ನಿದ್ರೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?
ಉಪ್ಪಿನಕಾಯಿ ಜ್ಯೂಸ್ ಇಲ್ಲದೆ ಹೋದರೆ , ಉಪ್ಪುನೀರಿನ ಗಾರ್ಗ್ ಕೂಡ ಬಳಸಬಹುದು. ಇದನ್ನು ಬಳಸುವುದರಿಂದ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ ಈ ಚಿಕಿತ್ಸೆಯು ಎಲ್ಲರಿಗೂ ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಆದರೆ ಉಪ್ಪು-ನಿರ್ಬಂಧಿತ ಆಹಾರದಲ್ಲಿರುವ ಜನರು ಸಬ್ಬಸಿಗೆ ಉಪ್ಪಿನಕಾಯಿಯನ್ನು ಬಳಸಬಾರದು. ಇದರಲ್ಲಿ ಉಪ್ಪಿನ ಪ್ರಮಾಣವು ಹೇರಳವಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ