ವರ್ಕ್​ ಫ್ರಂ ಹೋಮ್​ನಿಂದ ಮನಸ್ಸು ಭಾರವೆನಿಸಿರಬಹುದು! ಅನಗತ್ಯ ಚಿಂತೆ ಹೋಗಲಾಡಿಸಲು ಇಲ್ಲಿದೆ ಸಲಹೆಗಳು

| Updated By: shruti hegde

Updated on: Jun 19, 2021 | 7:28 AM

ಕೆಲಸದಲ್ಲಿ ಕಾನ್ಫರೆನ್ಸ್​ ಕರೆಗಳು, ಮೀಟಿಂಗ್​ಗಳು ಇರಬಹುದು. ಹೀಗಿರುವಾಗ ಕುಳಿತಲ್ಲಿಯೇ ದೂರವಾಣಿ ಕರೆಯಲ್ಲಿ ಮಾತನಾಡುವುದರ ಬದಲಾಗಿ ಓಡಾಡುತ್ತಾ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ.

ವರ್ಕ್​ ಫ್ರಂ ಹೋಮ್​ನಿಂದ ಮನಸ್ಸು ಭಾರವೆನಿಸಿರಬಹುದು! ಅನಗತ್ಯ ಚಿಂತೆ ಹೋಗಲಾಡಿಸಲು ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
Follow us on

ಕೊವಿಡ್​-19 ಸಾಂಕ್ರಾಮಿಕ ಖಾಯಿಲೆಯ ನಿಯಂತ್ರಣಕ್ಕಾಗಿ ಅದೆಷ್ಟೋ ಕ್ರಮಗಳನ್ನು ಜಾರಿಗೆ ತರಲಾಯಿತು. ಜನರೆಲ್ಲಾ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬೇಕಾಯಿತು. ಹೀಗಿರುವಾಗ ಮನೆಯಿಂದ ಹೊರಬೀಳದೇ ಮನೆಯಲ್ಲಿ ಕೆಲಸ ಮಾಡುವುದು ಆರಾಮದಾಯಕ ಅನಿಸುತ್ತಿದೆಯೇ? ಅಧ್ಯಯನದ ಪ್ರಕಾರ ಮನೆಯಲ್ಲಿ ಕೆಲಸ ಮಾಡುವುದು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವುದು ಒತ್ತಡ ಮತ್ತು ಆತಂಕವನ್ನು ಹೆಚ್ಚಿಸಿದೆ. 

ಸಾರ್ವಜನಿಕ ಸ್ಥಳಗಳಾದ ಕಡಲ ತೀರಗಳು, ಜಿಮ್​ಗಳು, ಉದ್ಯಾನವನಗಳನ್ನು ಮುಚ್ಚಿರುವುದು ಹಾಗೆಯೇ ವಾಕಿಂಗ್​ ಅಥವಾ ಸೈಕ್ಲಿಂಗ್​ ಇತರ ಹೊರಾಂಗಣ ಚಟುವಟಿಕೆಳು ಇಲ್ಲದಿರುವುದು ಜನರ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಿರುವಾಗ ಮನೆಯಲ್ಲಿಯೇ ಇರುವ ಸಮಯವನ್ನು ವ್ಯರ್ಥ ಮಾಡದೇ ನಿಮ್ಮ ಆರೋಗ್ಯದ ಸುಧಾರಣೆಗೆ ಮಾಡುವ ಯೋಗ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳಿ.

ನಿಮ್ಮ ದಿನನಿತ್ಯದ ಕೆಲಸವನ್ನು ಪ್ರಾರಂಭಿಸುವ ಮೊದಲು ಪ್ರಾಣಾಯಾಮ, ಯೋಗಗಳನ್ನು ಅಭ್ಯಾಸದಲ್ಲಿಟ್ಟುಕೊಳ್ಳಿ. ಅನುಲೋಮ ವಿಲೋಮ ಪ್ರಾಣಾಯಾಮವನ್ನು ಮಾಡಿ. ಇದರಿಂದ ದೇಹವು ಸಡಿಲಗೊಳ್ಳುತ್ತದೆ.

ಕೆಲಸದಲ್ಲಿ ಕಾನ್ಫರೆನ್ಸ್​ ಕರೆಗಳು, ಮೀಟಿಂಗ್​ಗಳು ಇರಬಹುದು. ಹೀಗಿರುವಾಗ ಕುಳಿತಲ್ಲಿಯೇ ದೂರವಾಣಿ ಕರೆಯಲ್ಲಿ ಮಾತನಾಡುವುದರ ಬದಲಾಗಿ ಓಡಾಡುತ್ತಾ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಸ್ನಾಯುಗಳು ಸಡಿಗೊಳ್ಳುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ದಿನಪೂರ್ತಿ ಲ್ಯಾಪ್​ಟಾಪ್ ಅಥವಾ ಕಂಪ್ಯೂಟರ್​ ನೋಡುತ್ತಿರುವದರಿಂದ ಕಣ್ಣು ಉರಿ ಬರಬಹುದು. ಕಣ್ಣಿಗೆ ಚೂರಾದರೂ ವಿಶ್ರಾಂತಿ ನೀಡಲೇ ಬೇಕು. ಕನಿಷ್ಟ 20 ನಿಮಿಷಗಳ ಕಾಲ ಕಂಪ್ಯೂಟರ್​ ಪರದೆಯನ್ನು ನೋಡದೇ ದೂರವಿರಲು ಪ್ರಯತ್ನಿಸಿ. ಇದರಿಂದ ಕೊಂಚವಾದರೂ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ.

ಕುಳಿತಲ್ಲಿಯೇ ಕುಳಿತು ತೂಕ ಹೆಚ್ಚಾಗಬಹುದು. ಹೆಚ್ಚಿನ ತೂಕ ಹೊಂದುವುದು ಇತರ ರೋಗ ಲಕ್ಷಣಗಳಿಗೆ ಕಾರಣವಾಗುತ್ತದೆ. ಹಾಗಾಗಿ ದಿನನಿತ್ಯ ಯೋಗ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸುವುದಲ್ಲದೇ ದೈಹಿಕವಾಗಿಯೂ ಸದೃಢವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ:

Health Tips: ತುಟಿ ಕಪ್ಪಾಗಿದೆಯೇ? ಇಲ್ಲಿದೆ ಪರಿಹಾರ

Health Tips: ದಾಳಿಂಬೆ ಸಿಪ್ಪೆಯಲ್ಲಿದೆ ನಿಮಗೆ ಗೊತ್ತಿಲ್ಲದ ಪ್ರಯೋಜನಗಳು