ಮೊಟ್ಟೆ ಬೇಯಿಸುವಾಗ ಒಡೆದು ಹೋಗುತ್ತಾ, ಹಾಗಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ಬಹುತೇಕರ ಫೇವರೆಟ್ ಫುಡ್ ಸಾಲಿಗೆ ಈ ಮೊಟ್ಟೆ ಕೂಡ ಸೇರಿದೆ. ಮಾಂಸಹಾರಿಗಳು ಮಾತ್ರವಲ್ಲದೇ ಸಸ್ಯಾಹಾರಿಗಳಲ್ಲಿ ಕೆಲವರು ಈ ಮೊಟ್ಟೆಯನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಇದರಿಂದ ಎಗ್ ರೈಸ್, ಎಗ್ ಮಸಾಲಾ, ಎಗ್ ಬಿರಿಯಾನಿ ಹೀಗೆ ನಾನಾ ರೀತಿಯ ರೆಸಿಪಿಗಳನ್ನು ತಯಾರಿಸಿ ಸವಿಯುತ್ತಾರೆತ್ತಾರೆ. ಬೇರೆ ಆಹಾರಗಳಿಗೆ ಹೋಲಿಸಿದರೆ ಬಹಳ ಅಗ್ಗವಾಗಿದ್ದು, ಬೆಳಗ್ಗೆ , ಮಧ್ಯಾಹ್ನ ಅಥವಾ ರಾತ್ರಿ ಹೀಗೆ ಯಾವ ಸಮಯದಲ್ಲಿಯು ತಿನ್ನಬಹುದು. ಮೊಟ್ಟೆ ಬೇಯಿಸಿ ತಿನ್ನುವುದು ಸುಲಭ. ಮೊಟ್ಟೆ ಬೇಯಿಸುವಾಗ ಕೆಲವೊಮ್ಮೆ ಒಡೆದುಹೋಗುತ್ತವೆ. ಈ ವೇಳೆಯಲ್ಲಿ ಕೆಲವು ಟ್ರಿಕ್ಸ್ ಬಳಸಿದರೆ ಮೊಟ್ಟೆಯೂ ಒಡೆಯುವುದನ್ನು ತಪ್ಪಿಸಬಹುದು.
ಮಾಂಸಹಾರಿಗಳ ಇಷ್ಟದ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು. ಈ ಮೊಟ್ಟೆಯಿಂದ ನಾನಾ ರೀತಿಯ ರೆಸಿಪಿಗಳನ್ನು ಮಾಡಿ ತಿನ್ನಬಹುದಾದರೂ ಬೇಯಿಸಿದ ಮೊಟ್ಟೆಯು ರುಚಿಕರವಾಗಿರುತ್ತದೆ. ಹೀಗಾಗಿ ಹೆಚ್ಚಿನವರು ಬೇಯಿಸಿದ ಮೊಟ್ಟೆಯನ್ನು ತಿನ್ನಲು ಇಷ್ಟ ಪಡುತ್ತಾರೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಬಿ 6, ಬಿ 12 ಮತ್ತು ವಿಟಮಿನ್ ಡಿ, ಕ್ಯಾಲ್ಸಿಯಂ, ಸತು, ಸೆಲೆನಿಯಮ್ ಮತ್ತು ಫೋಲೇಟ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹೀಗಾಗಿ ದಿನಕ್ಕೊಂದು ಮೊಟ್ಟೆಯನ್ನು ಸೇವನೆ ಮಾಡುವುದರಿಂದ ಆರೋಗ್ಯದ ಹಲವು ಪ್ರಯೋಜನಗಳು ಅಧಿಕವಾಗಿದೆ.
* ಎರಡು ಮೊಟ್ಟೆಗಳನ್ನು ಕುದಿಸಲು ದೊಡ್ಡ ಗಾತ್ರದ ಪಾತ್ರೆಯನ್ನು ಆರಿಸಿಕೊಳ್ಳುವುದನ್ನು ಮರೆಯಬೇಡಿ. ಅಗಲವಾದ ಪಾತ್ರೆಗಳನ್ನು ತೆಗೆದುಕೊಂಡರೆ ಮೊಟ್ಟೆ ಕುದಿಯುವಾಗ ಒಂದಕ್ಕೊಂದು ಢಿಕ್ಕಿ ಹೊಡೆದು ಒಡೆದುಹೋಗುವುದಿಲ್ಲ.
* ಮೊಟ್ಟೆ ಬಿರುಕು ಬಿಡುತ್ತಿದ್ದರೆ ಉಪ್ಪನ್ನು ಹಾಕಿ. ಈ ಮೊಟ್ಟೆಗಳನ್ನು ಕುದಿಸುವಾಗ ಒಂದು ಚಮಚ ಉಪ್ಪು ಬೆರೆಸುವುದರಿಂದ ಒಡೆದು ಹೋಗುವುದಿಲ್ಲ. ಅದರೊಂದಿಗೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
* ಹೆಚ್ಚಿನವರು ರೆಫ್ರಿಜರೇಟರ್ ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿಡುತ್ತಾರೆ. ಅಡುಗೆಗೆ ಬೇಕಾದಾಗ ರೆಫ್ರಿಜರೇಟರ್ ನಿಂದ ತೆಗೆದು ಬಳಸುತ್ತಾರೆ. ಆದರೆ ಫ್ರಿಡ್ಜ್ ನಲ್ಲಿ ಮೊಟ್ಟೆ ಇಟ್ಟಿದ್ದರೆ ಅದನ್ನು ಹೊರಗೆ ತೆಗೆದು ಹದಿನೈದು ಇಪ್ಪತ್ತು ನಿಮಿಷಗಳು ಬಿಟ್ಟು ಬಳಿಕವೇ ಬೇಯಿಸಬೇಕು. ನೇರವಾಗಿ ತೆಗೆದು ಬೇಯಿಸಿದರೆ ಮೊಟ್ಟೆ ಒಡೆದು ಹೋಗುವ ಸಾಧ್ಯತೆಯೇ ಹೆಚ್ಚು.
* ಮೊಟ್ಟೆಯನ್ನು ಬೇಯಿಸುವಾಗ ಹೆಚ್ಚು ಉರಿಯಲ್ಲಿ ಕುದಿಸುವುದನ್ನು ತಪ್ಪಿಸಿ. ಇದರಿಂದ ಮೊಟ್ಟೆ ಒಡೆದು ಹೋಗುತ್ತದೆ. ಹೀಗಾಗಿ ಮಧ್ಯಮ ಉರಿಯಲ್ಲಿ ಬೇಯಿಸುವುದು ಉತ್ತಮ.
* ನೀರಿಗೆ ವಿನೆಗರ್ ಹಾಕಿ ಮೊಟ್ಟೆಗಳನ್ನು ಕುದಿಸಿದರೆ ಮೊಟ್ಟೆಯು ಬಿರುಕು ಬಿಡುವುದನ್ನು ತಪ್ಪಿಸಬಹುದು. ವಿನೆಗರ್ ಬಳಸುವುದರಿಂದ ಮೊಟ್ಟೆಯ ಬಿಳಿಭಾಗದಲ್ಲಿರುವ ಪ್ರೋಟೀನ್‌ಗಳು ವೇಗವಾಗಿ ಹೆಪ್ಪುಗಟ್ಟುತ್ತದೆ. ಹೀಗಾಗಿ ಮೊಟ್ಟೆಯ ಹೊರಭಾಗವು ಒಡೆಯುವುದಿಲ್ಲ.
ಇದನ್ನೂ ಓದಿ: ತಾಜಾ ತ್ವಚೆ ಪಡೆಯಲು ಐಸ್ ಕ್ಯೂಬ್ ಮಸಾಜ್ ಬೆಸ್ಟ್, ಇದರಿಂದಾಗುವ ಲಾಭಗಳು ಅಧಿಕ
* ಮೊಟ್ಟೆಗಳನ್ನು ನೀರಿಗೆ ಹಾಕಿ ಕುದಿಸುವಾಗ ಐಸ್ ಕ್ಯೂಬ್‌ಗಳನ್ನು ಬಳಸುವುದು ಉತ್ತಮ. ಅದಲ್ಲದೆ, ಅದನ್ನು ಬೇಯಿಸಿದ ನಂತರದಲ್ಲಿ ಕನಿಷ್ಠ 3 ನಿಮಿಷಗಳ ಕಾಲ ತಣ್ಣಗಾಗಲು ಐಸ್ ಕ್ಯೂಬ್ ಗಳಿರುವ ಪಾತ್ರೆಗೆ ವರ್ಗಾಯಿಸುವುದರಿಂದ ಮೊಟ್ಟೆ ಸಿಪ್ಪೆ ತೆಗೆಯಲು ಸುಲಭವಾದ ವಿಧಾನವಾಗಿದೆ.
* ಒಂದೇ ಪಾತ್ರೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಕುದಿಸಿದರೆ ಒಡೆಯುವ ಸಾಧ್ಯತೆಯೇ ಹೆಚ್ಚು. ನೀರು ಹೆಚ್ಚಾಗಿ ಕುದಿಯುತ್ತಿದ್ದರೆ ಹೆಚ್ಚು ಮೊಟ್ಟೆ ಹಾಕಿದರೆ ಬಿರುಕು ಬಿಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ