
ಚಹಾ ((tea) ಭಾರತೀಯರ ನೆಚ್ಚಿನ ಪಾನೀಯವಾಗಿದ್ದು, ಚಹಾ ಇಲ್ಲದೆ ಬಹುತೇಕ ಹೆಚ್ಚಿನ ಮನೆಗಳಲ್ಲಿ ದಿನವೇ ಪ್ರಾರಂಭವಾಗುವುದಿಲ್ಲ. ಅನೇಕರಿಗೆ ಚಹಾ ಒಂದು ಪಾನೀಯವಲ್ಲ ಜೀವನದ ಒಂದು ಭಾಗವಾಗಿಬಿಟ್ಟಿದೆ. ಎಲ್ಲರ ಫೇವರೆಟ್ ಆಗಿರುವ ಟೀ ತಯಾರಿಸುವುದು ತುಂಬಾನೇ ಸುಲಭದ ಕೆಲಸ ಎಂದು ಹಲವರು ಭಾವಿಸುತ್ತಾರೆ. ಆದ್ರೆ ವಿಷಯ ಏನು ಗೊತ್ತಾ 90% ಜನರಿಗೆ ಸ್ವಾದಭರಿತವಾಗಿ, ಪರ್ಫೆಕ್ಟ್ ಆಗಿ ಚಹಾ ಮಾಡಲು ಗೊತ್ತಿಲ್ಲವಂತೆ. ಈ ಟೀ ಮಾಡೋದು ಕೂಡ ಒಂದು ಕಲೆಯಾಗಿದ್ದು, ನಾವು ಯಾವ ಸಮಯದಲ್ಲಿ ಚಹಾಕ್ಕೆ ನೀರು, ಹಾಲು, ಸಕ್ಕರೆ ಚಹಾ ಪುಡಿ ಬೆರೆಸುತ್ತೇವೆ ಎಂಬುದು ಕೂಡ ಲೆಕ್ಕಕ್ಕೆ ಬರುತ್ತದೆ. ಈ ಸರಿಯಾದ ಹಂತವನ್ನು ಪಾಲಿಸಿದರೆ ಮಾತ್ರ ನೀವು ತಯಾರಿಸೋ ಟೀ ರುಚಿಕರವಾಗಿರುತ್ತದೆ. ಹಾಗಿದ್ರೆ ಚಹಾ ತಯಾರಿಸುವ ಸರಿಯಾದ ವಿಧಾನ ಹೇಗೆ ಎಂಬುದನ್ನು ನೋಡೋಣ ಬನ್ನಿ.
ಚಹಾ ತಯಾರಿಸುವಾಗ ಯಾವಾಗಲೂ ನೀರಿನಿಂದ ಪ್ರಾರಂಭಿಸಬೇಕು. ಪಾತ್ರೆಯಲ್ಲಿ ನಿಮ್ಮ ಅಳತೆಗೆ ತಕ್ಕಷ್ಟು ನೀರನ್ನು ಹಾಕು ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದ ನಂತರ, ಚಹಾ ಪುಡಿಯನ್ನು ಸೇರಿಸಿ. ಮತ್ತು ಈ ಪುಡಿ ಬಣ್ಣ ಮತ್ತು ಸುವಾಸನೆಯನ್ನು ಬಿಡಿಲು 4 ರಿಂದ 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ನೀವು ಈ ಹಂತದಲ್ಲಿ ಶುಂಠಿ, ಏಲಕ್ಕಿ ಅಥವಾ ತುಳಸಿ ಎಲೆಗಳನ್ನು ಸಹ ಸೇರಿಸಬಹುದು. ಇದು ಚಹಾದ ಸುವಾಸನೆ ಮತ್ತು ರುಚಿ ಎರಡನ್ನೂ ಹೆಚ್ಚಿಸುತ್ತದೆ.
ಹಾಲು ಸೇರಿಸಿದ ನಂತರ ಜನರು ಸಕ್ಕರೆಯನ್ನು ಸೇರಿಸುವುದು ಹೆಚ್ಚಿನವರು ಮಾಡುವ ದೊಡ್ಡ ತಪ್ಪು. ಆದರೆ ಸರಿಯಾದ ವಿಧಾನ ಯಾವುದೆಂದರೆ ಚಹಾ ಪುಡಿ ಹಾಕಿದ ಬಳಿಕ ಆ ಮಿಶ್ರಣ ಕುದಿಯುತ್ತಿರುವಾಗ ಸಕ್ಕರೆಯನ್ನು ಸೇರಿಸಬೇಕು. ಇದು ಸಕ್ಕರೆ ಸರಿಯಾಗಿ ಕರಗಲು ಮತ್ತು ಚಹಾದ ರುಚಿ ಸ್ಥಿರವಾಗಿರಲು ಸಹಾಯ ಮಾಡುತ್ತದೆ.
ಸಕ್ಕರೆಯನ್ನು ಬೆರೆಸಿ, ಚೆನ್ನಾಗಿ ಕುದಿದ ಬಳಿಕ ಚಹಾ ಮಿಶ್ರಣಕ್ಕೆ ಹಾಲು ಸೇರಿಸಬೇಕು. ನಂತರ ಕಡಿಮೆ ಉರಿಯಲ್ಲಿ 4 ರಿಂದ 5 ನಿಮಿಷಗಳ ಕಾಲ ಕುದಿಯಲು ಬಿಡಿ. ಹೀಗೆ ಕುದಿಯುವಾಗ ಚಹಾದ ಮೇಲೆ ನೊರೆ ಬಂದಾಗ ಚಹಾ ಸವಿಯಲು ಸಿದ್ಧ. ಇದು ಚಹಾ ಮಾಡುವ ಸರಿಯಾದ ವಿಧಾನ.
ಇದನ್ನೂ ಓದಿ: ಅತಿಯಾದ ಒತ್ತಡದಿಂದ ಮುಕ್ತಿ ಪಡೆಯಲು ನೀವು ಕುಡಿಯಬೇಕಾದ ಪಾನೀಯಗಳಿವು
ಪರಿಪೂರ್ಣ ಚಹಾ ತಯಾರಿಸುವುದು ಕಷ್ಟವೇನಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ಪದಾರ್ಥಗಳನ್ನು ಸೇರಿಸುವುದರ ಬಗ್ಗೆ ಗೊತ್ತಿರಬೇಕಷ್ಟೆ. ಚಹಾದ ಮೂಲ ನೀರು. ಚಹಾ ಎಲೆಗಳನ್ನು ನೇರವಾಗಿ ಹಾಲಿಗೆ ಸೇರಿಸುವುದರಿಂದ ಚಹಾದ ನಿಜವಾದ ಪರಿಮಳ ಹೊರಬರುವುದಿಲ್ಲ. ಸರಿಯಾದ ವಿಧಾನವೆಂದರೆ ಮೊದಲು ನೀರನ್ನು ಸೇರಿಸುವುದು, ನಂತರ ಚಹಾ ಎಲೆಗಳು, ನಂತರ ಸಕ್ಕರೆ ಮತ್ತು ಅಂತಿಮವಾಗಿ ಹಾಲು ಸೇರಿಸುವುದು. ಇದು ಚಹಾ ಮಾಡುವ ಪರ್ಫೆಕ್ಟ್ ವಿಧಾನವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ