ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹಭರಿತರಾಗಿರುತ್ತೀರಿ

ಇಡೀ ದಿನ ಹೇಗಿರುತ್ತದೆ ಎಂಬುದು ನಮ್ಮ ಬೆಳಗ್ಗಿನ ದಿನಚರಿಯನ್ನು ಅವಲಂಬಿಸಿರುತ್ತದೆ. ಬೆಳಗ್ಗೆ ಎದ್ದ ತಕ್ಷಣವೇ ಸೋಮಾರಿತನದಿಂದ, ನಕಾರಾತ್ಮಕ ಆಲೋಚನೆಗಳಿಂದ ದಿನವನ್ನು ಆರಂಭಿಸಿದರೆ ಆ ಸಂಪೂರ್ಣ ದಿನವೇ ಹಾಳಾಗಿ ಹೋಗುತ್ತದೆ. ಹೀಗಿರುವಾಗ ನೀವು ದಿನವಿಡೀ ಚೈತನ್ಯಶೀಲರಾಗಿರಲು, ಲವಲವಿಕೆಯಿಂದಿರಲು ಬೆಳಗ್ಗಿನ ದಿನಚರಿಯನ್ನು ಸಕಾರಾತ್ಮಕ ರೀತಿಯಲ್ಲಿ ಪ್ರಾರಂಭಿಸಬೇಕು. ಇದಕ್ಕಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಈ ಮೂರು ಅಭ್ಯಾಸಗಳನ್ನು ಪಾಲಿಸಬೇಕು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹಭರಿತರಾಗಿರುತ್ತೀರಿ
ಸಾಂದರ್ಭಿಕ ಚಿತ್ರ
Image Credit source: Freepik

Updated on: Oct 22, 2025 | 9:48 AM

ಪ್ರತಿಯೊಬ್ಬರೂ ಸಹ ಎಲ್ಲಿಯೂ ಸಹ ಆಯಾಸಗೊಳ್ಳದೆ ದಿನವಿಡೀ ಚುರುಕುತನದಿಂದ (energetic) ಇರಬೇಕು, ಅಂದುಕೊಂಡ ಕೆಲಸವನ್ನೆಲ್ಲಾ ಮಾಡಿ ಮುಗಿಸಬೇಕು ಎಂದುಕೊಳ್ಳುತ್ತಾರೆ. ಆದ್ರೆ ವಾಸ್ತವದಲ್ಲಿ ಹೆಚ್ಚಿನವರು ಸ್ವಲ್ಪ ಕೆಲಸ ಮಾಡುವಷ್ಟರಲ್ಲಿ ಉಸ್ಸಪ್ಪಾ ತುಂಬಾನೇ ಸುಸ್ತಾಗ್ತಿದೆ ಎನ್ನುತ್ತಾರೆ, ಈ ಕೆಲಸವನ್ನೆಲ್ಲಾ ನಾಳೆ ಮಾಡಿದ್ರೆ ಆಯ್ತು ಎಂದು ಸೋಮಾರಿತನವನ್ನು ತೋರಿಸುತ್ತಾರೆ. ಹೀಗೆ ದೇಹ ಮತ್ತು ಮನಸ್ಸಿಗೆ ಜಡತ್ವ ಆವರಿಸಲು ಮುಖ್ಯ ಕಾರಣವೇ ಬೆಳಗ್ಗಿನ ಅಭ್ಯಾಸಗಳು. ಹೌದು ನೀವು ಬೆಳಗ್ಗೆ ಎದ್ದಾಗಲೇ ಜಡತ್ವ ಆವರಿಸಿದರೆ ಆ ಸಂಪೂರ್ಣ ದಿನವೇ ಜಡತ್ವದಿಂದ ಕೂಡಿರುತ್ತದೆ. ಇದರ ಬದಲಾಗಿ  ನೀವು ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ಪಾಲಿಸುವುದರಿಂದ ದಿನಪೂರ್ತಿ ಆಕ್ಟಿವ್‌ ಆಗಿರುತ್ತೀರಿ, ಫಟಾಫಟ್‌ ಅಂತ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ಹಾಗಿದ್ರೆ ದಿನವಿಡೀ ಉತ್ಸಾಹಭರಿತರಾಗಿರಲು ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.

ದಿನವಿಡೀ ಉತ್ಸಾಹಭರಿತರಾಗಿರಲು ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು?

ನೀರು ಕುಡಿಯುವ ಮೂಲಕ ದೇಹವನ್ನು ನಿರ್ವಿಷಗೊಳಿಸಿ: ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಹೀಗೆ ಖಾಲಿ ಹೊಟ್ಟೆಯಲ್ಲು ಉಗುರುಬೆಚ್ಚಗಿನ ನೀರು  ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ ಮತ್ತು ಇದರಿಂದ ದೇಹ ನಿರ್ವಿಷಗೊಳ್ಳುತ್ತದೆ. ಈ ಅಭ್ಯಾಸವು ದೇಹದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

10-15 ನಿಮಿಷಗಳ ಕಾಲ ಸ್ಟ್ರೆಚಿಂಗ್ ಅಥವಾ ಯೋಗ ಮಾಡಿ: ಬೆಳಿಗ್ಗೆ ಎದ್ದು ಲಘು ವ್ಯಾಯಾಮ ಅಥವಾ ಯೋಗ, ಧ್ಯಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ವ್ಯಾಯಾಮ ಮಾಡುವುದರಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ. ಇದಲ್ಲದೆ ಬೆಳಗ್ಗಿನ ಯೋಗ, ವ್ಯಾಯಾಮ ನಮ್ಯತೆಯನ್ನು ಸುಧಾರಿಸುತ್ತದೆ, ಸ್ನಾಯುಗಳ ಆಯಾಸವನ್ನು ನಿವಾರಿಸುತ್ತದೆ ಮತ್ತು ಒತ್ತಡವನ್ನುಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುತ್ತದೆ. ಈ ಮೂಲಕ ನೀವು ದಿನವಿಡೀ ಆಕ್ಟಿವ್‌ ಆಗಿ ಇರಬಹುದು.

ಇದನ್ನೂ ಓದಿ
ಒತ್ತಡದಿಂದ ಮುಕ್ತರಾಗಲು ಪಾಲಿಸಬೇಕಾದ ಅಭ್ಯಾಸಗಳಿವು
ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡಬೇಕು, ಏನು ಮಾಡಬಾರದು ಗೊತ್ತಾ?
ತೂಕ ಇಳಿಕೆಗೆ ಸಹಕಾರಿ ಈ ಪಾನೀಯ
ಆಫೀಸ್‌ಗೆ ಸಮಯಕ್ಕೆ ಸರಿಯಾಗಿ ಹೋಗಲು ಈ ಸ್ಮಾರ್ಟ್‌ ಟಿಪ್ಸ್‌ ಪಾಲಿಸಿ

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ

ನಿಮ್ಮ ದಿನವನ್ನು ಸರಿಯಾದ ರೀತಿಯಲ್ಲಿ ಯೋಜಿಸಿ: ಬೆಳಗ್ಗೆ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು, ದಿನದಲ್ಲಿ ನೀವು ಮಾಡಿ ಮುಗಿಸಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ. ಯಾವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಯೋಜಿಸಿ. ಈ ಯೋಜನೆಯ ಪ್ರಕಾರ ಕೆಲಸ ಮಾಡಿದರೆ, ಆ ದಿನವೇ ನಿಮ್ಮ ಎಲ್ಲಾ ಕೆಲಸ ಪೂರ್ಣಗೊಳ್ಳುತ್ತದೆ. ಅಲ್ಲದೆ ಈ ಅಭ್ಯಾಸ ಸಮಯ ನಿರ್ವಹಣೆಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ