Brain Health: ಟೂತ್​ಪೇಸ್ಟ್, ಲಿಪ್​ಸ್ಟಿಕ್​ನಿಂದಲೂ ಮೆದುಳಿನ ಆರೋಗ್ಯಕ್ಕೆ ಅಪಾಯ!

|

Updated on: Feb 07, 2024 | 12:44 PM

Health Tips: ನಮ್ಮ ಮೆದುಳಿನ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರ ಕೂಡ ಪರಿಣಾಮ ಬೀರುತ್ತದೆ. ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ನಮ್ಮ ಜೀವನಶೈಲಿಯೂ ಕಾರಣವಾಗುತ್ತದೆ. ಆದರೆ, ನಾವು ಬಳಸುವ ಟೂತ್​ಪೇಸ್ಟ್ ಮತ್ತು ಲಿಪ್​ಸ್ಟಿಕ್ ಕೂಡ ಮೆದುಳಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂಬ ಅಚ್ಚರಿಯ ಸಂಗತಿಯೊಂದು ಬಯಲಾಗಿದೆ.

Brain Health: ಟೂತ್​ಪೇಸ್ಟ್, ಲಿಪ್​ಸ್ಟಿಕ್​ನಿಂದಲೂ ಮೆದುಳಿನ ಆರೋಗ್ಯಕ್ಕೆ ಅಪಾಯ!
ಟೂತ್‌ಪೇಸ್ಟ್
Follow us on

ಕಳೆದ ತಿಂಗಳು ಪದ್ಮಶ್ರೀ ಪ್ರಶಸ್ತಿಗೆ (Padma Shri Award) ಆಯ್ಕೆಯಾದ ಖ್ಯಾತ ನರರೋಗ ತಜ್ಞ (Neurologist) ಡಾ. ಚಂದ್ರಶೇಖರ್ ಮೆಶ್ರಮ್ ಸಕ್ಕರೆಯ ಅಂಶವಿರುವ ಆಹಾರಗಳ ಸೇವನೆ ಮತ್ತು ಮೆದುಳಿನ ಆರೋಗ್ಯದ (Brain Health) ನಡುವಿನ ಸಂಬಂಧದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಜನರು ತಾವು ಏನು ಸೇವಿಸುತ್ತೇವೆ ಎಂಬುದರ ಕುರಿತು ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ. ಇದಿಷ್ಟೇ ಅಲ್ಲದೆ, ದಿನನಿತ್ಯ ಬಳಸುವ ಟೂತ್‌ಪೇಸ್ಟ್ (Toothpaste) ಮತ್ತು ಲಿಪ್‌ಸ್ಟಿಕ್‌ಗಳಂತಹ (Lipstick) ವಸ್ತುಗಳು ಕೂಡ ಮೆದುಳಿನ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

“ರೋಗಿಗಳು ನಿರಂತರವಾಗಿ ತೀವ್ರ ತಲೆನೋವು ಅನುಭವಿಸಿ, ಅದಕ್ಕೆ ದಿನವೂ ಔಷಧಿ ತೆಗೆದುಕೊಳ್ಳುವ ಹಲವಾರು ಪ್ರಕರಣಗಳನ್ನು ನಾನು ನೋಡಿದ್ದೇನೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಒಂದು ಟೂತ್​ಪೇಸ್ಟ್​ ಬದಲು ಮತ್ತೊಂದು ಟೂತ್​ಪೇಸ್ಟ್ ಬಳಸುವ ಸರಳ ಬದಲಾವಣೆ ಕೂಡ ಅವರ ಆರೋಗ್ಯದಲ್ಲಿ ದೊಡ್ಡ ಪಾಸಿಟಿವ್ ಬದಲಾವಣೆಯನ್ನೇ ತಂದಿದೆ ಎಂಬ ಅಚ್ಚರಿಯ ಸಂಗತಿಯನ್ನು ತಿಳಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ನಿಯಂತ್ರಣಕ್ಕೆ ನಿಮ್ಮ ಡಯೆಟ್​ನಲ್ಲಿ ಈ ಆಹಾರ ಸೇರಿಸಿಕೊಳ್ಳಿ

“ಮರುಕಳಿಸುವ ತೀವ್ರ ತಲೆನೋವಿನಿಂದ ಮಹಿಳೆಯೊಬ್ಬರು ಪರದಾಡುತ್ತಿದ್ದರು. ಸಂಪೂರ್ಣ ರೋಗನಿರ್ಣಯದ ತಪಾಸಣೆಗಳು ಮತ್ತು ಅನೇಕ ಸಮಾಲೋಚನೆಗಳ ನಂತರ ಆಕೆಯ ತಲೆನೋವಿಗೆ ಆಕೆ ಬಳಸಿದ ಲಿಪ್​ಸ್ಟಿಕ್ ಕಾರಣವೆಂದು ಕಂಡುಹಿಡಿಯಲಾಯಿತು. ಆಕೆಯ ತಲೆನೋವು ಮತ್ತು ಲಿಪ್​ಸ್ಟಿಕ್ ನಡುವಿನ ಪರಸ್ಪರ ಸಂಬಂಧ ಬಹಿರಂಗವಾಗಲು ಹಲವು ತಿಂಗಳುಗಳೇ ಬೇಕಾಯಿತು. ಹೀಗಾಗಿ, ತಲೆನೋವೆಂದು ಬರುವ ಅನೇಕ ರೋಗಿಗಳಿಗೆ ನಾನು ತಮ್ಮ ಟೂತ್‌ಪೇಸ್ಟ್ ಅಥವಾ ಲಿಪ್‌ಸ್ಟಿಕ್ ಅನ್ನು ಬದಲಾಯಿಸಲು ಸಲಹೆ ನೀಡಿದ್ದೇನೆ” ಎಂದು ಡಾ. ಚಂದ್ರಶೇಖರ್ ಮೆಶ್ರಮ್ ಹೇಳಿದ್ದಾರೆ.

ಇದನ್ನೂ ಓದಿ: ತಲೆನೋವು ತಡೆಯೋಕೆ ಆಗುತ್ತಿಲ್ಲವೇ?; ಈ ಪಾನೀಯಗಳನ್ನು ಸೇವಿಸಿ

“ಹೆಚ್ಚಿನ ಸಕ್ಕರೆ ಸೇವನೆಯು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಕೆಲವು ಲಘು ಆಹಾರ ಬಾಯಿ ಮತ್ತು ನರವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಾಸ್ತವದ ಸಂಗತಿಯೆಂದರೆ ಮನುಷ್ಯರು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ತಿನ್ನಬೇಕು. ಇದು ಹಲ್ಲಿನ ಕೊಳೆತ ಮತ್ತು ಬಾಯಿಯ ಆರೋಗ್ಯದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರ ಜೊತೆಗೆ ಮೆದುಳಿನ ಯೋಗಕ್ಷೇಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ” ಎಂದು ಅವರು ಸಲಹೆ ನೀಡಿದ್ದಾರೆ.

“ಕಳೆದ 40 ವರ್ಷಗಳಲ್ಲಿ ನಮ್ಮ ಆಹಾರ ಪೂರೈಕೆಯಲ್ಲಿ 3 ಲಕ್ಷಕ್ಕೂ ಹೆಚ್ಚು ರಾಸಾಯನಿಕಗಳನ್ನು ಪರಿಚಯಿಸಲಾಗಿದೆ. ಅವುಗಳಲ್ಲಿ ಹಲವು ರಾಸಾಯನಿಕಗಳು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತವೆ” ಎಂದು ಡಾ. ಚಂದ್ರಶೇಖರ್ ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ