Music Benefits: ಬೆಳಗ್ಗೆ ಸಂಗೀತ ಕೇಳುತ್ತಾ ದಿನ ಆರಂಭಿಸಿದರೆ ಹೀಗೆಲ್ಲಾ ಆಗುತ್ತೆ!

ಸಂಗೀತವು ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಉದಾಹರಣೆಗೆ, ಸಂಗೀತದ ಪಾಠಗಳು ನಮ್ಮ ನೆನಪಿನ ಶಕ್ತಿಗಳನ್ನು ಹೆಚ್ಚಿಸಲು ಮತ್ತು ನಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸಲು ಸಹಾಯ ಮಾಡುತ್ತದೆ. ಅದರಲ್ಲೂ ದಿನವೂ ಬೆಳಗ್ಗೆ ಸಂಗೀತ ಕೇಳುತ್ತಾ ದಿನವನ್ನು ಆರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ.

Music Benefits: ಬೆಳಗ್ಗೆ ಸಂಗೀತ ಕೇಳುತ್ತಾ ದಿನ ಆರಂಭಿಸಿದರೆ ಹೀಗೆಲ್ಲಾ ಆಗುತ್ತೆ!
ಸಂಗೀತವನ್ನು ಕೇಳುವುದು Image Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 22, 2024 | 4:25 PM

ಸಂಗೀತವೆಂಬುದು ಮ್ಯಾಜಿಕ್ ಇದ್ದಂತೆ. ಇದು ಒಂದೇ ಕ್ಷಣದಲ್ಲಿ ನಮ್ಮ ಮೂಡ್ ಅನ್ನು ಬದಲಿಸಿಬಿಡುತ್ತದೆ. ಸಂಗೀತಕ್ಕೆ ಭಾಷೆ, ರಾಜ್ಯ, ಲಿಂಗ, ಧರ್ಮ ಯಾವುದರ ಭೇದವೂ ಇಲ್ಲ. ಭಾಷೆ ಅರ್ಥವಾಗದಿದ್ದರೂ ಆ ಮ್ಯೂಸಿಕ್ (Music) ನಮ್ಮನ್ನು ಸೆಳೆದುಬಿಡುತ್ತದೆ. ಮಾಂಟ್ರಿಯಲ್ ನ್ಯೂರೋಲಾಜಿಕಲ್ ಇನ್‌ಸ್ಟಿಟ್ಯೂಟ್ ಮತ್ತು ಆಸ್ಪತ್ರೆಯ ‘ದಿ ನ್ಯೂರೋಸೈನ್ಸ್ ಆಫ್ ಮ್ಯೂಸಿಕಲ್ ಚಿಲ್’ ಅಧ್ಯಯನದಲ್ಲಿ ಕಂಡುಹಿಡಿದಂತೆ, ನೀವು ಸಂಗೀತವನ್ನು ಕೇಳಿದಾಗ ನಿಮ್ಮ ಮೆದುಳು ‘ಸಂತೋಷದ ಹಾರ್ಮೋನ್’ ಎಂದೇ ಪರಿಗಣಿಸಲಾಗುವ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ದಿನವೂ ಮುಂಜಾನೆ ಸಂಗೀತ ಕೇಳುವುದರೊಂದಿಗೆ ದಿನವನ್ನು ಆರಂಭಿಸುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

ಸಂಗೀತವು ಒತ್ತಡವನ್ನು ಕಡಿಮೆ ಮಾಡುತ್ತದೆ:

ಬೆಳಗ್ಗೆ ಸಂಗೀತವನ್ನು ಕೇಳುವುದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಬಹುದು. ಜನರು ವಿವಿಧ ತಾಳವಾದ್ಯಗಳನ್ನು ನುಡಿಸುವ ಮತ್ತು ಹಾಡುವ ಮೂಲಕ ಸಂಗೀತವನ್ನು ರಚಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಅವರ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ಅಧ್ಯಯನವು ತೋರಿಸಿದೆ. ಹೀಗಾಗಿ, ಸಂಗೀತ ಕೇಳುತ್ತಲೇ ಇರಿ.

ಇದನ್ನೂ ಓದಿ: ಖಿನ್ನತೆಗೆ ಮಾತ್ರೆ ತೆಗೆದುಕೊಳ್ಳುತ್ತೀರಾ?; ಅದರ ಅಡ್ಡಪರಿಣಾಮಗಳೂ ತಿಳಿದಿರಲಿ

ಸಂಗೀತವು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ:

ಮಲಗುವುದಕ್ಕಿಂತಲೂ ಮೊದಲು 45 ನಿಮಿಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಆಲಿಸಿದರೆ ಉತ್ತಮವಾದ ನಿದ್ರೆ ಬರುತ್ತದೆ ಎಂದು ಅಧ್ಯಯನ ಹೇಳಿದೆ.

ಮೂಡ್ ಬದಲಿಸುತ್ತದೆ:

ಮೂಡ್ ನಿಯಂತ್ರಣದ ಮೇಲೆ ಸಂಗೀತದ ಪ್ರಬಲ ಪ್ರಭಾವವನ್ನು ಅಧ್ಯಯನಗಳು ತಿಳಿಸಿವೆ. ನೀವು ಬೆಳಿಗ್ಗೆ ಲವಲವಿಕೆಯ ಅಥವಾ ಇಂಪಾದ ಸಂಗೀತವನ್ನು ಕೇಳುವ ಮೂಲಕ ನಿಮ್ಮ ಮನಸ್ಥಿತಿಯನ್ನು ಸುಧಾರಿಸಬಹುದು. ಇದು ನಿಮ್ಮ ಪಾಸಿಟಿವ್ ದೃಷ್ಟಿಕೋನವನ್ನು ಹೆಚ್ಚಿಸಬಹುದು.

ಸಂಗೀತ ಖಿನ್ನತೆಯನ್ನು ಕಡಿಮೆ ಮಾಡುತ್ತದೆ:

ಪ್ರಪಂಚದಾದ್ಯಂತ 350 ದಶಲಕ್ಷಕ್ಕೂ ಹೆಚ್ಚು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 90% ಜನರು ನಿದ್ರಾಹೀನತೆಯನ್ನು ಅನುಭವಿಸುತ್ತಾರೆ. ಶಾಸ್ತ್ರೀಯ ಸಂಗೀತವನ್ನು ಕೇಳುವವರಲ್ಲಿ ಖಿನ್ನತೆಯ ಲಕ್ಷಣಗಳು ಬಹಳ ಕಡಿಮೆಯಾಗುತ್ತವೆ ಎಂದು ಸಂಶೋಧನೆಯು ಕಂಡುಹಿಡಿದಿದೆ.

ಏಕಾಗ್ರತೆ ಹೆಚ್ಚಿಸುತ್ತದೆ:

ಸಂಗೀತವು ಅರಿವಿನ ಕಾರ್ಯ, ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿಯಲಾಗಿದೆ. ಬೆಳಗ್ಗೆ ನೀವು ವಾದ್ಯ ಸಂಗೀತವನ್ನು ನುಡಿಸುವ ಮೂಲಕ ಉತ್ಪಾದಕತೆ ಮತ್ತು ಮಾನಸಿಕ ತೀಕ್ಷ್ಣತೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮೆದುಳನ್ನು ಚುರುಕುಗೊಳಿಸಿ, ಏಕಾಗ್ರತೆ ಹೆಚ್ಚಿಸಲು ಯಾವ ಆಹಾರ ಸೇವಿಸಬೇಕು?

ಶಕ್ತಿ ವರ್ಧಕ:

ಇಂಪಾದ, ಉತ್ತಮವಾದ ಸಂಗೀತವನ್ನು ಕೇಳುವ ಮೂಲಕ ನೀವು ಸ್ವಾಭಾವಿಕವಾಗಿ ಹೆಚ್ಚು ಚೈತನ್ಯವನ್ನು ಅನುಭವಿಸಬಹುದು. ಬೆಳಿಗ್ಗೆ ಲವಲವಿಕೆಯ ಸಂಗೀತವನ್ನು ನುಡಿಸುವುದರಿಂದ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಬಹುದು, ನಿಮ್ಮ ಚಯಾಪಚಯವನ್ನು ವೇಗಗೊಳಿಸಬಹುದು ಮತ್ತು ಡೋಪಮೈನ್‌ನಂತಹ ಉತ್ತಮ ನರಪ್ರೇಕ್ಷಕಗಳನ್ನು ಬಿಡುಗಡೆ ಮಾಡಬಹುದು.

ಸೃಜನಶೀಲತೆ ಹೆಚ್ಚಿಸುತ್ತದೆ:

ಸಂಗೀತವು ಸೃಜನಶೀಲತೆ ಮತ್ತು ಸ್ಫೂರ್ತಿಯನ್ನು ಹುಟ್ಟುಹಾಕುತ್ತದೆ ಎಂದು ಬಹಳ ಹಿಂದಿನಿಂದಲೂ ತಿಳಿದುಬಂದಿದೆ. ವಿವಿಧ ಸಂಗೀತ ಪ್ರಕಾರಗಳು ಮತ್ತು ಶೈಲಿಗಳಿಗೆ ನಿಮ್ಮನ್ನು ಒಡ್ಡಿಕೊಳ್ಳುವ ಮೂಲಕ ನೀವು ಸೃಜನಶೀಲತೆಯನ್ನು ಪ್ರೋತ್ಸಾಹಿಸಬಹುದು ಮತ್ತು ಬೆಳಿಗ್ಗೆ ನಿಮ್ಮ ಕಲ್ಪನೆಯನ್ನು ಪ್ರಚೋದಿಸಬಹುದು. ನೀವು ಬರಹಗಾರರಾಗಿರಲಿ, ಕಲಾವಿದರಾಗಿರಲಿ ಅಥವಾ ಉದ್ಯಮಿಗಳೇ ಆಗಿರಲಿ ಬೆಳಿಗ್ಗೆ ಮೊದಲು ಸಂಗೀತವನ್ನು ಕೇಳುವುದು ನಿಮ್ಮ ಸೃಜನಶೀಲತೆಯನ್ನು ಉತ್ತೇಜಿಸುತ್ತದೆ, ಹೊಸ ಆಲೋಚನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಹೊಸತನವನ್ನು ಹೆಚ್ಚಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ