Total Solar Eclipse 2024: ಸೂರ್ಯಗ್ರಹಣದ ವೇಳೆ ಏನು ಮಾಡಬೇಕು? ಏನು ಮಾಡಬಾರದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 08, 2024 | 11:51 AM

ಯುಗಾದಿ ಹಬ್ಬದ ಒಂದು ದಿನ ಮುನ್ನ ಅಂದರೆ ಇಂದು ಸೋಮವಾರ (ಏಪ್ರಿಲ್ 8) ದಂದು ಸೂರ್ಯಗ್ರಹಣವು ಸಂಭವಿಸಲಿದೆ. ವಿಶೇಷತೆಗಳಿಂದ ಕೂಡಿದ ಈ ಗ್ರಹಣ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಈ ಕೆಲವು ತಪ್ಪುಗಳನ್ನು ಮಾಡಲೇಬೇಡಿ. ಹಾಗಾದ್ರೆ ಗ್ರಹಣದ ವೇಳೆ ಏನು ಮಾಡಬೇಕು ಏನು ಮಾಡಬಾರದು ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

Total Solar Eclipse 2024: ಸೂರ್ಯಗ್ರಹಣದ ವೇಳೆ ಏನು ಮಾಡಬೇಕು? ಏನು ಮಾಡಬಾರದು?
Follow us on

ಇಂದು 2024 ವರ್ಷದ ಮೊದಲ ಸೂರ್ಯಗ್ರಹಣ. ಈ ಬಾರಿ ಮೊದಲ ಸಂಪೂರ್ಣ ಸೂರ್ಯಗ್ರಹಣ ಪೆಸಿಫಿಕ್, ಅಟ್ಲಾಂಟಿಕ್, ಮೆಕ್ಸಿಕೋ, ಉತ್ತರ ಅಮೆರಿಕಾ, ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ, ಕೆನಡಾ ಹಾಗೂ ಇಂಗ್ಲೆಂಡ್ ಭಾಗದಲ್ಲಿ ಗೋಚರಿಸಲಿದೆ. ಆದರೆ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ.

ಗ್ರಹಣದ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

  •  ಸೂರ್ಯನನ್ನು ನೇರವಾಗಿ ನೋಡುವುದು, ಕಣ್ಣಿನ ಹಾನಿಯನ್ನು ಉಂಟುಮಾಡಬಹುದು. ಹೀಗಾಗಿ ಗ್ರಹಣವನ್ನು ವೀಕ್ಷಿಸಲು ಸೌರ ವೀಕ್ಷಣಾ ಕನ್ನಡಕ ಅಥವಾ ಹ್ಯಾಂಡ್ಹೆಲ್ಡ್ ಸೌರ ವೀಕ್ಷಕಗಳನ್ನು ಬಳಸುವುದು ಉತ್ತಮ.
  • ಕ್ಯಾಮೆರಾ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಗ್ರಹಣವನ್ನು ಸೆರೆಹಿಡಿಯುವುದಾದರೆ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಈ ವೇಳೆ ಕಣ್ಣುಗಳನ್ನು ರಕ್ಷಿಸಲು ಸೌರ ಫಿಲ್ಟರ್ ಬಳಸಿದರೆ ಉತ್ತಮ.
  • ಕ್ಯಾಮೆರಾ ಅಥವಾ ಬೈನಾಕ್ಯುಲರ್‌ ಗಳಿಂದ ಸೂರ್ಯನನ್ನು ನೇರವಾಗಿ ನೋಡಲೇ ಬೇಡಿ, ಇದರಿಂದ ಕಣ್ಣಿಗೆ ಹಾನಿಯಾಗುತ್ತದೆ.
  • ಸೌರ ಫಿಲ್ಟರ್‌ಗಳಿಲ್ಲದೆ ಸ್ಮಾರ್ಟ್‌ಫೋನ್‌ಗಳು, ಕ್ಯಾಮೆರಾಗಳು ಅಥವಾ ದೂರದರ್ಶಕಗಳ ಮೂಲಕ ಗ್ರಹಣವನ್ನು ನೋಡುವುದು ಒಳ್ಳೆಯದಲ್ಲ.
  • ಮನೆಯಲ್ಲಿ ತಯಾರಿಸಿದ ಫಿಲ್ಟರ್‌ ಗಳಾದ ಸನ್‌ಗ್ಲಾಸ್‌ ಗಳು ಹಾಗೂ ಇನ್ನಿತ್ತರ ಸಾಧನ ಬಳಸಬೇಡಿ. ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆಯನ್ನು ಒದಗಿಸಿದ ಕಾರಣ ಕಣ್ಣಿನ ಮೇಲೆ ನೇರವಾದ ಪರಿಣಾಮಗಳನ್ನು ಬೀರಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ