Ugadi 2024 : ಈ ವಸ್ತುಗಳಿದ್ದರೆ ಸಾಕು, ಬಾಯಲ್ಲಿ ನೀರೂರಿಸುವ ಕರ್ಚಿಕಾಯಿ ಮಾಡುವುದು ಬಲು ಸುಲಭ
ಹಬ್ಬ ಹತ್ತಿರ ಬರುತ್ತಿದ್ದಂತೆ ಮನೆಯಲ್ಲಿ ಹಬ್ಬದ ಆಚರಣೆಗೆ ತಯಾರಿಗಳು ಜೋರಾಗಿಯೇ ನಡೆಯುತ್ತಿರುತ್ತದೆ. ಮನೆಯ ಹೆಂಗಳೆಯರು ಈ ಬಾರಿಯ ಹಬ್ಬಕ್ಕೆ ಯಾವ ಬಗೆಯ ರುಚಿ ರುಚಿಕರವಾದ ಸಿಹಿ ತಿಂಡಿಗಳನ್ನು ಮಾಡಬಹುದೆಂದು ಯೋಚಿಸಿರುತ್ತಾರೆ. ಯುಗಾದಿ ಹಬ್ಬಕ್ಕೆ ಒಂದೇ ಒಂದು ದಿನ ಬಾಕಿಯಿದ್ದು ಬಾಯಲ್ಲಿ ನೀರೂರಿಸುವ ಕರ್ಚಿಕಾಯಿ ಮಾಡಿ ಮನೆ ಮಂದಿಯನ್ನು ಖುಷಿ ಪಡಿಸಬಹುದು.
ನಾಳೆ ಯುಗಾದಿ ಹಬ್ಬ, ಹಿಂದೂಗಳಿಗೆ ಹೊಸ ವರ್ಷದ ಆರಂಭ. ಈ ಯುಗಾದಿಯನ್ನು ಬೇವು ಬೆಲ್ಲ ಹಾಗೂ ಸಿಹಿಯೊಂದಿಗೆ ಆಚರಿಸುತ್ತಾರೆ. ಹಬ್ಬ ಎಂದರೆ ಅಡುಗೆ ಮನೆಯಲ್ಲಿ ವಿವಿಧ ಸಿಹಿತಿಂಡಿಗಳು ಇಲ್ಲದಿದ್ದರೆ ಹೇಗೆ ಅಲ್ಲವೇ. ಈ ಬಾರಿಯ ಹಬ್ಬಕ್ಕೆ ಸಿಹಿ ತಿಂಡಿಗಳ ಪಟ್ಟಿಯಲ್ಲಿ ಬಾಯಲ್ಲಿ ನೀರೂರಿಸುವ ಕರ್ಚಿಕಾಯಿಯನ್ನು ಸೇರಿಸಬಹುದು.
ಕರ್ಚಿಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು:
* ಒಂದು ಕಪ್ ನಷ್ಟು ಮೈದಾ ಹಿಟ್ಟು
* ಕಾಲು ಕಪ್ ನಷ್ಟು ರವೆ
* ಬೆಲ್ಲ
* ಮೂರು ಚಮಚದಷ್ಟು ಅಕ್ಕಿ ಹಿಟ್ಟು,
* ಎರಡು ಚಮಚ – ತುಪ್ಪ,
* ನೀರು
* ಎಣ್ಣೆ
* ಸ್ವಲ್ಪ ತೆಂಗಿನಕಾಯಿ ತುರಿ
* ಅರ್ಧ ಕಪ್ ಪುಟಾಣಿ
* ಏಲಕ್ಕಿ ಪುಡಿ.
ಇದನ್ನೂ ಓದಿ: ಚೈತ್ರ ನವರಾತ್ರಿಯ ಸಮಯದಲ್ಲಿ ಯಾವ ದಿನ ಯಾವ ದೇವಿಯ ಆರಾಧನೆ ಮಾಡಬೇಕು?
ಮಾಡುವ ವಿಧಾನ:
* ಒಂದು ಅಗಲವಾದ ಪಾತ್ರೆಗೆ ಮೈದಾ ಹಿಟ್ಟು, ರವೆ, ಅಕ್ಕಿಹಿಟ್ಟು ಹಾಗೂ ಬಿಸಿ ಮಾಡಿದ ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ಇದಕ್ಕೆ ಅಗತ್ಯವಿದ್ದಷ್ಟು ನೀರು ಬೆರೆಸಿ ಚೆನ್ನಾಗಿ ನಾದಿಕೊಳ್ಳಿ.
* ಮಿಕ್ಸಿ ಜಾರಿಗೆ ಹುರಿದ ಪುಟಾಣಿ, ತೆಂಗಿನಕಾಯಿತುರಿ ಸೇರಿಸಿ ರುಬ್ಬಿಕೊಂಡು ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಈಗಾಗಲೇ ನಾದಿಕೊಂಡ ಹಿಟ್ಟಿನಿಂದ ಸ್ವಲ್ಪ ಹಿಟ್ಟು ತೆಗೆದು ಉಂಡೆ ಮಾಡಿಕೊಂಡು ಲಟ್ಟಿಸಿಕೊಳ್ಳಿ.
* ಅದರೊಳಗೆ ಪುಟಾಣಿ ಬೆಲ್ಲದ ಹೂರಣವನ್ನು ಹಾಕಿ ಕರ್ಜಿಕಾಯಿ ಆಕಾರದಲ್ಲಿ ಮಡಚಿಕೊಂಡು ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಕರ್ಜಿಕಾಯಿ ಸವಿಯಲು ಸಿದ್ಧ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ