ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರೂ ಪರಸ್ಪರ ನಂಬಿಕೆ ಏಕಿಲ್ಲ? ಎಂಥಾ ಭಯ ನಿಮ್ಮನ್ನು ಕಾಡುತ್ತಿದೆ?

| Updated By: ನಯನಾ ರಾಜೀವ್

Updated on: Jul 20, 2022 | 4:57 PM

ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರೂ ನಂಬಿಕೆ ಎನ್ನುವ ಪ್ರಶ್ನೆ ಬಂದಾಗ ಒಂದು ಹೆಜ್ಜೆ ಹಿಂದೆ ಇಡುವುದು ಏಕೆ? ಏಕೆ ಅಭದ್ರೆಯ ಭಯ ಕಾಡುತ್ತೆ? ಪರಸ್ಪರ ಅರ್ಥಮಾಡಿಕೊಂಡಾಗ ಇಬ್ಬರೂ ಒಟ್ಟಿಗೆ ಶಾಂತಿಯುತವಾಗಿ ಬದುಕಲು ಕಷ್ಟವೇನು?

ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರೂ ಪರಸ್ಪರ ನಂಬಿಕೆ ಏಕಿಲ್ಲ? ಎಂಥಾ ಭಯ ನಿಮ್ಮನ್ನು ಕಾಡುತ್ತಿದೆ?
Couple
Follow us on

ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರೂ ನಂಬಿಕೆ ಎನ್ನುವ ಪ್ರಶ್ನೆ ಬಂದಾಗ ಒಂದು ಹೆಜ್ಜೆ ಹಿಂದೆ ಇಡುವುದು ಏಕೆ? ಏಕೆ ಅಭದ್ರೆಯ ಭಯ ಕಾಡುತ್ತೆ?
ಪರಸ್ಪರ ಅರ್ಥಮಾಡಿಕೊಂಡಾಗ ಇಬ್ಬರೂ ಒಟ್ಟಿಗೆ ಶಾಂತಿಯುತವಾಗಿ ಬದುಕಲು ಕಷ್ಟವೇನು?, ಮಕ್ಕಳು ಪೋಷಕರು ನಿರಂತರ ಜಗಳವಾಡುವುದೇಕೆ?, ದಂಪತಿ ನಡುವೆ ಭಿನ್ನಾಭಿಪ್ರಾಯವೇಕೆ? ಇವೆಲ್ಲದರಿಂದ ಹೊರಬರಲು ಕೆಲವು ಸಲಹೆಗಳು ಇಲ್ಲಿವೆ.

ಪರಸ್ಪರ ಅರ್ಥಮಾಡಿಕೊಂಡವರು ಒಟ್ಟಿಗೆ ಬದುಕುವುದು ಸುಲಭ, ಪ್ರತಿಯೊಬ್ಬನೂ ಒಂದಲ್ಲಾ ಒಂದು ರೀತಿಯಲ್ಲಿ ಪೆಟ್ಟು ತಿಂದಿರುತ್ತಾನೆ. ನಮ್ಮ ಶಾಲೆ ಮತ್ತು ಸಮಾಜದಿಂದ ನಾವು ಪೆಟ್ಟು ತಿಂದಿರುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರ ಜೀವನದಲ್ಲಿಯೂ ಕಹಿ ಅನುಭವಗಳು ಅನುಭವಗಳಿರಬಹುದು.

ನೀವು ಹಿಂದೆ ಯಾರನ್ನಾದರೂ ಪ್ರೀತಿಸಿದಾಗ ನೀವು ನೋವು ಅನುಭವಿಸರುತ್ತೀರಿ, ನೀವು ನಂಬಿದ ಸ್ನೇಹಿತ, ಗೆಳೆಯ ಅಥವಾ ಗೆಳತಿ, ಒಡಹುಟ್ಟಿದವರು ಅಥವಾ ಪೋಷಕರಾಗಿರಬಹುದು ಮತ್ತು ಆ ವ್ಯಕ್ತಿಯಿಂದ ನಿರಾಶೆಗೊಂಡಿದ್ದೀರಿ.

ನೀವು ಪ್ರಾಯೋಗಿಕವಾಗಿ ಮುಂದುವರೆದಿದ್ದರೂ ಸಹ, ಆ ನೋವು ಆಂತರಿಕವಾಗಿ ನಿಮ್ಮ ಪ್ರಜ್ಞೆಯಲ್ಲಿ ಉಳಿಯುತ್ತದೆ. ಮೊನ್ನೆ ಹಾಲು ಕುಡಿಯುವಾಗ ನಾಲಿಗೆ ಸುಟ್ಟು ಹೋಗಿದ್ದರಿಂದ ಬೆಳ್ಳಗಿರುವ ಯಾವುದನ್ನೂ ಕುಡಿಯಲು ಒಪ್ಪದ ತೆನಾಲಿರಾಮನ ಬೆಕ್ಕಿನಂತೆ ಆಡುತ್ತಿರಬಹುದು.

ಬೇರೊಬ್ಬರ ಮೇಲೆ ನಂಬಿಕೆ ಇಡುವುದನ್ನೇ ಕಳೆದುಕೊಂಡಿರಬಹುದು. ನೀವು ಇನ್ನೂ ನಿಮ್ಮ ಜೀವನದಲ್ಲಿ ಜನರನ್ನು ಬಯಸುತ್ತೀರಿ, ನೀವು ಅವರನ್ನು ಪ್ರೀತಿಸುವ ಕಾರಣದಿಂದಲ್ಲ, ಆದರೆ ಒಂಟಿತನದ ಭಯದಿಂದ.

ನೀವು ನನ್ನ ಜೀವನದಲ್ಲಿ ಇರಿ ಆದರೆ ಅಂತರ ಕಾಯ್ದುಕೊಳ್ಳಿ ಎಂದು ಹೇಳುವವರೂ ಹೆಚ್ಚಿದ್ದಾರೆ. ಯಾಕೆಂದರೆ ಅವರು ಯಾರನ್ನೂ ನಂಬುವ ಸ್ಥಿತಿಯಲ್ಲಿರುವುದಿಲ್ಲ, ಹಿಂದೆ ಅನುಭವಿಸಿದ ನೋವುಗಳು, ದ್ರೋಹ ಅವರನ್ನು ಪದೇ ಪದೇ ಕಾಡುತ್ತಿರುತ್ತದೆ.

ನಾವು ಒಂಟಿ ತನಕ್ಕೆ ಹೆದರುವುದಷ್ಟೇ ಅಲ್ಲದೆ ನಮ್ಮ ಸಂಗಾತಿಯನ್ನು ನಿರಾಶೆಗೊಳಿಸುತ್ತೇವೆ. ಸಮಾಜ, ಕುಟುಂಬ, ಸಂಗಾತಿ ಎಲ್ಲರಿಂದಲೂ ಓಡುತ್ತಲೇ ಇರುತ್ತೇವೆ.

ಎಲ್ಲರೂ ಒಂದೇ ರೀತಿಯಲ್ಲ: ಎಲ್ಲರೂ ಒಂದೇ ರೀತಿ ಇರುವುದಿಲ್ಲ ಹಾಗಾಗಿ ಒಬ್ಬರು ಮೋಸ ಮಾಡಿದರೆಂದು ಇನ್ನೊಬ್ಬರನ್ನು ದ್ವೇಷಿಸುವುದು ಅಥವಾ ದೂರವಿಡುವುದು ಒಳ್ಳೆಯದಲ್ಲ. ಅವರಿಗೂ ಅವಕಾಶವನ್ನು ಕೊಟ್ಟು ನೋಡಿ.

ಬೇರೆಯವರ ಭಾವನೆಗಳಿಗೂ ಬೆಲೆ ಕೊಡಿ: ನಿಮ್ಮ ಹಾಗೆ ಬೇರೆಯವರಿಗೂ ಅವರದ್ದೇ ಆದ ಭಾವನೆ, ಕನಸುಗಳಿರುತ್ತದೆ ಎಂದು ಅರ್ಥ ಮಾಡಿಕೊಳ್ಳಿ, ನಿಮ್ಮ ಸಂಗಾತಿ ಜತೆಗೆ ನೀವು ಅನುಭವಿಸಿದ ಕಷ್ಟಗಳ ಬಗ್ಗೆ ಹೇಳಿಕೊಳ್ಳಿ.

ಇಂದು ಹೇಗಿರುತ್ತೇವೆ ಎಂಬುದು ಮುಖ್ಯ: ಈ ಹಿಂದೆ ನಡೆದ ಘಟನೆಗಳನ್ನು ಎಲ್ಲರೂ ಮರೆತಿರುತ್ತಾರೆ, ಹಾಗಾಗಿ ಹಳೆಯ ನೆನಪುಗಳನ್ನಿಟ್ಟುಕೊಂಡು ಕೊರಗುವುದಕ್ಕಿಂತ ನೀವು ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಇಂದು ನೀವು ಹೇಗಿರುತ್ತೀರಿ ಎಂಬುದೇ ಮುಖ್ಯವಾಗುತ್ತದೆ.