ನಿಮ್ಮಲ್ಲಿ ಲೈಂಗಿಕ ಶಕ್ತಿಯನ್ನು ತುಂಬುತ್ತದೆ ಈ ಯೋಗಾಸನ
ಹಸಿವು, ಬಾಯಾರಿಕೆಯಂತೆಯೇ ಲೈಂಗಿಕ ಬಯಕೆಯೂ ಪ್ರತಿ ಜೀವಿಯಲ್ಲಿಯೂ ಸರ್ವೇ ಸಾಮಾನ್ಯವಾದ ವಿಚಾರ. ಆದರೆ ಇಂದಿನ ಒತ್ತಡಭರಿತ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಲೈಂಗಿಕ ಜೀವನದ ಮೇಲೂ ನಾನಾ ರೀತಿಯ ಪರಿಣಾಮಗಳನ್ನು ಬೀರುತ್ತಿದೆ. ಹೀಗಾಗಿ ಈ ಕೆಲವು ಯೋಗಾಸನಗಳನ್ನು ದಿನ ನಿತ್ಯ ಜೀವನದಲ್ಲಿ ಪಾಲಿಸಿಕೊಂಡು ಬಂದರೆ ವೈವಾಹಿಕ ಜೀವನದಲ್ಲಿ ಲೈಂಗಿಕತೆಯೂ ವರವಾಗುವುದರಲ್ಲಿ ಎರಡು ಮಾತಿಲ್ಲ.
ಮದುವೆಯೆನ್ನುವ ಬಂಧನಕ್ಕೆ ಒಳಪಟ್ಟ ಮೇಲೆ ಕೆಲವೇ ಭಾವನಾತ್ಮಕತೆ ಮಾತ್ರ ವಲ್ಲದೇ ದೈಹಿಕ ಸಂಬಂಧವು ಬಂಧವನ್ನು ಗಟ್ಟಿಗೊಳಿಸಲು ಸಹಾಯಕವಾಗಿದೆ. ಲೈಂಗಿಕ ಕ್ರಿಯೆಯೂ ಸಂಗಾತಿಗೆ ತೋರಲಿರುವ ಕಾಳಜಿ, ಆಕರ್ಷಣೆಯೇ ಆಗಿದ್ದು ಈ ಕಾಳಜಿಯನ್ನು ದೈಹಿಕರೂಪದಲ್ಲಿ ನಿರ್ವಹಿಸುವುದಾಗಿರುತ್ತದೆ. ಆದರೆ ಹೆಚ್ಚಿನವರು ಈ ದೈಹಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಪತ್ನಿಯನ್ನು ಖುಷಿ ಪಡಿಸಲು ವಿಫಲರಾಗುತ್ತಾರೆ. ಆದರೆ ಈ ಯೋಗಾಸನಗಳನ್ನು ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.
* ಸೇತು ಬಂಧ ಸರ್ವಾಸನ : ಈ ಆಸನದ ಭಂಗಿಯು ಸ್ನಾಯುಗಳು, ಮತ್ತು ಮಂಡಿಗಳನ್ನು ಬಲಪಡಿಸುತ್ತದೆ. ಹಾಗೂ ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
* ಬದ್ಧ ಕೋನಾಸನ : ಚಿಟ್ಟೆ ಭಂಗಿಯ ಈ ಆಸನವು ಒಳ ತೊಡೆಗಳು ಮತ್ತು ಸೊಂಟವನ್ನು ವಿಸ್ತರಿಸುತ್ತದೆ. ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ ಲೈಂಗಿಕ ಸಮಸ್ಯೆಯನ್ನು ನಿವಾರಿಸುತ್ತದೆ.
* ಆನಂದ ಬಾಲಾಸನ : ಈ ಭಂಗಿಯು ಸೊಂಟ, ತೊಡೆಸಂದು ಮತ್ತು ಕೆಳ ಬೆನ್ನನ್ನು ವಿಸ್ತರಿಸುತ್ತದೆ. ದೇಹದ ಈ ಭಾಗಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ದೇಹದ ಸ್ಥಿರತೆಯನ್ನು ಕಾಪಾಡುತ್ತದೆ.
* ಫಲಕಾಸನ : ಈ ಆಸನವನ್ನು ದಿನನಿತ್ಯ ಮಾಡುವುದರಿಂದ ತೋಳುಗಳು ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಒಟ್ಟಾರೆ ದೇಹದ ಸ್ಥಿರತೆ ಹಾಗೂ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
* ನೌಕಾಸನ : ದೇಹವನ್ನು ದೋಣಿಯಾಕಾರದಲ್ಲಿ ಇರಿಸುವ ಆಸನವಾಗಿದ್ದು ಇದು ಒತ್ತಡವನ್ನು ನಿವಾರಿಸುತ್ತದೆ. ಆರೋಗ್ಯ ಸಮಸ್ಯೆಯನ್ನು ದೂರ ಮಾಡಿ ಹೊಟ್ಟೆಯ ಸ್ನಾಯುಗಳು ಮತ್ತು ಹಿಂಭಾಗದ ಸ್ನಾಯುಗಳನ್ನು ಬಲಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಶೂಟ್ಗೆ ಬೆಂಗಳೂರಿನ ಹೇಳಿ ಮಾಡಿಸಿದ ಸ್ಥಳಗಳಿವು
* ಮಾರ್ಜರಿಯಾಸನ : ಈ ಆಸನವನ್ನು ದಿನನಿತ್ಯ ಮಾಡುವುದರಿಂದ ಬೆನ್ನುಮೂಳೆಯನ್ನು ಬೆಚ್ಚಗಾಗಿಸುತ್ತದೆ. ಹಾಗೂ ಉತ್ಸಾಹವನ್ನು ಉತ್ತೇಜಿಸುತ್ತದೆ.
* ವೀರಭದ್ರಾಸ : ದೇಹದ ಅಂಗಗಳಿಗೆ ಶಕ್ತಿ ಪೂರೈಸುವುದಲ್ಲದೆ, ಸೊಂಟ, ತೊಡೆಸಂದು ಮತ್ತು ಭುಜಗಳನ್ನು ವಿಸ್ತರಿಸುತ್ತದೆ. ಈ ಆಸನದಿಂದ ಎದೆ ಮತ್ತು ಶ್ವಾಸಕೋಶ ತೆರೆಯುವುದರೊಂದಿಗೆ ದೇಹಕ್ಕೆ ಸ್ಥಿರತೆಯನ್ನು ಒದಗಿಸುತ್ತದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ