Turmeric Face pack
ಇಂದಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ಸೇರಿದಂತೆ ಹೀಗೆ ನಾನಾ ಕಾರಣದಿಂದಾಗಿ ಸಹಜವಾಗಿಯೇ ತ್ವಚೆಯ ಸೌಂದರ್ಯವು ಕಡಿಮೆಯಾಗುತ್ತಿದೆ. ಜಾಹಿರಾತಿನಲ್ಲಿ ತೋರಿಸುವ ಸೌಂದರ್ಯವರ್ಧಕಗಳನ್ನು ಖರೀದಿಸಿ ಸೌಂದರ್ಯವನ್ನು ಕಾಪಾಡುವವರು ಹೆಚ್ಚಾಗಿದ್ದಾರೆ. ಇನ್ನು ಕೆಲವರು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಕೆಲವರು ಮುಖಕ್ಕೆ ಅರಿಶಿನವನ್ನು ಹಚ್ಚುತ್ತಾರೆ. ಅರಶಿನವು ಸೋಂಕು ನಿವಾರಕ ಗುಣವನ್ನು ಹೊಂದಿದ್ದು, ಚರ್ಮದ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.
- ಮುಖಕ್ಕೆ ಅರಿಶಿನವನ್ನು ಹಚ್ಚಿದ ನಂತರ ಬಿಸಿಲಿಗೆ ಹೋಗಬೇಡಿ. ಇದರಿಂದ ಚರ್ಮ ಕಪ್ಪಾಗುತ್ತದೆ.
- ಬೇರೆ ಪದಾರ್ಥಗಳ ಜೊತೆಗೆ ಬೆರೆಸಿ ಮುಖಕ್ಕೆ ಹಚ್ಚುವುದು ಒಳ್ಳೆಯದಲ್ಲ. ಇದು ಚರ್ಮದ ಮೇಲೆ ಅಡ್ಡಪರಿಣಾಮಗಳನ್ನು ಬೀರುವ ಸಾಧ್ಯತೆಯು ಹೆಚ್ಚಿರುತ್ತದೆ.
- ಮುಖಕ್ಕೆ ಅರಿಶಿನವನ್ನು ಹಚ್ಚಿದ ಬಳಿಕ ಮುಖವನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯದಿರಿ. ಮುಖವನ್ನು ಸ್ವಚ್ಛವಾಗಿ ತೊಳೆಯದಿದ್ದರೆ ತುರಿಕೆ ಹಾಗೂ ಚರ್ಮದಲ್ಲಿ ಕಿರಿಕಿರಿಯು ಉಂಟಾಗುತ್ತದೆ.
- ಅರಶಿನ ಫೇಸ್ ಪ್ಯಾಕ್ ಹೆಚ್ಚು ಸಮಯ ಇಡುವುದರಿಂದ, ಮುಖವು ಹಳದಿ ಕಲೆಗಳು ಉಳಿಯುವುದಲ್ಲದೆ, ಮೊಡವೆಗಳ ಸಮಸ್ಯೆಗಳು ಬರುತ್ತದೆ.
- ಅರಶಿನವನ್ನು ಮುಖಕ್ಕೆ ಹಾಕಿ ತೊಳೆಯುವಾಗ ಫೇಸ್ ವಾಶ್ ಬಳಸುವುದು ಒಳ್ಳೆಯದಲ್ಲ. ಈ ಫೇಸ್ ವಾಶ್ ಅರಶಿನದ ಗುಣವನ್ನು ಕಡಿಮೆಗೊಳಿಸಿ ತ್ವಚೆಯಲ್ಲಿ ಈ ಅರಶಿನದ ಸತ್ವವನ್ನು ಹೋಗಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ