ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 23 ರಂದು ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಸೇವೆಯ ಮೌಲ್ಯದ ಜೊತೆಗೆ ಸಾರ್ವಜನಿಕರು ವಹಿಸುವ ನಿರ್ಣಾಯಕ ಪಾತ್ರ ಮತ್ತು ಅವರನ್ನು ಗೌರವಿಸುವುದು ಈ ನಿರ್ದಿಷ್ಟ ದಿನದ ಪ್ರಮುಖ ಗುರಿಯಾಗಿದೆ. ಇದರ ಜೊತೆಗೆ ಸಾರ್ವಜನಿಕ ವಲಯದಲ್ಲಿ ಯುವಜನತೆಯನ್ನು ಉದ್ಯೋಗ ಪಡೆಯಲು ಪ್ರೋತ್ಸಾಹಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ವಿಶ್ವಸಂಸ್ಥೆಯ ಮಹಾಧಿವೇಶನವು ಸಾರ್ವಜನಿಕ ಸೇವಾ ದಿನವನ್ನಾಗಿ ಆಚರಿಸಲು ನಿರ್ಧರಿಸದ್ದು, 2002 ರ ಡಿಸೆಂಬರ್ 20 ರಂದು, ಈ ನಿರ್ಣಯವನ್ನು ಅಂಗೀಕರಿಸುವ ಮೂಲಕ ಜೂನ್ 23 ಅನ್ನು ಸಾರ್ವಜನಿಕ ಸೇವಾ ದಿನವೆಂದು ಅಧಿಕೃತವಾಗಿ ಘೋಷಿಸಿತು. ಈ ಮಹತ್ವದ ದಿನದ ಮಾನ್ಯತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ಸೇವೆಯ ಮಹತ್ವವನ್ನು ಜನತೆಗೆ ತಿಳಿಸಲು, ವಿಶ್ವಸಂಸ್ಥೆಯು 2003 ರಲ್ಲಿ ಯುಎನ್ ಪಬ್ಲಿಕ್ ಸರ್ವಿಸ್ ಅವಾರ್ಡ್ಸ್ (ಯುಎನ್ಪಿಎಸ್ಎ) ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಇದನ್ನೂ ಓದಿ: ನೀವು ಅನಿಷ್ಟರಲ್ಲ, ನಮ್ಮೊಳಗೆ ನೀವು ಒಬ್ಬರು
ಪ್ರತಿ ವರ್ಷವೂ ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ಉನ್ನತ ಮಟ್ಟದ ಸಭೆ ನಡೆಯುತ್ತದೆ. ಈ ಬಗ್ಗೆ ಅನೇಕ ರೀತಿಯ ಚರ್ಚೆಗಳನ್ನು ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಸಭೆಯಲ್ಲಿ ಸರ್ಕಾರಗಳು ಎದುರಿಸುತ್ತಿರುವ ಸಮಕಾಲೀನ ಸವಾಲುಗಳನ್ನು ಮತ್ತು ಪರಿಹಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: