AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಒಂದೇ ಬೈಕ್​​​​ನಲ್ಲಿ ಹದಿನೈದು ಮಕ್ಕಳು, ಇದೇನು ಬೈಕೋ, ಅಲ್ಲ ಪುಷ್ಪಕ ವಿಮಾನವೋ

ಕೆಲವೊಂದು ನಮ್ಮ ಮೈ ಜುಮ್ಮ್ ಎನ್ನುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದೇ ಒಂದು ವಿಡಿಯೋ ವೈರಲ್​​ ಆಗಿದೆ. ವ್ಯಕ್ತಿಯೊಬ್ಬ ಬೈಕ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಆ ವ್ಯಕ್ತಿ ಒಬ್ಬನೇ ಬೈಕ್ ನಲ್ಲಿ ಕುಳಿತಿಲ್ಲ, ಬದಲಾಗಿ ಹದಿನೈದಕ್ಕೂ ಹೆಚ್ಚು ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡ ಜಾಲಿ ರೈಡ್ ಹೋಗುತ್ತಿದ್ದಾನೆ. ಈ ವೈರಲ್ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Viral Video : ಒಂದೇ ಬೈಕ್​​​​ನಲ್ಲಿ ಹದಿನೈದು ಮಕ್ಕಳು, ಇದೇನು ಬೈಕೋ, ಅಲ್ಲ ಪುಷ್ಪಕ ವಿಮಾನವೋ
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on:Jun 22, 2024 | 12:56 PM

Share

ಇತ್ತೀಚೆಗಿನ ದಿನಗಳಲ್ಲಿ ಬೈಕ್ ನಲ್ಲಿ ಸ್ಟಂಟ್ ಮಾಡುವ ಕ್ರೇಜ್ ವಿಪರೀತವಾಗಿದೆ. ಎಷ್ಟೋ ಯುವಕರು ಈ ಮೂಲಕ ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳುತ್ತಿದ್ದಾರೆ. ಹೌದು, ಸಾಮಾನ್ಯವಾಗಿ ಒಂದು ಬೈಕ್ ನಲ್ಲಿ ಇಬ್ಬರಿಗೆ ಮಾತ್ರ ಓಡಾಡಲು ಅವಕಾಶವಿದೆ. ಅಪ್ಪಿ ತಪ್ಪಿಯೂ ಮೂರು ಜನ ಏನಾದರೂ ಬೈಕ್ ನಲ್ಲಿ ರೈಡ್ ಹೋಗುವ ವೇಳೆ ಪೊಲೀಸರ ಕಣ್ಣಿಗೆ ಬಿದ್ದರೆ ದಂಡ ಬೀಳೊದು ಗ್ಯಾರಂಟಿ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಒಂದೇ ಬೈಕ್ ನಲ್ಲಿ ಹನ್ನೆರಡಕ್ಕೂ ಹೆಚ್ಚು ಜನರು ಕುಳಿತುಕೊಂಡಿದ್ದಾರೆ. ಬೈಕ್ ಸವಾರರು ಮಕ್ಕಳನ್ನು ಒಂದೇ ಬೈಕ್ ನಲ್ಲಿ ಕೂರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದಾನೆ. ಈ ವಿಡಿಯೋ ನೋಡಿ ನೆಟ್ಟಿಗರು ಗಾಬರಿಯಾಗಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ಒಂದೇ ಬೈಕ್ ನಲ್ಲಿ ಹಲವರು ಕುಳಿತಿರುವುದನ್ನು ಕಾಣಬಹುದು. ಬೈಕ್ ಸೀಟಿನ ಮೇಲಷ್ಟೇ ಅಲ್ಲ. ಕಾಲಿಡುವ ಜಾಗದಲ್ಲಿ, ಭುಜದ ಮೇಲೆ, ಬೈಕ್‌ನ ಮಡ್‌-ಗಾರ್ಡ್‌ ಮೇಲೆ ಮಕ್ಕಳೂ ಕುಳಿತಿರುವುದನ್ನು ಕಾಣಬಹುದು. ಯುವಕನು ಆರಾಮಾಗಿ ಬೈಕ್ ಓಡಿಸುತ್ತಿದ್ದೂ, ಮಕ್ಕಳು ಕೂಡ ಖುಷಿಯಿಂದ ಹಾಡು ಹಾಡುತ್ತ ಜಾಲಿ ರೈಡನ್ನು ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿಲಿಂಡರ್​​ ಡ್ಯಾನ್ಸ್​​​; 2 ಗ್ಯಾಸ್ ಸಿಲಿಂಡರ್ ತಲೆ ಮೇಲಿಟ್ಟು ಮಹಿಳೆಯ ರೀಲ್ಸ್​​​​​​

ವೈರಲ್​​ ವಿಡಿಯೋ

ಈ ವೀಡಿಯೊವನ್ನು @NishiChoudhar15 ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಈ ವಿಡಿಯೋವು ಇಪ್ಪತ್ತನಾಲ್ಕು ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತವಾಗಿವೆ. ನೆಟ್ಟಿಗರು ಈತನ ವಿರುದ್ಧ ಗರಂ ಆಗಿರುವುದನ್ನು ಕಾಮೆಂಟ್ ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಒಬ್ಬ ಬಳಕೆದಾರನು, ‘ಬೈಕೋ ಪುಷ್ಪಕ ವಿಮಾನನೋ’ ಎಂದು ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬನು, ‘ಅನೇಕರು ತಮ್ಮ ಹಾಗೂ ಇತರರ ಪ್ರಾಣಕ್ಕೂ ಅಪಾಯವನ್ನುಂಟು ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Sat, 22 June 24