ಅಪ್ಪ ಇದು ಕಾಶ್ಮೀರ ಅಲ್ಲ, ಸ್ವರ್ಗ ಎಂದ ಪುಟ್ಟ ಹುಡುಗಿ, ಕ್ಯೂಟ್​​​​ ವಿಡಿಯೋ ಇಲ್ಲಿದೆ

ಪಂಜಾಬ್​​​ನ ಪುಟ್ಟ ಹುಡುಗಿ ಕಾಶ್ಮೀರದ ಸೌಂದರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಅಪ್ಪ ಇದು ಕಾಶ್ಮೀರ ಅಲ್ಲ, ಸ್ವರ್ಗ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಪುಟ್ಟ ಬಾಲಕಿ ಹೆಸರು ಪಿಹು, ಈಕೆ ಪಂಜಾಬ್‌ನ ಜಲಂಧರ್‌ನಿಂದ ಕಾಶ್ಮೀರಕ್ಕೆ ಪ್ರವಾಸ ಬಂದಿದ್ದಾಳೆ. ತನ್ನ ತಂದೆ ಜತೆಗೆ ಅಲ್ಲಿ ಕಳೆದ ಕ್ಷಣಗಳನ್ನು ಕ್ಯೂಟ್​​​ ಆಗಿ ಹಂಚಿಕೊಂಡಿದ್ದಾಳೆ.

ಅಪ್ಪ ಇದು ಕಾಶ್ಮೀರ ಅಲ್ಲ, ಸ್ವರ್ಗ ಎಂದ ಪುಟ್ಟ ಹುಡುಗಿ, ಕ್ಯೂಟ್​​​​ ವಿಡಿಯೋ ಇಲ್ಲಿದೆ
ವೈರಲ್​​ ವಿಡಿಯೋ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 22, 2024 | 9:44 AM

ಈ ಹಿಂದೆ ಕಾಶ್ಮೀರ ಎಂದರೆ ಒಂದು ರೀತಿಯ ಭಯವಿತ್ತು, ಅಲ್ಲಿ ಭಯೋತ್ಪಾದನೆ, ಹಿಂಸೆ, ಹೀಗೆ ಅನೇಕ ಕೃತ್ಯಗಳಿಂದ ಕಾಶ್ಮೀರ ಬಗ್ಗೆ ಆತಂಕ ಇತ್ತು, ಆದರೆ ಇದೀಗ ಅದು ಯಾವುದು ಇಲ್ಲ. ಇದಕ್ಕೆ ಸಾಕ್ಷಿ ಈ ಪಂಜಾಬ್​​​ ಪುಟ್ಟ ಹುಡುಗಿಯ ವಿಡಿಯೋ. “ಪಾಪಾ, ಕಾಶ್ಮೀರ್ ನಹಿಂ ಹೈ, ಜನ್ನತ್ ಹೈ ಜನ್ನತ್” (ಅಪ್ಪ ಇದು ಕಾಶ್ಮೀರ ಅಲ್ಲ, ಇದು ಸ್ವರ್ಗ) ಎಂದು ಪಂಜಾಬ್​​​​ನ ಪುಟ್ಟ ಬಾಲಕಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಈ ಪುಟ್ಟ ಹುಡುಗಿ ಕಾಶ್ಮೀರಕ್ಕೆ ಪ್ರವಾಸ ಮಾಡಿದ್ದಾಳೆ. ಅಲ್ಲಿನ ಸೌಂದರ್ಯವನ್ನು ನೋಡುತ್ತಾ, ಅಲ್ಲಿ ಕಳೆದ ಹಾಸ್ಯ, ನೆಮ್ಮದಿಯ ಕ್ಷಣಗಳನ್ನು ತನ್ನ ತಂದೆ ಜತೆ ಹೇಳಿಕೊಂಡಿದ್ದಾಳೆ. ಈ ಪುಟ್ಟ ಬಾಲಕಿ ಹೆಸರು ಪಿಹು, ಈಕೆ ಪಂಜಾಬ್‌ನ ಜಲಂಧರ್‌ನಿಂದ ಕಾಶ್ಮೀರಕ್ಕೆ ಪ್ರವಾಸ ಬಂದಿದ್ದಾಳೆ. ತನ್ನ ತಂದೆ ಜತೆಗೆ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಈ ರಜೆಯಲ್ಲಿ ಅಪ್ಪ ಕೂಲ್​​ ಆಗಿರುವ ಸ್ಥಳಕ್ಕೆ ಹೋಗು ಅಂದರೆ ಕಾಶ್ಮೀರಕ್ಕೆ ಹೋಗುವ, ಈ ಪಂಜಾಬ್​​​ನ ಬಿಸಿಲು ಸಾಕಾಗಿದೆ ಎಂದು ಹೇಳಿದ್ದಾಳೆ. ತನ್ನ ಆಸೆಯನ್ನು ಅಪ್ಪ ಈಡೇರಿಸಿದ್ದಾರೆ. ಇಂದು ನಾವು ಕಾಶ್ಮೀರಕ್ಕೆ ಬಂದಿದ್ದೇವೆ. ಇಲ್ಲಿ ತುಂಬಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಇನ್ನು ಈ ವಿಡಿಯೋದಲ್ಲಿ ಆಕೆಯ ತಂದೆ ನೀವು ಪ್ರವಾಸವನ್ನು ಆನಂದಿಸುತ್ತಿದ್ದೀರಾ ಎಂದು ಕೇಳುತ್ತಾರೆ. ಅದಕ್ಕೆ ಆ ಬಾಲಕಿ ಹಾನ್ ಜಿ, ಬಹುತ್ ಜ್ಯಾದಾ (ಹೌದು, ತುಂಬಾ), “ಪಾಪಾ ಇದು ಕಾಶ್ಮೀರ ಅಲ್ಲ, ಸ್ವರ್ಗ ಎಂದು ಹೇಳಿದ್ದಾಳೆ. ಆಕೆ ತನ್ನ ಕುಟುಂಬದ ಜತೆಗೆ ಪ್ರಸಿದ್ಧ ದಾಲ್ ಸರೋವರದಲ್ಲಿ ದೋಣಿ ವಿಹಾರ ಮಾಡುತ್ತಿರುವಾಗ ಈ ವಿಡಿಯೋ ಮಾಡಲಾಗಿದೆ. ಕಣಿವೆಗೆ ತನ್ನ ಮೊದಲ ಪ್ರವಾಸವಾಗಿರುವುದರಿಂದ ಆಕೆ ಅಲ್ಲಿನ ಸ್ಥಳಗಳನ್ನು ತುಂಬಾ ಇಷ್ಟಪಟ್ಟಿದ್ದಾಳೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ; ಭಾರತದ ಗಡಿಯಲ್ಲಿ ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು

ನಾನು ಕಾಶ್ಮೀರವನ್ನು ಪ್ರೀತಿಸುತ್ತೇನೆ. ನಾನು ಮೊದಲ ಬಾರಿಗೆ ಕಾಶ್ಮೀರಕ್ಕೆ ಬಂದಿದ್ದೇನೆ. ನೀವೂ ಕಾಶ್ಮೀರಕ್ಕೆ ಬಂದಿದ್ದೀರಾ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ ಎಂದು ಆಕೆ ಹೇಳಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾವಿರಾರೂ ಮಂದಿ ವೀಕ್ಷಣೆ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ