ಭಾರತೀಯ ಕಾರ್ಮಿಕರ ಶೋಷಣೆ: ಹಿಂದೂಜಾ ಕುಟುಂಬದವರಿಗೆ ಸ್ವಿಸ್ ಕೋರ್ಟ್​​ನಿಂದ 4 ವರ್ಷ ಜೈಲು ಶಿಕ್ಷೆ

ಭಾರತೀಯ ಮೂಲದವರೇ ಆದ ಹಿಂದೂಜಾ ಕುಟುಂಬದವರಿಗೀಗ ಸ್ವಿಜರ್ಲೆಂಡ್​ನಲ್ಲಿ ಸಂಕಷ್ಟ ಎದುರಾಗಿದೆ. ಇದಕ್ಕೆ ಕಾರಣ ಅವರು ಭಾರತದಿಂದ ಮನೆಕೆಲಸಕ್ಕೆಂದು ಕರೆದುಕೊಂಡು ಹೋದ ಕಾರ್ಮಿಕರ ಮೇಲೆ ಮಾಡಿರುವ ಶೋಷಣೆ. ಹಾಗಾದರೆ, ಹಿಂದೂಜಾ ಕುಟುಂದವರ ಮೇಲಿನ ಆರೋಪಗಳು ಏನೇನು? ಭಾರತದಲ್ಲಿ ಅವರ ಉದ್ಯಮ ಹೇಗಿದೆ? ಎಲ್ಲ ವಿವರ ಇಲ್ಲಿದೆ.

ಭಾರತೀಯ ಕಾರ್ಮಿಕರ ಶೋಷಣೆ: ಹಿಂದೂಜಾ ಕುಟುಂಬದವರಿಗೆ ಸ್ವಿಸ್ ಕೋರ್ಟ್​​ನಿಂದ 4 ವರ್ಷ ಜೈಲು ಶಿಕ್ಷೆ
ಭಾರತೀಯ ಕಾರ್ಮಿಕರ ಶೋಷಣೆ: ಹಿಂದೂಜಾ ಕುಟುಂಬದವರಿಗೆ ಸ್ವಿಸ್ ಕೋರ್ಟ್​​ನಿಂದ 4 ವರ್ಷ ಜೈಲು ಶಿಕ್ಷೆ
Follow us
Ganapathi Sharma
|

Updated on: Jun 22, 2024 | 11:35 AM

ಜಿನೀವಾ, ಜೂನ್ 22: ಭಾರತದಿಂದ ಕರೆದುಕೊಂಡು ಹೋದ ಕಾರ್ಮಿಕರನ್ನು ಶೋಷಣೆ ಮಾಡಿದ ಆರೋಪ ಸಾಬೀತಾದ ಕಾರಣ ಬ್ರಿಟನ್​​ನ ಶ್ರೀಮಂತ ಉದ್ಯಮ ಕುಟುಂಬವಾದ ಹಿಂದೂಜಾದ (Hinduja Family) ನಾಲ್ವರಿಗೆ ಸ್ವಿಸ್ ನ್ಯಾಯಾಲಯ (Swiss court) 4 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಕುಟುಂಬದ ಪ್ರಕಾಶ್ ಹಿಂದೂಜಾ, (78), ಅವರ ಪತ್ನಿ ಕಮಲ್ (75) ಇವರಿಗೆ ತಲಾ ನಾಲ್ಕು ವರ್ಷ ಮತ್ತು ಆರು ತಿಂಗಳ ಶಿಕ್ಷೆ ಪ್ರಕಟಿಸಲಾಗಿದೆ. ಅವರ ಮಗ ಅಜಯ್ ಮತ್ತು ಅವರ ಪತ್ನಿ ನಮ್ರತಾಗೆ ತಲಾ ನಾಲ್ಕು ವರ್ಷಗಳ ಅವಧಿ ಶಿಕ್ಷೆ ವಿಧಿಸಲಾಗಿದೆ.

ಕುಟುಂಬವು ಜಿನೀವಾದಲ್ಲಿ ಹೊಂದಿರುವ ಮಹಲಿನಲ್ಲಿ ಕೆಲಸಕ್ಕಿದ್ದವರನ್ನು ಶೋಷಣೆ ಮಾಡಿದ ಆರೋಪದಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ. ಇದನ್ನು ಪ್ರಶ್ನಿಸಿರುವ ಹಿಂದೂಜಾ ಕುಟುಂಬ ಈಗ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ಹಿಂದೂಜಾ ಕುಟುಂಬದ ಮೇಲೆ ಏನೆಲ್ಲ ಆರೋಪ?

ಭಾರತದಿಂದ ಮನೆ ಕೆಲಸಕ್ಕೆಂದು ಜಿನೀವಾಗೆ ಕರೆದುಕೊಂಡು ಹೋದವರ ಪಾಸ್‌ಪೋರ್ಟ್‌ಗಳನ್ನು ಹಿಂದೂಜಾ ಕುಟುಂಬದವರು ಮುಟ್ಟುಗೋಲು ಹಾಕಿಕೊಂಡಿದ್ದರು. ಅಷ್ಟೇ ಅಲ್ಲದೆ, ಆ ಕಾರ್ಮಿಕರ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು. ಜತೆಗೆ ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂಬ ಆರೋಪಗಳ ಅಡಿ ದೂರು ದಾಖಲಾಗಿತ್ತು. ಆರೋಪಗಳು ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಸಿಬ್ಬಂದಿಗಿಂತಲೂ ಸಾಕು ನಾಯಿಗೇ ಹೆಚ್ಚು ಖರ್ಚು!

ಹಿಂದೂಜಾ ಕುಟುಂಬದವರು ಮನೆ ಕೆಲಸದ ಸಿಬ್ಬಂದಿಯನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಸಿಬ್ಬಂದಿಗಿಂತಲೂ ಸಾಕು ನಾಯಿಗೇ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಜಿನೀವಾ ಪ್ರಾಸಿಕ್ಯೂಟರ್ ಯೆವ್ಸ್ ಬರ್ಟೊಸ್ಸಾ ಆರೋಪಿಸಿದ್ದರು. ಜತೆಗೆ, ಪ್ರಕಾಶ್ ಮತ್ತು ಕಮಲ್‌ಗೆ ಐದೂವರೆ ವರ್ಷಗಳ ಜೈಲು ಶಿಕ್ಷೆಯನ್ನು ನೀಡುವಂತೆ ವಾದ ಮಂಡಿಸಿದ್ದರು.

ಇದನ್ನೂ ಓದಿ: ಕಿಮ್ ಜಾಂಗ್ ಉನ್​​ನ್ನು ಐಷಾರಾಮಿ ಕಾರಲ್ಲಿ ಕೂರಿಸಿ ಡ್ರೈವ್ ಮಾಡಿದ ರಷ್ಯಾ ಅಧ್ಯಕ್ಷ ಪುಟಿನ್

ಭಾರತದಲ್ಲಿ ಹಿಂದೂಜಾ ಉದ್ಯಮ

ಭಾರತೀಯ ಮೂಲದವರೇ ಆದ ಹಿಂದೂಜಾ ಕುಟುಂಬದ ಉದ್ಯಮ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿದೆ. ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಕೂಡ ಹಿಂದೂಜಾ ಗ್ರೂಪ್ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತದಲ್ಲಿ ಪ್ರಸಿದ್ಧ ‘ಅಶೋಕ್ ಲೈಲ್ಯಾಂಡ್​’ ಬ್ರ್ಯಾಂಡ್​ನಲ್ಲಿ ಟ್ರಕ್, ಲಾರಿ, ಬಸ್​​ಗಳ ತಯಾರಿ ಹಾಗೂ ಮಾರಾಟದಲ್ಲಿ ಹಿಂದೂಜಾ ಗ್ರೂಪ್ ಮುಂಚೂಣಿಯಲ್ಲಿದೆ.

ಸದ್ಯ ಬ್ರಿಟನ್​​ನಲ್ಲಿ ನೆಲೆಯಾಗಿರುವ ಹಿಂದೂಜಾ ಕುಟುಂಬ ಅಲ್ಲಿನ ಅತ್ಯಂತ ಶ್ರೀಮಂತ ಕಟುಂಬಗಳಲ್ಲಿ ಒಂದಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್