Kiss Day 2025 : ಮತ್ತೇರಿಸುವ ಮುತ್ತಿಗೂ ಇದೆ ಒಂದು ದಿನ, ಈ ದಿನದ ಇತಿಹಾಸ, ಮಹತ್ವವೇನು? ಇಲ್ಲಿದೆ ಮಾಹಿತಿ
Valentine' s Week 2025 : ಫೆಬ್ರವರಿ 7 ರಿಂದ 14 ರವರೆಗೆ ಪ್ರೇಮಿಗಳ ವಾರವಾಗಿದ್ದು, ಪ್ರತಿಯೊಂದು ದಿನವು ಒಂದೊಂದು ವಿಶೇಷತೆಯಿಂದ ಕೂಡಿದೆ. ಹೌದು, ಪ್ರೇಮಿಗಳ ವಾರದ 7ನೇ ದಿನವಾದ ಫೆಬ್ರವರಿ 13 ರಂದು ಕಿಸ್ ಡೇ ಆಚರಿಸಲಾಗುತ್ತದೆ. ಈ ದಿನದಂದು ಪ್ರೇಮಿಗಳು, ಸಂಗಾತಿಗಳು ಪರಸ್ಪರ ಚುಂಬನದ ಮೂಲಕ ಪ್ರೀತಿಯನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಈ ಕಿಸ್ ಡೇ ಶುರುವಾದದ್ದು ಯಾವಾಗ? ಈ ದಿನದ ಮಹತ್ವ? ಪ್ರೇಮಿಗಳಿಗೆ ಈ ದಿನದ ಆಚರಣೆ ಮುಖ್ಯ ಯಾಕೆ? ಎನ್ನುವ ಮಾಹಿತಿ ಇಲ್ಲಿದೆ.

ಪ್ರೇಮಿಗಳ ದಿನಕ್ಕೆ ಇನ್ನೇನು ಎರಡು ದಿನಗಳಷ್ಟೇ ಬಾಕಿಯಿವೆ. ಪ್ರೇಮಿಗಳ ವಾರದ ಏಳನೇಯ ದಿನ (ಫೆಬ್ರವರಿ 13) ವನ್ನು ಮುತ್ತಿನ ದಿನವನ್ನಾಗಿ ಆಚರಿಸಲಾಗುತ್ತದೆ.. ಈ ದಿನ ಚುಂಬನದ ಮೂಲಕ ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಮುತ್ತು ನೀಡುವ ಮೂಲಕ ಪ್ರೀತಿಯ ಭಾವನೆ ಜೊತೆಗೆ ಕಾಳಜಿ, ಆರೈಕೆ, ಆಸರೆ ಹಾಗೂ ಭರವಸೆಯನ್ನು ತೋರಿಸಬಹುದಾಗಿದೆ. ಸಿಹಿ ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನದಲ್ಲಿ ಒಂದಾಗಿದ್ದು, ದಾಂಪತ್ಯ ಜೀವನವು ಸುಖಕರವಾಗಿ ಸಾಗಬೇಕಾದರೆ ಬಿಸಿ ಅಪ್ಪುಗೆಯ ಜೊತೆಗೆ ಸಿಹಿ ಮುತ್ತು ಸುರಕ್ಷತೆಯ ಭಾವ ನೀಡುತ್ತದೆ. ಆದರೆ ಈ ದಿನವನ್ನು ಆಚರಿಸುವ ಮುನ್ನ ಈ ದಿನದ ಆಚರಣೆ ಶುರುವಾದದ್ದು ಹೇಗೆ ಎಂದು ತಿಳಿದುಕೊಂಡರೆ ಒಳ್ಳೆಯದು.
ಕಿಸ್ ಡೇ ಇತಿಹಾಸ
ಕಿಸ್ ಡೇ ಅನ್ನು ಇತ್ತೀಚಿನ ಪ್ರವೃತ್ತಿ ಎಂದು ಅನೇಕರು ತಿಳಿದಿದ್ದಾರೆ. ಆದರೆ ಈ ಪ್ರವೃತ್ತಿ ನಿಖರವಾಗಿ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಿವಿಧ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಈ ದಿನವು 20 ನೇ ಶತಮಾನದ ಆರಂಭದಲ್ಲಿ ಜನಪ್ರಿಯವಾಗಲು ಪ್ರಾರಂಭಿಸಿತು. ಚುಂಬನದ ದಿನ ಇಂಗ್ಲೆಂಡ್ನಲ್ಲಿ ಹುಟ್ಟಿಕೊಂಡಿತು. ಅಂದಿನಿಂದ ಈ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ಹೀಗಾಗಿ ಈ ದಿನದಂದು ದಂಪತಿಗಳು ಅಥವಾ ಪ್ರೇಮಿಗಳು ಚುಂಬನದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ವಿವಾಹಿತ ಪುರುಷನಿಗೆ ಇಬ್ಬರು ಹೆಂಡತಿಯರು ಇರಬಹುದೇ? ಭಾರತೀಯ ಕಾನೂನು ಹೇಳೋದೇನು?
ಕಿಸ್ ಡೇ ಮಹತ್ವ ಹಾಗೂ ಆಚರಣೆ
ಪ್ರೀತಿಯಲ್ಲಿ ಬಿದ್ದವರು ಹಾಗೂ ಸಂಗಾತಿಗಳು ಈ ದಿನದಂದು ಚುಂಬನದ ಮೂಲಕ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ತಮ್ಮ ಪ್ರೀತಿಯನ್ನು ತೋರಿಸುವ ಮಾರ್ಗಗಳಲ್ಲಿ ಇದು ಕೂಡ ಒಂದಾಗಿದ್ದು, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಾಯುತ್ತಿದ್ದರೆ ಈ ದಿನವು ಮಹತ್ವದ್ದಾಗಿದೆ. ಈ ಚುಂಬನದ ದಿನವನ್ನು ದಂಪತಿಗಳು ಜೊತೆಗೆ ಸಮಯವನ್ನು ಕಳೆಯುವುದು ಹಾಗೂ ಖಾಸಗಿ ಕ್ಷಣಗಳನ್ನು ಅನುಭವಿಸುವ ಮೂಲಕ ಆಚರಿಸಬಹುದಾಗಿದೆ. ಅದಲ್ಲದೆ, ಚಾಕೊಲೇಟ್‌ಗಳು, ಹೂವುಗಳು ಮತ್ತು ಪ್ರೇಮ ಪತ್ರ ಸೇರಿದಂತೆ ಇನ್ನಿತ್ತರ ಉಡುಗೊರೆಗಳನ್ನು ನೀಡುವ ಮೂಲಕ ಚುಂಬನದ ದಿನವನ್ನು ವಿಭಿನ್ನವಾಗಿ ಆಚರಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




