ವ್ಯಾಲೆಂಟೈನ್ಸ್ ವೀಕ್ 2024 ಸಮೀಪಿಸುತ್ತಿದೆ. ಫೆ. 7ರಿಂದ 14ರವರೆಗೆ ಪ್ರೇಮಿಗಳ ವಾರವೆಂದು ಆಚರಿಸಲಾಗುತ್ತದೆ. ಲವ್ ಬರ್ಡ್ಸ್ ಮತ್ತು ಜೋಡಿಗಳು ತಮ್ಮ ಉತ್ಸಾಹ ಮತ್ತು ಪ್ರೀತಿಯನ್ನು ಆಚರಿಸಲು ಮೊದಲ ದಿನದಂದು ರೋಸ್ ಡೇಯನ್ನಾಗಿ ಮಾಡಲಾಗಿದೆ. ಈ ಸಮಯದಲ್ಲಿ ಗುಲಾಬಿ ಹೂವುಗಳು ಹೆಚ್ಚಾಗಿರುವುದರಿಂದ ಗುಲಾಬಿ ಹೂವುಗಳನ್ನು ತಮ್ಮ ಸಂಗಾತಿಗೆ ನೀಡುವ ಮೂಲಕ ಪ್ರೇಮಿಗಳ ವಾರವನ್ನು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ವಾರದ ಮೊದಲ ದಿನದ ಕೇಂದ್ರಬಿಂದುವೆಂದರೆ ಸುಂದರವಾದ ಗುಲಾಬಿ ಹೂವುಗಳು. ರೋಸ್ ಡೇಯನ್ನು ಯಾವಾಗ ಆಚರಿಸಲಾಗುತ್ತದೆ? ಅದರ ಇತಿಹಾಸ ಮತ್ತು ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ.
ರೋಸ್ ಡೇ ಯಾವಾಗ?:
ರೋಸ್ ಡೇ ಅನ್ನು ಪ್ರತಿ ವರ್ಷವೂ ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ತಮ್ಮ ಭಾವನೆಗಳನ್ನು ತಿಳಿಸುವ ಸಂಕೇತವಾಗಿ ಗುಲಾಬಿ ಹೂವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಂತ ಇದು ಪ್ರೇಮಿಗಳಿಗೆ ಸೀಮಿತವಾದ ದಿನವಲ್ಲ. ನಾವು ಪ್ರೀತಿಸುವ ಅಪ್ಪ-ಅಮ್ಮ ಅಥವಾ ಸ್ನೇಹಿತರಿಗೆ ಕೂಡ ಗುಲಾಬಿ ಹೂವುಗಳನ್ನು ನೀಡಬಹುದು.
ಇದನ್ನೂ ಓದಿ: ಪ್ರೀತಿಯ ಕುರಿತ 5 ವಿಚಿತ್ರ ವೈಜ್ಞಾನಿಕ ಸಿದ್ಧಾಂತಗಳಿವು
ಪ್ರೇಮಿಗಳ ವಾರದ ಮೊದಲ ದಿನದ ಇತಿಹಾಸ ಮತ್ತು ಮಹತ್ವ:
ರೋಮನ್ ಪುರಾಣಗಳಲ್ಲಿ ಗುಲಾಬಿ ಹೂವುಗಳು ರಹಸ್ಯ ಮತ್ತು ಉತ್ಸಾಹದ ಸಂಕೇತವಾಗಿದೆ. ವಿಶೇಷವಾಗಿ ಸೌಂದರ್ಯ ಮತ್ತು ಪ್ರೀತಿಯೊಂದಿಗೆ ಸಂಬಂಧಿಸಿದ ರೋಮನ್ ದೇವತೆಯಾದ ಶುಕ್ರಕ್ಕೆ ಸಂಬಂಧಿಸಿದಂತೆ ಗುಲಾಬಿಯನ್ನು ಬಳಸಲಾಗುತ್ತದೆ. ಅದರ ಪರಿಮಳ ಮತ್ತು ಆಕರ್ಷಕ ವರ್ಣಗಳಿಂದಾಗಿ ಗುಲಾಬಿ ಹೂವುಗಳು ಏಷ್ಯನ್ ಮತ್ತು ಅರಬ್ ಸಂಸ್ಕೃತಿಗಳಂತಹ ಪೂರ್ವ ನಾಗರಿಕತೆಗಳಲ್ಲಿ ಪ್ರೀತಿಯೊಂದಿಗೆ ಸಂಬಂಧ ಹೊಂದಿವೆ. ವಿಕ್ಟೋರಿಯನ್ನರು ತಮ್ಮ ಪ್ರೀತಿಯ ಸಂಕೇತವಾಗಿ ಗುಲಾಬಿ ಹೂವುಗಳನ್ನು ಪ್ರಸ್ತುತಪಡಿಸುವ ಮೂಲಕ ಪರಸ್ಪರ ಪ್ರೀತಿಯನ್ನು ಪ್ರದರ್ಶಿಸುತ್ತಿದ್ದರು. ಆ ಸಮಯದಿಂದ ಗುಲಾಬಿ ಹೂವುಗಳನ್ನು ನೀಡುವುದು ಮತ್ತು ಸ್ವೀಕರಿಸುವುದನ್ನು ಪ್ರತಿ ವರ್ಷ ಫೆಬ್ರವರಿ 7ರಂದು “ಗುಲಾಬಿ ದಿನ” ಎಂದು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: Valentine’s Week List 2024: ರೋಸ್ ದಿನದಿಂದ ಪ್ರೇಮಿಗಳ ದಿನದವರೆಗೆ; ಪ್ರೇಮಿಗಳ ವಾರದ ಬಗ್ಗೆ ನಿಮಗೂ ಗೊತ್ತಿರಲಿ
ವ್ಯಾಲೆಂಟೈನ್ಸ್ ಡೇಗೆ ಕೆಂಪು ಗುಲಾಬಿಗಳು ಸ್ಪಷ್ಟವಾದ ಆಯ್ಕೆಯಾಗಿದ್ದರೂ ರೋಸ್ ಡೇಯಂದು ನಾವು ಕಾಳಜಿ ವಹಿಸುವವರಿಗೆ ವಿವಿಧ ಬಣ್ಣದ ಹೂವುಗಳನ್ನು ನೀಡಬಹುದು. ಬಿಳಿ ಗುಲಾಬಿ ಮುಗ್ಧತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಹಳದಿ ಗುಲಾಬಿ ಸ್ನೇಹವನ್ನು ಪ್ರತಿನಿಧಿಸುತ್ತದೆ. ಕಿತ್ತಳೆ ಬಣ್ಣದ ಗುಲಾಬಿಗಳನ್ನು ಹಂಬಲವನ್ನು ಸೂಚಿಸಲು ಬಳಸಲಾಗುತ್ತದೆ. ಪಿಂಕ್ ಬಣ್ಣದ ಗುಲಾಬಿಗಳನ್ನು ಮೆಚ್ಚುಗೆ ಮತ್ತು ಧನ್ಯವಾದಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Mon, 5 February 24