Kannada News Lifestyle Varamahalakshmi Vrata 2025: Here are some mistakes you should not make during Varamahalakshmi Vrata
Varamahalakshmi Vrata 2025: ವರಮಹಾಲಕ್ಷ್ಮಿ ವ್ರತದಂದು ಮಾಡಲೇಬಾರದ ತಪ್ಪುಗಳು ಇವೆ ನೋಡಿ
ವರಲಕ್ಷ್ಮಿ ಈ ಹೆಸರೇ ಸೂಚಿಸುವಂತೆ ವರವನ್ನು ನೀಡುವ ಲಕ್ಷ್ಮಿ ಎಂದರ್ಥ. ಸಮೃದ್ಧಿ ಹಾಗೂ ದೈವಿಕ ರೂಪವಾದ ಲಕ್ಷ್ಮಿಯನ್ನು ಪೂಜಿಸುವ ಸುದಿನವಾಗಿದ್ದು, ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತಾಚರಣೆ ಮಾಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದಲ್ಲಿ ಈ ದಿನ ಬಹಳ ವಿಶೇಷ ಮಹತ್ವ ನೀಡಲಾಗಿದ್ದು, ಈ ದಿನ ನೀವು ಮಾಡುವ ಈ ಕೆಲವು ತಪ್ಪುಗಳಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ವ್ರತಾಚರಣೆಯ ವೇಳೆ ಈ ಕೆಲವು ತಪ್ಪುಗಳು ನಿಮ್ಮಿಂದ ಅಪ್ಪಿತಪ್ಪಿಯೂ ಆಗದಂತೆ ನೋಡಿಕೊಳ್ಳಿ.
ಹಿಂದೂ ಧರ್ಮದ ಪ್ರಕಾರವಾಗಿ ಸಂಪತ್ತಿನ ದೇವತೆಯಾಗಿ ಲಕ್ಷ್ಮಿದೇವಿಯನ್ನು ಆರಾಧಿಸಲಾಗುತ್ತದೆ. ಹೀಗಾಗಿ ವರಮಹಾಲಕ್ಷ್ಮಿ ವ್ರತ (Varamahalakshmi Vrata)ಆಚರಣೆಗೆ ವಿಶೇಷ ಮಹತ್ವವನ್ನು ನೀಡಲಾಗಿದ್ದು, ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದ ಶುಕ್ರವಾರದಂದು ಆಚರಿಸಲಾಗುವುದು ವಾಡಿಕೆ. ಆದರೆ ಈ ವರ್ಷ ಆಗಸ್ಟ್ 8ರಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಸುಮಂಗಲಿಯರು ಬಹಳ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಕೂರಿಸಿ ಶಾಸ್ತ್ರಬದ್ಧವಾಗಿ ಪೂಜಿಸುತ್ತಾರೆ. ಆದರೆ ಈ ವರಮಹಾಲಕ್ಷ್ಮಿ ಹಬ್ಬ ಅಥವಾ ವ್ರತದ ದಿನ ಈ ತಪ್ಪುಗಳನ್ನು ಮಾಡಲೇಬಾರದು ಎನ್ನಲಾಗುತ್ತದೆ, ಆ ಕುರಿತಾದ ಮಾಹಿತಿ ಇಲ್ಲಿದೆ.
ವರಮಹಾಲಕ್ಷ್ಮಿ ಹಬ್ಬದ ದಿನ ಈ ತಪ್ಪುಗಳು ನಿಮ್ಮಿಂದ ಆಗದಿರಲಿ:
ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆ ಮಾಡುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಇಡಬಾರದು.
ವರಮಹಾಲಕ್ಷ್ಮಿ ಮರದ ಕುರ್ಚಿ ಮೇಲೆ ಕೂರಿಸಿ. ಅಪ್ಪಿತಪ್ಪಿಯೂ ಕಬ್ಬಿಣದ ಕುರ್ಚಿ ಮೇಲೆ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಬೇಡಿ.
ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಹೂವುಗಳು ಹಾಗೂ ಹಣ್ಣುಗಳನ್ನು ಬಳಸಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬೇಡಿ.
ಕಲಶವಿಟ್ಟು ಪೂಜೆ ಮಾಡುವ ಪದ್ಧತಿ ನಿಮ್ಮ ಮನೆಯಿಲ್ಲದ್ದರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ. ಲಕ್ಷ್ಮಿ ಫೋಟೋಗೆ ಪೂಜೆ ಮಾಡಿದರೂ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
ನೀವೇನಾದ್ರೂ ಕಲಶವಿಟ್ಟು ಪೂಜೆ ಮಾಡುತ್ತೀರಿ ಅಂತಾದರೆ ತ್ರಾಮದ ಕಲಶವನ್ನು ಬಳಸುವುದು ಸೂಕ್ತ. ಪೂಜೆಯ ವೇಳೆ ಮನಸ್ಸು ಶುದ್ಧವಾಗಿರಲಿ, ಕೆಟ್ಟ ಆಲೋಚನೆಗಳನ್ನು ಮಾಡಬೇಡಿ.
ಈ ವ್ರತಾಚರಣೆಗೆ ಸಾಲವಾಗಿ ತಂದ ಹಣವನ್ನಾಗಲಿ ಹಾಗೂ ಆಭರಣಗಳನ್ನು ಬಳಸಬೇಡಿ. ಇದರಿಂದ ಲಕ್ಷ್ಮಿ ದೇವಿಯೂ ಮುನಿಸಿಕೊಳ್ಳುತ್ತಾಳೆ. ತುಕ್ಕು ಹಿಡಿದ ಆಭರಣಗಳನ್ನು ಎಂದಿಗೂ ಬಳಸುವುದು ತಪ್ಪಿಸಿ.